ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯು ಜೆಡಿಎಸ್ ಶಾಸಕರಿಗೆ 10 ಕೋಟಿ ಆಮೀಷ ಒಡ್ಡಿದೆ: ಕುಮಾರಸ್ವಾಮಿ

|
Google Oneindia Kannada News

Recommended Video

ಬಿಜೆಪಿ ಪ್ಲ್ಯಾನ್ ಬಿಚ್ಚಿಟ್ಟ ಸಿಎಂ ಕುಮಾರಸ್ವಾಮಿ | Oneindia Kannada

ರಾಮನಗರ, ಜೂನ್ 18: ಕರ್ನಾಟಕ ಬಿಜೆಪಿಯು ಜೆಡಿಎಸ್ ಶಾಸಕರಿಗೆ ಕರೆ ಮಾಡಿ 10 ಕೋಟಿ ರೂಪಾಯಿ ಆಮೀಷ ಒಡ್ಡಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬಿಜೆಪಿಯವರು ನಮ್ಮ ಜೆಡಿಎಸ್ ಶಾಸಕರಿಗೆ ಕರೆ ಮಾಡಿ, 'ನಮ್ಮ ಪಕ್ಷಕ್ಕೆ ಬನ್ನಿ ನಿಮಗೆ 10 ಕೋಟಿ ಕೊಡುತ್ತೇನೆ' ಎಂದು ಹೇಳಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಐಎಂಎ ವಂಚನೆ: ನ್ಯಾಯದ ಭರವಸೆ ನೀಡಿದ ಕುಮಾರಸ್ವಾಮಿ ಐಎಂಎ ವಂಚನೆ: ನ್ಯಾಯದ ಭರವಸೆ ನೀಡಿದ ಕುಮಾರಸ್ವಾಮಿ

ಚನ್ನಪಟ್ಟಣದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಕುಮಾರಸ್ವಾಮಿ, ಈ ಆರೋಪ ಮಾಡಿದ್ದು, ಬಿಜೆಪಿಯ ಆಪರೇಷನ್ ಕಮಲ ಇನ್ನೂ ನಿಂತಿಲ್ಲವೆಂಬುದ ಅನುಮಾನ ಮತ್ತೆ ಶುರುವಾಗಿದೆ.

BJP trying to purchase JDS MLAs, they offer 10 crore to MLAs: Kumaraswamy

ನಿನ್ನೆ ರಾತ್ರಿ ಜೆಡಿಎಸ್‌ನ ಶಾಸಕರಿಗೆ ಬಿಜೆಪಿ ಮುಖಂಡರು ಕರೆ ಮಾಡಿ, ಈಗಾಗಲೇ ಕಾಂಗ್ರೆಸ್-ಜೆಡಿಎಸ್‌ನ ಹತ್ತು ಶಾಸಕರು ನಮ್ಮ ಕಡೆ ಬಂದಿದ್ದಾರೆ, ನೀವು ಬರುವುದಾದರೆ 10 ಕೋಟಿ ಹಣವನ್ನು ನೀವು ಕೇಳಿದ ಕಡೆಗೆ ತಂದು ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಗುಟ್ಟು ಬಯಲು ಮಾಡಿದ್ದಾರೆ.

ಕುಮಾರಸ್ವಾಮಿ ಬಗ್ಗೆ ಆಂಧ್ರ ಹೊಸ ಸಿಎಂ ಜಗನ್ ರೆಡ್ಡಿ ಮೆಚ್ಚುಗೆ ಕುಮಾರಸ್ವಾಮಿ ಬಗ್ಗೆ ಆಂಧ್ರ ಹೊಸ ಸಿಎಂ ಜಗನ್ ರೆಡ್ಡಿ ಮೆಚ್ಚುಗೆ

ಹಣದ ಥೈಲಿ ಹಿಡಿದುಕೊಂಡು ಈ ಸರ್ಕಾರವನ್ನು ಉರುಳಿಸಲು ಕೂತಿದ್ದಾರೆ, ಆದರೆ ಜನರ ಮತ್ತು ದೇವರ ಆಶೀರ್ವಾದದಿಂದ ಸರ್ಕಾರ ಸುಭದ್ರವಾಗಿದೆ. ನಾವು ಐದು ವರ್ಷ ಪೂರೈಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದ ಪ್ರತೀ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು: ಕುಮಾರಸ್ವಾಮಿ ರಾಜ್ಯದ ಪ್ರತೀ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು: ಕುಮಾರಸ್ವಾಮಿ

ಕೆಲವು ದಿನಗಳ ಹಿಂದಷ್ಟೆ ಹೈಕಮಾಂಡ್ ಅನ್ನು ಭೇಟಿ ಮಾಡಿ ಬಂದಿದ್ದ ಯಡಿಯೂರಪ್ಪ ಅವರು ನಾವು ಸರ್ಕಾರ ಉರುಳಿಸುವ ಪ್ರಯತ್ನ ಮಾಡುವುದಿಲ್ಲ ಎಂದಿದ್ದರು, ಆದರೆ ಕುಮಾರಸ್ವಾಮಿ ಹೇಳಿಕೆ ನೋಡಿದರೆ ಆಪರೇಷನ್ ಕಮಲ ತೆರೆ ಮರೆಯಲ್ಲಿ ನಡೆಯುತ್ತಿದೆ ಎಂಬ ಅನುಮಾನ ಮೂಡುತ್ತಿದೆ.

English summary
CM Kumaraswamy said today that, BJP leaders trying to purchase JDS MLAs, they offerd 10 crore to one of our MLAs yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X