• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಬ್ಬರು ವಿದೇಶಿಗರು ಸಹಿತ ನಾಲ್ವರು ವಶಕ್ಕೆ, 3 ಕೋಟಿ ಮೌಲ್ಯದ ಗಾಂಜಾ ಜಪ್ತಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ‌, ಸೆಪ್ಟೆಂಬರ್ 28: ತಾನು ವಾಸ ಮಾಡುತ್ತಿದ್ದ ಐಷಾರಾಮಿ ವಿಲ್ಲಾದಲ್ಲಿ ಗಾಂಜಾ ಬೆಳೆಸಿದ್ದ ಇಬ್ಬರು ವಿದೇಶಿಗರು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಕೋಟ್ಯಂತರ ರೂ. ಮೌಲ್ಯ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳುವ ಮೂಲಕ ಭರ್ಜರಿ ಬೇಟೆಯಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸೋಮವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇರಾನಿ ಮೂಲದ ಗಾಂಜಾ ಬೆಳೆಗಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಮನಗರದ ಬಿಡದಿ ಈಗಲ್‌ಟನ್ ರೆಸಾರ್ಟ್ ಪಕ್ಕದ ವಿಲ್ಲಾದಲ್ಲಿ ಬೆಳೆದಿದ್ದ ಹೈಡ್ರೋ ಗಾಂಜಾವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಜಾವಿದ್ ರುಸ್ತಂ ಪುರಿ (36) ವರ್ಷದ ಇರಾನಿ ಮೂಲದ ವ್ಯಕ್ತಿಯಾಗಿದ್ದು, ಈತನನ್ನು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಬಂಧಿಸಿದ್ದಾರೆ.

ಸುಮಾರು 150ಕ್ಕೂ ಹೆಚ್ಚು ಹೈಡ್ರೋ ಗಾಂಜಾ ಗಿಡಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿ ಕಳೆದ ಒಂದೂವರೆ ವರ್ಷದಿಂದ ಈಗಲ್‌ಟನ್ ರೆಸಾರ್ಟ್‌ನ ವಿಲ್ಲಾದೆಲ್ಲೇ ಟೆರೇಸ್ ಹಾಗೂ ಗ್ರೀನ್ ರೂಂ ಹೌಸ್ ನಿರ್ಮಾಣ ಮಾಡಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಎನ್ನಲಾಗಿದೆ.

ಆರೋಪಿ ಜಾವಿದ್ ರುಸ್ತುಂ ಪುರಿ ಆನ್‌ಲೈನ್ ಮುಖಾಂತರ ಸೀಡ್ಸ್ ತರಿಸಿ ಇಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಎನ್ನಲಾಗಿದ್ದು, ಪೊಲೀಸರು ವಶಪಡಿಸಿಕೊಂಡಿರುವ ಹೈಡ್ರೋ ಗಾಂಜಾ ಮತ್ತು ಕೆಮಿಕಲ್ ಸುಮಾರು ಮೂರು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ್ದು ಎಂದು ಹೇಳಲಾಗುತ್ತಿದೆ.

ಈಗಲ್‌ಟನ್ ರೆಸಾರ್ಟ್ ನಿರ್ಮಾಣ ಮಾಡಿರುವ ಐಷಾರಾಮಿ ವಿಲ್ಲಾಗಳಲ್ಲಿ ಬಹುತೇಕ ಪ್ರತಿಷ್ಠಿತ ವಕ್ತಿಗಳು ಹಾಗೂ ಉನ್ನತ ಅಧಿಕಾರಿಗಳು ವಾಸ ಮಾಡುವ ವಿಲ್ಲಾಗಳಲ್ಲಿ ಗಾಂಜಾ ಬೆಳೆದರೆ ಯಾರಿಗೂ ತಿಳಿಯುವುದಿಲ್ಲ ಎಂದು ಆರೋಪಿ ಐಷಾರಾಮಿ ವಿಲ್ಲಾದಲ್ಲಿ ಗಾಂಜಾ ಬೇಸಾಯ ಮಾಡಿದ್ದಾನೆ. ಇದೇ ವಿಲ್ಲಾಗಳ ಸಮೀಪವೇ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಳಿದುಕೊಂಡಿರುವ ವಿಲ್ಲಾ ಕೂಡ ಇದೆ.

CCB Arrest 4 Persons Including 2 Iranian Who Grew Hydro Ganja In A Villa Near Bidadi

ಮತ್ತೆ ಮೂವರ ಬಂಧನ
ಈಗಲ್ಟನ್ ರೆಸಾರ್ಟ್ ಮೇಲೆ ಸಿಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಇರಾನಿ ವಿದೇಶಿ ಪ್ರಜೆ ಸೇರಿ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ ಇಬ್ಬರು ಇರಾನ್ ಪ್ರಜೆಗಳು ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಬೆಂಗಳೂರು ನಗರದಲ್ಲಿ ನೆಲೆಸಿದ್ದರು.

ಆರೋಪಿಗಳು ಡಾರ್ಕ್ ವೆಬ್‌ಸೈಟ್‌ನಲ್ಲಿ ಹೈಡ್ರೋ ಗಾಂಜಾ ಬೀಜಗಳನ್ನು ತರಿಸಿಕೊಳ್ಳುತ್ತಿದ್ದರು. ಈಗಲ್ಟನ್ ರೆಸಾರ್ಟ್ ವಿಲ್ಲಾದಲ್ಲಿ ಹೈಡ್ರೋ ಗಾಂಜಾ ಪ್ಲಾಂಟ್ಸ್ ಬೆಳೆಸಿದ್ದರು. ಸೆಪ್ಟೆಂಬರ್ 26 ರಂದು ಡಿ.ಜೆ. ಹಳ್ಳಿಯ ಕಾವೇರಿ ನಗರದಲ್ಲಿ ಸಿಸಿಬಿ ದಾಳಿ ನಡೆಸಿತ್ತು. ದಾಳಿ ವೇಳೆ ಎಲ್‌ಎಸ್‌ಡಿ ಹೈಡ್ರೋ ಗಾಂಜಾ ಸಮೇತ ಸಿಸಿಬಿ ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸೆಪ್ಟೆಂಬರ್ 27ರಂದು ಬಿಡದಿಯ ಈಗಲ್ಟನ್ ವಿಲೇಜ್ ವಿಲ್ಲಾ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಆಗ ಮತ್ತಿಬ್ಬರು ಆರೋಪಿಗಳು ಸಿಸಿಬಿ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಮತ್ತೊಂದೆಡೆ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು ಹಾಗೂ ಉದ್ಯಮಿಗಳಿಗೆ ಸಿಂಥೆಟಿಕ್ ಡ್ರಗ್ ಹಾಗೂ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದರು. ಸದ್ಯ ಬಂಧಿತರಿಂದ 130 ಹೈಡ್ರೋ ಗಾಂಜಾ ಗಿಡಗಳು, ಯುವಿ ಲೈಟ್ಸ್, ಎಲ್‌ಇಡಿ ಲ್ಯಾಂಪ್ಸ್, ಎಲೆಕ್ಟ್ರಿಕಲ್ ವೆಯ್ಟಿಂಗ್ ಮಷಿನ್, 1 ಕೋಟಿ ಬೆಲೆಯ 12 ಕೆಜಿ 850 ಗ್ರಾಂ ತೂಕದ ಹೈಡ್ರೋ ಗಾಂಜಾ, ಒಂದು ಸ್ಕೋಡಾ ಕಾರು, 4 ಮೊಬೈಲ್ ವಶಕ್ಕೆ ಪಡೆಯಲಾಗಿದೆ.

   ಅಷ್ಟೊಂದು ವಿಮಾನ ಪ್ರಯಾಣ ಮಾಡಿದ್ರೂ ಮೋದಿಗೆ ಸುಸ್ತಾಗೋದಿಲ್ಲ ಯಾಕೆ? | Oneindia Kannada

   ಬಂಧಿತರ ಪೈಕಿ ಇರಾನಿ ಮೂಲದ ಜಾವೀದ್ ರುಸ್ತುಂ ವಿರುದ್ಧ ಈ‌ ಹಿಂದೆ ಯಶವಂತಪುರ ಠಾಣೆಯಲ್ಲಿ ಎರಡು ಪ್ರಕರಣಗಳಿವೆ. ಬಂಧಿತ ನಾಲ್ವರ ವಿರುದ್ಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   English summary
   CCB arrest 4 persons including 2 Iranian who grew hydro ganja in a villa near bidadi and sold it. Cops seize 1 crore worth hybrid ganja.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X