ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನಕಪುರ, ಮಾಗಡಿ ಸ್ಥಳೀಯ ಸಂಸ್ಥೆ ಚುನಾವಣೆ; ಖಾತೆ ತೆರೆದ ಕಮಲ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ನವೆಂಬರ್ 14: ಜಿಲ್ಲೆಯಲ್ಲಿ ನಡೆದ ಎರಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕನಕಪುರ ನಗರಸಭೆಯಲ್ಲಿ 26 ವಾರ್ಡ್ ಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಮಾಗಡಿ ಪುರಸಭೆಯಲ್ಲಿ 12 ವಾರ್ಡ್ ಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದೆ.

ಕನಕಪುರ ನಗರಸಭೆಯ 31 ವಾರ್ಡ್ ಗಳಲ್ಲಿ ಅವಿರೋಧವಾಗಿ ಆಯ್ಕೆಗೊಂಡ 7 ಅಭ್ಯರ್ಥಿಗಳು ಸೇರಿದಂತೆ 26 ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.

 ಮೊದಲ ಬಾರಿ ಖಾತೆ ತೆರೆದ ಬಿಜೆಪಿ

ಮೊದಲ ಬಾರಿ ಖಾತೆ ತೆರೆದ ಬಿಜೆಪಿ

ಕನಕಪುರ ನಗರಸಭೆಯ 26 ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿದ್ದರೆ, ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು 4 ವಾರ್ಡ್ ಗಳಲ್ಲಿ ಜಯಶೀಲರಾಗಿದ್ದಾರೆ. ಇನ್ನು ಪ್ರಥಮ ಬಾರಿಗೆ ಬಿಜೆಪಿ ಒಂದು ವಾರ್ಡ್ ನಲ್ಲಿ ಗೆಲ್ಲುವ ಮೂಲಕ ಖಾತೆ ತೆರೆದಿದೆ. ವಾರ್ಡ್ ನಂ 26ರಲ್ಲಿ ಬಿಜೆಪಿ ಅಭ್ಯರ್ಥಿ ಮಾಲತಿ ಗೆಲುವು ಸಾಧಿಸುವ ಮೂಲಕ ಖಾತೆ ತೆರೆದಿದ್ದಾರೆ.

ಡಿಕೆ ಬ್ರದರ್ಸ್ ಅನುಪಸ್ಥಿತಿಯಲ್ಲಿ ಸ್ಥಳೀಯ ಮುಖಂಡರು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಭರ್ಜರಿ ಜಯದೊಂದಿಗೆ ನಗರಸಭೆಯ ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

14 ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ14 ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ

 69.71% ಮತ ಚಲಾವಣೆ

69.71% ಮತ ಚಲಾವಣೆ

ಕನಕಪುರ ನಗರಸಭೆ 31 ವಾರ್ಡ್ ಗಳನ್ನು ಹೊಂದಿದ್ದು ಸುಮಾರು 21,258 ಪುರುಷ ಮತದಾರರು, 22,444 ಮಹಿಳಾ ಮತದಾರರು ಹಾಗೂ 1 ತೃತೀಯ ಲಿಂಗಿ ಸೇರಿದಂತೆ ಒಟ್ಟು 43,603 ಮತದಾರನ್ನು ಹೊಂದಿದೆ. 31 ವಾರ್ಡ್ ಗಳಲ್ಲಿ ಈಗಾಗಲೇ 7 ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇನ್ನುಳಿದ 24 ವಾರ್ಡ್ ಗಳಿಗೆ ನಡೆದ ಮತದಾನದಲ್ಲಿ ಪುರುಷರು 11288 ಮತ್ತು ಮಹಿಳೆಯರು 12005 ಒಟ್ಟು 23295 ಮಂದಿ ಮತದಾರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆ 69.71% ಮತ ಚಲಾವಣೆಗೊಂಡಿತ್ತು.

 ಮಾಗಡಿಯಲ್ಲಿ ಜೆಡಿಎಸ್ ಮೈಲುಗೈ

ಮಾಗಡಿಯಲ್ಲಿ ಜೆಡಿಎಸ್ ಮೈಲುಗೈ

ಮಾಗಡಿ ಪುರಸಭೆಯ 23 ವಾರ್ಡ್ ಗಳಲ್ಲಿ 12 ವಾರ್ಡ್ ಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಜೆಡಿಎಸ್ ಗೆ ತ್ರೀವ ಪೈಪೋಟಿ ನೀಡಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 10 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಬಿಜೆಪಿ ಇಲ್ಲೂ ಒಂದು ವಾರ್ಡ್ ನಲ್ಲಿ ಗೆದ್ದು ಖಾತೆ ತೆರೆದಿದೆ. ಪ್ರಥಮ ಬಾರಿಗೆ 9ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಭಾಗ್ಯಮ್ಮ ನಾರಾಯಣ್ ಗೆಲುವು ಪಡೆದಿದ್ದಾರೆ. ಮಾಗಡಿ ಶಾಸಕ ಎ.ಮಂಜುನಾಥ್ ತಮ್ಮ ಪಕ್ಷದ 12 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಮಾಗಡಿ ಪುರಸಭೆಯ ಆಡಳಿತದ ಚುಕ್ಕಾಣಿ ಹಿಡಿಯುವ ಮೂಲಕ ತಮ್ಮ ಪ್ರಾಬಲ್ಯ ಕಾಯ್ದುಕೊಂಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆ; ಶಾಂತಿಯುತವಾಗಿ ಸಾಗಿದ ಮತದಾನಸ್ಥಳೀಯ ಸಂಸ್ಥೆ ಚುನಾವಣೆ; ಶಾಂತಿಯುತವಾಗಿ ಸಾಗಿದ ಮತದಾನ

 18,951 ಮಂದಿ ಹಕ್ಕು ಚಲಾವಣೆ

18,951 ಮಂದಿ ಹಕ್ಕು ಚಲಾವಣೆ

ಮಾಗಡಿ ಪುರಸಭೆ 23 ವಾರ್ಡ್ ಗಳನ್ನು ಹೊಂದಿದ್ದು 11,786 ಮಹಿಳಾ ಮತದಾರರು, 11,481 ಪುರುಷ ಮತದಾರರು ಮತ್ತು 9 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 23,276 ಮತದಾರಿದ್ದಾರೆ. ಪುರಸಭೆ ಚುನಾವಣೆಯಲ್ಲಿ 81.42% ಶೇಕಡಾವಾರು ಮತದಾನ ನಡೆದಿದ್ದು, ಪುರುಷರು 9431 ಮಂದಿ ಹಾಗೂ ಮಹಿಳೆಯರು 9529 ಒಟ್ಟಾರೆ 18,951 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

English summary
Congress won 26 wards in Kanakapura, JDS won in 12 wards in Magadi local body elections. The BJP opened its account in both kanakapura and magadi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X