ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂಬೆಳಿಗ್ಗೆ ರಾಮನಗರದಲ್ಲಿ ಬಾಂಬ್ ಭೀತಿ; ಪಟಾಕಿ ಕಂಡು ಬಾಂಬ್ ಎಂದುಕೊಂಡ ಜನ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್ 16: ರಾಮನಗರದಲ್ಲಿ ಬೆಳ್ಳಂಬೆಳಿಗ್ಗೆ ಮತ್ತೆ ಬಾಂಬ್ ವದಂತಿ ಕೆಲ ಕಾಲ ಆತಂಕ ಸೃಷ್ಟಿಸಿತ್ತು. ರಾಮನಗರದ ರಾಮ್ ಗಡ್ ಹೋಟೆಲ್‌ ಬಳಿ ಬಾಂಬ್ ಇಡಲಾಗಿದೆ ಎಂಬ ವದಂತಿ ಹರಿದಾಡಿದ್ದು, ಸಾರ್ವಜನಿಕರು ಆತಂಕಗೊಂಡಿದ್ದರು.

ಕಾಬೂಲ್ ನಲ್ಲಿ ತಾಲಿಬಾನ್ ಆತ್ಮಹತ್ಯಾ ಬಾಂಬ್ ದಾಳಿ; ಕನಿಷ್ಠ ಹತ್ತು ಮಂದಿ ಸಾವುಕಾಬೂಲ್ ನಲ್ಲಿ ತಾಲಿಬಾನ್ ಆತ್ಮಹತ್ಯಾ ಬಾಂಬ್ ದಾಳಿ; ಕನಿಷ್ಠ ಹತ್ತು ಮಂದಿ ಸಾವು

ಸ್ಥಳಕ್ಕೆ ಐಜೂರು ಪೊಲೀಸರ ಭೇಟಿ ನೀಡಿದ್ದರು. ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು. ಆಗ ಅವು ಆಟಂ ಬಾಂಬ್ ಪಟಾಕಿಗಳು ಎಂದು ತಿಳಿದುಬಂದಿದೆ.

Bomb Rumour In Ramanagar

ರಾತ್ರಿ ಗಣೇಶ ವಿಸರ್ಜನೆ ಸಮಯದಲ್ಲಿ ಈ ಪಟಾಕಿಗಳು ಬಿದ್ದಿದ್ದು, ಬೆಳಿಗ್ಗೆ ಪಟಾಕಿ ನೋಡಿ ಬಾಂಬ್ ಎಂದು ಜನರು ಆತಂಕಕ್ಕೆ ಒಳಗಾಗಿದ್ದರು. ಪೊಲೀಸ್ ಪರಿಶೀಲನೆ ಬಳಿಕ ಅದು ಪಟಾಕಿ ಎಂದು ತಿಳಿದುಬಂದು ಜನರು ನಿರಾಳರಾದರು.

ರಾಮನಗರದಲ್ಲೂ ಹೈ ಅಲರ್ಟ್; ಪ್ರವಾಸಿ ತಾಣ, ಬಸ್ ನಿಲ್ದಾಣಗಳಲ್ಲಿ ತಪಾಸಣೆರಾಮನಗರದಲ್ಲೂ ಹೈ ಅಲರ್ಟ್; ಪ್ರವಾಸಿ ತಾಣ, ಬಸ್ ನಿಲ್ದಾಣಗಳಲ್ಲಿ ತಪಾಸಣೆ

ಯಾವುದೇ ಬಾಂಬ್ ಪತ್ತೆಯಾಗಿಲ್ಲ, ಅದು ಪಟಾಕಿ ಎಂದು ಎಸ್ಪಿ ಅನೂಪ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

English summary
The rumors of a bomb caused anxiety in ramanagar this morning. Rumors have been circulating that a bomb had been placed near the Ram Gad Hotel in Ramanagaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X