ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ; ಮಳೆಗೆ ಮನೆಗೆ ನುಗ್ಗಿದ ಚರಂಡಿ ನೀರು, ತಡರಾತ್ರಿ ಪ್ರತಿಭಟನೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 06; ಶನಿವಾರ ಕಳೆದ ರಾತ್ರಿ ಎರಡು ಗಂಟೆಗಳಿಗೂ ಹೆಚ್ಚು ಸಮಯ ಸುರಿದ ಧಾರಕಾರ ಮಳೆಗೆ ಚರಂಡಿ ಹಾಗೂ ಮಳೆಯ ನೀರು ಮನೆಗಳಿಗೆ ನುಗ್ಗಿ ಗ್ರಾಮದ ಜನರು ಹೈರಾಣದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ತಿಟ್ಟಮಾರನಹಳ್ಳಿ ನಡೆದಿದೆ. ತಡರಾತ್ರಿಯೇ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಸಮರ್ಪಕ ಚರಂಡಿ ನಿರ್ವಹಣೆ ಮಾಡದ ಕಾರಣ ಮಳೆ ನೀರು ಸರಾಗವಾಗಿ ಹರಿಯದೇ ಮನೆಗಳಿಗೆ ನುಗ್ಗಿ ಗ್ರಾಮಸ್ಥರು ಇಡೀ ರಾತ್ರಿ ಜಾಗರಣೆ ಮಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮದ ಮುಕ್ಕಾಲು ಭಾಗದ ಚರಂಡಿ ಹಾಗೂ ಮಳೆ ನೀರು ಹರಿದುಬಂದು ಗ್ರಾಮದ ಮುಂಭಾಗವಿರುವ ಕೋಡಿಹಳ್ಳವನ್ನು ಸೇರುತಿತ್ತು. ಆದರೆ ಕೆಲದಿನಗಳ ಹಿಂದೆ ಚರಂಡಿ ಪಕ್ಕದ ನಿವೇಶನದಾರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೂರ್ತಿ ಎಂಬುವವರು ತಮ್ಮ ನಿವೇಶನದ ಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಚರಂಡಿ ನಿರ್ಮಿಸದ ಕಾರಣ ನೀರು ಮನೆಗಳಿಗೆ ನುಗ್ಗಿದೆ.

 ರಾಮನಗರ: ಅಕಾಲಿಕ ಮಳೆಗೆ ನಲುಗಿದ ರೈತರು, 27 ಕೋಟಿ ರೂ. ಮೌಲ್ಯದ ಬೆಳೆ ನಷ್ಟ ರಾಮನಗರ: ಅಕಾಲಿಕ ಮಳೆಗೆ ನಲುಗಿದ ರೈತರು, 27 ಕೋಟಿ ರೂ. ಮೌಲ್ಯದ ಬೆಳೆ ನಷ್ಟ

ಮಳೆ ನೀರು ನಿವೇಶನ ಕೊರೆಯುತ್ತಿದೆ ಎಂಬ ಕಾರಣಕ್ಕೆ ಸರ್ಕಾರಿ ಚರಂಡಿಯನ್ನು ಮಣ್ಣು ಹಾಕಿ ಮುಚ್ಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಂದಿನಿಂದ ಗ್ರಾಮದ ಚರಂಡಿ ಹಾಗೂ ಮಳೆಯ ನೀರು ಹರಿದು ಹೋಗಲು ಸಾಧ್ಯವಾಗದೆ, ರಸ್ತೆಯಲ್ಲಿ ಹರಿಯುತ್ತಿತು. ಇದರಿಂದಾಗಿ ಇದೇ ಜಾಗದಲ್ಲಿರುವ ಸೇತುವೆಗೂ ಹಾನಿ ಉಂಟಾಗಿತ್ತು.

ರಾಮನಗರ; ಭಾರೀ ಮಳೆ, ಜೀವ ಕಳೆ ಪಡೆದ ಕಣ್ವ ನದಿ ರಾಮನಗರ; ಭಾರೀ ಮಳೆ, ಜೀವ ಕಳೆ ಪಡೆದ ಕಣ್ವ ನದಿ

ಗ್ರಾಮಸ್ಥರ ಪ್ರತಿಭಟನೆಯ ವಿಚಾರ ತಿಳಿದ ತಹಶೀಲ್ದಾರ್ ಎಲ್. ನಾಗೇಶ್ ತಡರಾತ್ರಿ 11 ಗಂಟೆಗೆ ಗ್ರಾಮಕ್ಕೆ ಭೇಟಿಕೊಟ್ಟು, ಮುಚ್ಚಿರುವ ಚರಂಡಿ ಹಾಗೂ ನೀರು ನುಗ್ಗಿರುವ ಮನೆಗಳನ್ನು ಪರಿಶೀಲಿಸಿದರು. ಸಮಸ್ಯೆ ಪರಿಹಾರ ಆಗುವ ತನಕ ಸುರಿವ ಮಳೆಯನ್ನೂ ಲೆಕ್ಕಿಸದೇ ಸ್ಥಳದಲ್ಲಿಯೇ ಇದ್ದು, ಗ್ರಾಮಸ್ಥರ ಸಮಸ್ಯೆ ಬಗೆಹರಿಸಿದರು. ತಹಶೀಲ್ದಾರ್ ನಾಗೇಶ್ ಕರ್ತವ್ಯಕ್ಕೆ ತಿಟ್ಟಮಾರನಹಳ್ಳಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

ರಾಮನಗರ: ನೀರಿನ ರಭಸಕ್ಕೆ ಕೊಚ್ಚಿಹೋದ ಮೆಳೇಹಳ್ಳಿ ಸೇತುವೆ; ಸಂಕಷ್ಟದಲ್ಲಿ 7 ಗ್ರಾಮಗಳ ಜನತೆ ರಾಮನಗರ: ನೀರಿನ ರಭಸಕ್ಕೆ ಕೊಚ್ಚಿಹೋದ ಮೆಳೇಹಳ್ಳಿ ಸೇತುವೆ; ಸಂಕಷ್ಟದಲ್ಲಿ 7 ಗ್ರಾಮಗಳ ಜನತೆ

ಮನೆಗಳಿಗೆ ನುಗ್ಗಿದ ಚರಂಡಿ ನೀರು

ಮನೆಗಳಿಗೆ ನುಗ್ಗಿದ ಚರಂಡಿ ನೀರು

ಚರಂಡಿ ಮುಚ್ಚಿದ ಹಿನ್ನೆಲೆಯಲ್ಲಿ ಕೆಲದಿನಗಳ ಹಿಂದೆ ಸುರಿದ ಬಾರಿ ಮಳೆಯಿಂದಾಗಿ ನೀರು ರಸ್ತೆ ಪಕ್ಕದಲ್ಲಿನ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಠಿಸಿತ್ತು. ಮಳೆ ನೀರು ಚರಂಡಿ ನೀರಿನೊಂದಿಗೆ ಬೆರತು ಮನೆಗಳಿಗೆ ನುಗಿದ್ದರಿಂದ ಬೇಸತ್ತ ತಿಟ್ಟಮಾರನಹಳ್ಳಿ ಗ್ರಾಮಸ್ಥರು ತಡ ರಾತ್ರಿ ಚನ್ನಪಟ್ಟಣ-ಕುಣಿಗಲ್ ಮುಖ್ಯರಸ್ತೆಯನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು‌.

ಅಧಿಕಾರಿಗಳ ವಿರುದ್ಧ ಆಕ್ರೋಶ

ಅಧಿಕಾರಿಗಳ ವಿರುದ್ಧ ಆಕ್ರೋಶ

ಗ್ರಾಮದ ನಿವಾಸಿಗಳು ಚರಂಡಿ ಮುಚ್ಚಿರುವುದರಿಂದ ಉಂಟಾಗುತ್ತಿರುವ ಸಮಸ್ಯೆ ಹಾಗೂ ಶತಮಾನದ ಸೇತುವೆಗೆ ಎದುರಾಗಿರುವ ಕಂಟಕದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮನವರಿಕೆ ಮಾಡಿಕೊಟ್ಟಿದ್ದರು. ಇದಲ್ಲದೇ ಮಾಧ್ಯಮಗಳ ಮೂಲಕ ಗಮನ ಸೆಳೆದಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಶನಿವಾರ ಮಳೆಯಾದ ಕಾರಣ ಮತ್ತೆ ನೀರು ಗ್ರಾಮದ ಮುಂಭಾಗವಿರುವ ಹಲವು ಮನೆಗಳಿಗೆ ನುಗ್ಗಿತು.ರೊಚ್ಚಿಗೆದ್ದ ಗ್ರಾಮಸ್ಥರು ಸುರಿವ ಮಳೆಯಲ್ಲೇ ಚನ್ನಪಟ್ಟಣ-ಕುಣಿಗಲ್ ಮುಖ್ಯರಸ್ತೆಗೆ ಕಲ್ಲುಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.

ವಾಹನ ಸಂಚಾರ ಅಸ್ತವ್ಯಸ್ಥ

ವಾಹನ ಸಂಚಾರ ಅಸ್ತವ್ಯಸ್ಥ

‌‌‌‌‌ಚರಂಡಿ ಮುಚ್ಚಿ ಹಲವು ದಿನಗಳಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸುತ್ತಿಲ್ಲ. ಮುಚ್ಚಿರುವ ಚರಂಡಿ ತೆರವುಗೊಳಿಸದೆ ಜಾಣ ಕುರುಡುತನ ಪ್ರದರ್ಶಿಸುತಿದ್ದಾರೆ. ಇದರಿಂದ ಕಲುಷಿತ ನೀರು ನಮ್ಮ ಮನೆಗಳಿಗೆ ನುಗ್ಗುತ್ತಿದೆ. ಸ್ಥಳಕ್ಕೆ ಅಧಿಕಾರಿಗಳು ಬಂದು ಮುಚ್ಚಿರುವ ಚರಂಡಿ ತೆರವುಗೊಳಿಸುವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಜನರು ಪಟ್ಟು ಹಿಡಿದರು. ರಾತ್ರಿ 10 ಗಂಟೆಗೆ ಆರಂಭವಾದ ಈ ರಸ್ತೆ ತಡೆಯಿಂದಾಗಿ ಈ ಭಾಗದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳಕ್ಕೆ ಪೊಲೀಸರು, ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಅಧಿಕಾರಿಗಳು ಆಗಮಿಸಿ, ಬೆಳಗ್ಗೆ ತೆರವುಗೊಳಿಸುತ್ತೇವೆ ಎಂದು ಮನವೊಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಜನರ ಹೃದಯಗೆದ್ದ ತಹಶೀಲ್ದಾರ್

ಜನರ ಹೃದಯಗೆದ್ದ ತಹಶೀಲ್ದಾರ್

ಗ್ರಾಮಸ್ಥರ ಪ್ರತಿಭಟನೆಯ ವಿಚಾರ ತಿಳಿದ ತಹಶೀಲ್ದಾರ್ ಎಲ್. ನಾಗೇಶ್ ತಡರಾತ್ರಿ 11 ಗಂಟೆಗೆ ಗ್ರಾಮಕ್ಕೆ ಭೇಟಿಕೊಟ್ಟು, ಮುಚ್ಚಿರುವ ಚರಂಡಿ ಹಾಗೂ ನೀರು ನುಗ್ಗಿರುವ ಮನೆಗಳನ್ನು ಪರಿಶೀಲಿಸಿದರು. ಸಮಸ್ಯೆಯನ್ನು ಕಣ್ಣಾರೆ ಕಂಡು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡರು. ಸಮಸ್ಯೆಯ ಬಗ್ಗೆ ಮಾಹಿತಿ ಇದ್ದರೂ, ನಿಮ್ಮ ಇಲಾಖೆಗೆ ಸೇರುವ ಈ ಚರಂಡಿಯನ್ನು ಏಕೆ ತೆರವುಗೊಳಿಸಿಲ್ಲ?, ನಿಮ್ಮ ನಿರ್ಲಕ್ಷ್ಯದಿಂದ ಇಲ್ಲಿನ ಜನತೆ ಸಮಸ್ಯೆ ಅನುಭವಿಸುವಂತಾಗಿದೆ. ಕೂಡಲೇ ಸ್ಥಳಕ್ಕೆ ಬಂದು ಸಮಸ್ಯೆ ಸರಿಪಡಿಸಲು ತಾಕೀತು ಮಾಡಿದರು. ಗ್ರಾಮಸ್ಥರ ಸಮಸ್ಯೆ ಇತ್ಯರ್ಥ ಆಗುವ ತನಕ ನಾನು ಇಲ್ಲೇ ಇರುತ್ತೇನೆ ಎಂದರು. ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಪಿಡಿಓಗೆ ಜೆಸಿಬಿ ಯಂತ್ರದ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಮಳೆ ಬಂದರೆ ಆಗುವ ಅನಾಹುತದ ಬಗ್ಗೆ ತಿಳಿದು ಸುರಿವ ಮಳೆಯನ್ನು ಲೆಕ್ಕಿಸದೇ ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿ ನಿಂತು ಮುಚ್ಚಿರುವ ಚರಂಡಿಯನ್ನು ತೆರವುಗೊಳಿಸಿದರು.

ಜನರ ಮಚ್ಚುಗೆಗಳಿಸಿದ ತಹಿಶೀಲ್ದಾರ್

ಜನರ ಮಚ್ಚುಗೆಗಳಿಸಿದ ತಹಿಶೀಲ್ದಾರ್

ಜನರ ಸಮಸ್ಯೆಗಳು ಎಂದರೆ ಜಾಣಕುರುಡು ಪ್ರದರ್ಶಿಸುವ ಅಧಿಕಾರಿಗಳೇ ಹೆಚ್ಚು. ಆದರೆ, ಸಮಸ್ಯೆ ಎಂದ ಕೂಡಲೇ ಸುರಿವ ಮಳೆ ಹಾಗೂ ರಾತ್ರಿ ಎನ್ನುವುದನ್ನು ಲೆಕ್ಕಿಸದೇ ಸ್ಥಳಕ್ಕೆ ಧಾವಿಸಿ ಸಮಸ್ಯೆ ಪರಿಹರಿಸಿಕೊಟ್ಟ ತಹಶೀಲ್ದಾರ್ ನಾಗೇಶ್ ದಕ್ಷತೆ ಹಾಗೂ ಕರ್ತವ್ಯ ನಿಷ್ಠೆಗೆ ತಿಟ್ಟಮಾರನಹಳ್ಳಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ಜೆಸಿಬಿ ಯಂತ್ರ ಕೆಲಸ ಆರಂಭಿಸಿದ ತಕ್ಷಣವೇ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ಕಾವ್ಯಾ, ಗ್ರಾಮ ಲೆಕ್ಕಿಗ ಮಂಜು ತಹಶೀಲ್ದಾರ್‌ಗೆ ಹೊರಡಿ ಸರ್ ನಾವು ಕೆಲಸ ಪೂರ್ಣಗೊಳಿಸುತ್ತೇವೆ ಎಂದು ಕೇಳಿಕೊಂಡರೂ, ಕೆಲಸ ಮುಗಿಯುವವರೆಗೂ ಸ್ಥಳದಲ್ಲಿಯೇ ಅವರು ಇದ್ದರು.

Recommended Video

Omicron Alert : ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಸೌತ್ ಆಫ್ರಿಕಾದ‌ 10 ಮಂದಿ | Oneindia Kannada

English summary
After heavy rain in Ramanagara district Chennapatna taluk Tittamaranahalli village rainwater entered houses. Tahsildar visited the spot at late night after villagers protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X