ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಸಿ.ಪಿ.ಯೋಗೇಶ್ವರ್!

By ರಾಮನಗರ ಪ್ರತಿನಿಧಿ
|
Google Oneindia Kannada News

Recommended Video

Karnataka Elections 2018 : ಕಾಂಗ್ರೆಸ್ ನಲ್ಲಿ ಗೊಂದಲ ಹುಟ್ಟಿಸಿದ ಸಿ ಪಿ ಯೋಗೇಶ್ವರ್ ನಡೆ| Oneindia Kannada

ರಾಮನಗರ, ಏಪ್ರಿಲ್ 22: ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟು, ಕಮಲ ಪಾಳಯಕ್ಕೆ ಜಿಗಿದಿದ್ದ ಸಿ.ಪಿ.ಯೋಗೇಶ್ವರ್ ಹಳೆ ಮೈಸೂರು ಪ್ರಾಂತ್ಯದಲ್ಲಿ ಕಮಲ ಅರಳಿಸುವ ಮಾತನಾಡಿದ್ದರು. ಆದರೆ ಚುನಾವಣೆಗೆ ಮೊದಲೇ ಚನ್ನಪಟ್ಟಣ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ ಎನ್ನುವ ವಂದತಿ ಹಬ್ಬಿದೆ.

ಹೌದು, ಈಗಾಗಲೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದ ಸಿ.ಪಿ.ಯೋಗೇಶ್ವರ್, ಮಂಡ್ಯ ಮತ್ತು ಮದ್ದೂರು ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರನ್ನು ಮಣಿಸಲು ಬಂಡಾಯ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಯೋಗೇಶ್ವರ್ ಮಾತು ಉಳಿಸಿಕೊಳ್ಳದ ವಚನಭ್ರಷ್ಟ ಎಂದ ಡಿಕೆಶಿಯೋಗೇಶ್ವರ್ ಮಾತು ಉಳಿಸಿಕೊಳ್ಳದ ವಚನಭ್ರಷ್ಟ ಎಂದ ಡಿಕೆಶಿ

ಬಿಜೆಪಿ ಅಭ್ಯರ್ಥಿಯಾದರೆ ಅಲ್ಪಸಂಖ್ಯಾತ ಮುಸ್ಲಿಂ ಮತಗಳು ಮತ್ತು ಅಹಿಂದ ಮತಗಳು ದೊರೆಯುವುದು ಅನುಮಾನ. ಒಂದು ವೇಳೆ ಪಕ್ಷೇತರವಾಗಿ ಚುನಾವಣಾ ಕಣಕ್ಕಿಳಿದರೆ ಮುಸ್ಲಿಂ ಮತ್ತು ಅಹಿಂದ ಮತಗಳು ಕೈಹಿಡಿಯುತ್ತವೆ ಎನ್ನುವ ನಂಬಿಕೆಯಲ್ಲಿದ್ದಾರಂತೆ ಸಿಪಿವೈ.

C.P. Yogeshwar will field as rebellious candidate

2013ರ ವಿಧಾನಸಭಾ ಚುನಾವಣೆಯಲ್ಲೂ ನಾಮಪತ್ರ ಸಲ್ಲಿಸುವ ಕೊನೆಯ ಹಂತದವರೆಗೆ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂಬ ಗುಟ್ಟು ಬಿಟ್ಟುಕೊಡದ, ಅವರ ನಡೆಯನ್ನು ಹತ್ತಿರದಿಂದ ಬಲ್ಲ ಶಾಸಕರ ಆಪ್ತರು ಮತ್ತು ಕಾರ್ಯಕರ್ತರು ಇದೀಗ ಮತ್ತೆ ಗೊಂದಲದಲ್ಲಿದ್ದಾರೆ.

'ಯೋಗೇಶ್ವರ್ ಗೆದ್ದರೆ ಚ.ಪಟ್ಟಣ ಬಸ್ಟ್ಯಾಂಡಲ್ಲಿ ನೇಣು ಹಾಕ್ಕೊಳ್ತೀನಿ''ಯೋಗೇಶ್ವರ್ ಗೆದ್ದರೆ ಚ.ಪಟ್ಟಣ ಬಸ್ಟ್ಯಾಂಡಲ್ಲಿ ನೇಣು ಹಾಕ್ಕೊಳ್ತೀನಿ'

C.P. Yogeshwar will field as rebellious candidate

ಜೆಡಿಎಸ್ ನಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಅಂತೆಯೇ ಕಾಂಗ್ರೆಸ್ ನಿಂದ ಸಾರಿಗೆ ಸಚಿವ ಎಚ್. ಎಂ.ರೇವಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಎರಡು ಪಕ್ಷಗಳಿಂದ ಪ್ರಬಲ ಅಭ್ಯರ್ಥಿಗಳು ಕಣದಲ್ಲಿದ್ದು, ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ.

English summary
According to sources Constituency of Mandya and Maddur BJP candidate C.P.Yogeshwar Supporters do not get ticket. So Yogeshwar will field as rebellious candidate Before that he declared as the the BJP's candidate for the Channapatna constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X