• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಿತಾ ಕುಮಾರಸ್ವಾಮಿ ಪ್ರಮಾಣವಚನ, ಪತಿ-ಪತ್ನಿ ಬರೆಯಲಿದ್ದಾರೆ ಇತಿಹಾಸ

|
   ಅನಿತಾ ಕುಮಾರಸ್ವಾಮಿ ಇಂದು ರಾಮನಗರ ಶಾಸಕಿಯಾಗಿ ಪ್ರಮಾಣವಚನ | Oneindia Kannada

   ಬೆಂಗಳೂರು, ನವೆಂಬರ್ 15: ರಾಮನಗರ ವಿಧಾಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರಿ ಅಂತರದಿಂದ ಗೆದ್ದು ಬಂದ ಅನಿತಾ ಕುಮಾರಸ್ವಾಮಿ ಅವರು ಇಂದು ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

   ವಿಧಾನಸಭಾ ಅಧ್ಯಕ್ಷರ ಕೊಠಡಿಯಲ್ಲಿಯೇ ಅನಿತಾ ಕುಮಾರಸ್ವಾಮಿ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸ್ಪೀಕರ್ ರಮೇಶ್ ಕುಮಾರ್ ಅವರು ಅಧಿಕಾರಿ ಮತ್ತು ಗೌಪ್ಯತೆಯ ಪ್ರಮಾಣವಚನವನ್ನು ಬೋಧಿಸಿದರು.

   ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಪರಿಚಯ

   ಈ ಸಂದರ್ಭದಲ್ಲಿ ವಿಧಾನಸಭಾ ಕಾರ್ಯದರ್ಶಿ ಮೂರ್ತಿ ಹಾಗೂ ರಾಮನಗರದ ಹಲವು ಜೆಡಿಎಸ್ ಮುಖಂಡರು ಸ್ಥಳದಲ್ಲಿ ಹಾಜರಿದ್ದರು. ಅನಿತಾ ಕುಮಾರಸ್ವಾಮಿ ಅವರು ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ಸಿಎಂ ಹಾಗೂ ಅವರ ಪತ್ನಿ ಒಟ್ಟಿಗೆ ವಿಧಾನಸಭೆಗೆ ಬರಲಿದ್ದಾರೆ. ಈ ಹಿಂದೆ ಈ ರೀತಿಯ ಘಟನೆ ಆಗಿಲ್ಲ.

   ಪತ್ನಿ ಜೊತೆ ವಿಧಾನಸಭೆ ಪ್ರವೇಶಿಸಿ ಇತಿಹಾಸ ನಿರ್ಮಿಸಲಿರುವ ಕುಮಾರಸ್ವಾಮಿ!

   ಎಚ್‌ಡಿಕೆ ರಾಜೀನಾಮೆಯಿಂದ ಉಪಚುನಾವಣೆ

   ಎಚ್‌ಡಿಕೆ ರಾಜೀನಾಮೆಯಿಂದ ಉಪಚುನಾವಣೆ

   ಕುಮಾರಸ್ವಾಮಿ ಅವರು ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡೂ ಕ್ಷೇತ್ರದಲ್ಲಿ ಗೆದ್ದರು. ಆ ನಂತರ ಚನ್ನಪಟ್ಟಣ ಉಳಿಸಿಕೊಂಡು ರಾಮನಗರಕ್ಕೆ ರಾಜೀನಾಮೆ ಸಲ್ಲಿಸಿದರು. ಹಾಗಾಗಿ ಇಲ್ಲಿ ಉಪಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧಿಸಿದ್ದರು.

   ಏಕಪಕ್ಷ ಗೆಲುವು ಸಾಧಿಸಿದ ಅನಿತಾ

   ಏಕಪಕ್ಷ ಗೆಲುವು ಸಾಧಿಸಿದ ಅನಿತಾ

   ರಾಮನಗರ ಚುನಾವಣೆ ಅಂಗಳದಲ್ಲಿ ಜೆಡಿಎಸ್‌ ಅನಿತಾ ಕುಮಾರಸ್ವಾಮಿ ಮತ್ತು ಬಿಜೆಪಿಯಿಂದ ಎಲ್.ಚಂದ್ರಶೇಖರ್ ಮಾತ್ರ ಕಣದಲ್ಲಿದ್ದರು. ಆದರೆ ಮತದಾನಕ್ಕೆ ಎರಡು ದಿನ ಇದ್ದಾಗ ಬಿಜೆಪಿ ಅಭ್ಯರ್ಥಿ ಸಹ ಕಣದಿಂದ ಹಿಂದೆ ಸರಿದರು. ಹೀಗಾಗಿ ಅನಿತಾ ಕುಮಾರಸ್ವಾಮಿ ಅವರಿಗೆ ಎದುರಾಳಿಯೇ ಇಲ್ಲದಾಗಿ ಭಾರಿ ಅಂತರದಿಂದ ಗೆಲುವು ಸಾಧಿಸಿದರು.

   ಪತಿಯ ದಾಖಲೆ ಮುರಿದ ಪತ್ನಿ

   ಪತಿಯ ದಾಖಲೆ ಮುರಿದ ಪತ್ನಿ

   ರಾಮನಗರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಅನಿತಾ ಕುಮಾರಸ್ವಾಮಿ ಅವರು ಅವರ ಪತಿ ಕುಮಾರಸ್ವಾಮಿ ಅವರ ದಾಖಲೆಯನ್ನೇ ಅಳಿಸಿಹಾಕಿದ್ದಾರೆ. ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಿಂದ ಗೆದ್ದ ಕುಮಾರಸ್ವಾಮಿ ಅವರ ದಾಖಲೆಯನ್ನು ದೂಳಿಪಟ ಮಾಡಿ 1,25,043 ಮತಗಳನ್ನು ಗಳಿಸಿ ಭಾರಿ ಅಂತರದಿಂದ ಗೆಲುವು ಸಾಧಿಸಿದರು.

   ಸಚಿವ ಸ್ಥಾನ ವರಿಷ್ಠರ ನಿರ್ಧಾರ

   ಸಚಿವ ಸ್ಥಾನ ವರಿಷ್ಠರ ನಿರ್ಧಾರ

   ಪ್ರಮಾಣವಚನ ಸ್ವೀಕಾರದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನಿತಾ ಕುಮಾರಸ್ವಾಮಿ ಅವರು, ಗೆಲ್ಲಿಸಿದ ಮತದಾರರ ಆಶೋತ್ತರಗಳಿಗೆ ಅನುಗುಣವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಸಚಿವ ಸ್ಥಾನದ ಬಗ್ಗೆ ನನಗೆ ಮಾಹಿತಿ ಇಲ್ಲ ಆ ಬಗ್ಗೆ ಪಕ್ಷದ ವರಿಷ್ಠರು ನಿರ್ಣಯಿಸುತ್ತಾರೆ ಎಂದು ಅವರು ಹೇಳಿದರು.

   ಎರಡನೇ ಬಾರಿ ಶಾಸಕಿ

   ಎರಡನೇ ಬಾರಿ ಶಾಸಕಿ

   ಅನಿತಾ ಕುಮಾರಸ್ವಾಮಿ ಅವರು ಇದು ಎರಡನೇ ಬಾರಿ ಶಾಸಕಿ ಆಗಿದ್ದಾರೆ. ಕಳೆದ ಚುನಾವಣೆಯಲ್ಲಿ (2013) ಚನ್ನಪಟ್ಟಣದ ಯೋಗೇಶ್ವರ್ ಅವರ ವಿರುದ್ಧ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದರು. ಈ ಮೊದಲು 2008 ರಲ್ಲಿ ಮಧುಗಿರಿ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದು ಶಾಸಕಿ ಆಗಿದ್ದರು.

   English summary
   CM Kumaraswamy's wife Anitha Kumaraswamy sworn in as MLA today in Vidhan Soudha. Speaker Ramesh Kumar administered oath to Anitha Kumaraswamy. She got elected as MLA from Ramanagara in by election 2018.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X