ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ, ಚನ್ನಪಟ್ಟಣಕ್ಕೆ ಕಾವೇರಿ ನೀರು ಸ್ಥಗಿತ

|
Google Oneindia Kannada News

ರಾಮನಗರ, ಡಿಸೆಂಬರ್ 12: ರಾಮನಗರ ಹಾಗೂ ಚನ್ನಪಟ್ಟಣಕ್ಕೆ ಎರಡು ದಿನಗಳ ಕಾಲ ಕಾವೇರಿ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ.

ನೀರು ಸರಬರಾಜು ಮಾಡುವ ಮಾರ್ಗದ ಪೈಪ್ ಲೈನ್‍ನಲ್ಲಿ ದೋಷ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಕಾವೇರಿ ನೀರು ಸರಬರಾಜು ಸ್ಥಗಿತಗೊಳಿಸಲಾಗುತ್ತದೆ ಎಂದು ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ತಿಳಿಸಿದೆ.

ತಮಿಳುನಾಡಿಗೆ ಕೇಳಿದ್ದಷ್ಟು ಕಾವೇರಿ ನೀರು ಹರಿಸಲಿದೆ ಕರ್ನಾಟಕ ತಮಿಳುನಾಡಿಗೆ ಕೇಳಿದ್ದಷ್ಟು ಕಾವೇರಿ ನೀರು ಹರಿಸಲಿದೆ ಕರ್ನಾಟಕ

ರಾಮನಗರ ಹಾಗೂ ಚನ್ನಪಟ್ಟಣ ನಗರಗಳಿಗೆ ಹಲಗೂರು ಸಮೀಪದ ತೊರೆಕಾಡನಹಳ್ಳಿಯಿಂದ ಕಾವೇರಿ ನೀರನ್ನು ಕುಡಿಯುವುದಕ್ಕಾಗಿ ಪ್ರತಿನಿತ್ಯ ಸರಬರಾಜು ಮಾಡಲಾಗುತ್ತಿತ್ತು. ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಈಗ ಐದು ದಿನ ಅಥವಾ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು. ಈಗ ಅದರಲ್ಲೂ ವ್ಯತ್ಯಯ ಉಂಟಾಗಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.

Cauvery Water Supply Stopped For Ramnagar And Channapatna

ತೊರೆಕಾಡನಹಳ್ಳಿಯ ಬಿಡಬ್ಲ್ಯೂಎಸ್‍ಎಸ್‌ಬಿ ಆವರಣದ ಹತ್ತಿರ ಕುಡಿಯುವ ನೀರು ಸರಬರಾಜು ಮಾಡುವ 600 ಮಿಮಿ ವ್ಯಾಸದ ಪಿಎಸ್ಪಿ ಏರು ಕೊಳವೆಯ ಮಾರ್ಗದಲ್ಲಿ ಅಧಿಕವಾಗಿ ನೀರು ಸೋರಿಕೆಯಾಗುತ್ತಿದೆ.

ಇದನ್ನು ಸರಿಪಡಿಸುವ ಹಿನ್ನೆಲೆಯಲ್ಲಿ ದುರಸ್ಥಿ ಕಾರ್ಯ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 12 ರಂದು ದಿನಗಳ ಕಾಲ ಚನ್ನಪಟ್ಟಣ ನಗರ ಪ್ರದೇಶಕ್ಕೆ ಹಾಗೂ ರಾಮನಗರ ನಗರ ಪ್ರದೇಶಗಳಿಗೆ ನೀರು ಸರಬರಾಜು ಮಾಡದಿರಲು ಕ್ರಮ ಕೈಗೊಳ್ಳಲಾಗಿದೆ.

English summary
Cauvery water supply to Ramanagar and Channapatna has been cut off for two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X