ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ಸರಕಾರ ಪತನದ ಹಿಂದಿನ ರಹಸ್ಯ ಬಿಚ್ಚಿಟ್ಟ ಯೋಗೇಶ್ವರ್

|
Google Oneindia Kannada News

ರಾಮನಗರ, ಡಿ 11: ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ಪತನದ ಹಿಂದಿನ ರಹಸ್ಯವನ್ನು ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಬಿಚ್ಚಿಟ್ಟಿದ್ದಾರೆ.

Recommended Video

ಡಿಕೆಶಿ ಹಾಗು ಕುಮಾರಸ್ವಾಮಿ ಕುತಂತ್ರ ಮಾಡಿ ನನ್ನನ್ನು ಸೋಲಿಸಿದರು | CP Yogeshwar | Oneindia Kannada

ಗ್ರಾಮ ಪಂಚಾಯತಿ ಚುನಾವಣೆಯ ಸಂಬಂಧ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಯೋಗೇಶ್ವರ್, "ಕುಮಾರಸ್ವಾಮಿ ಸರಕಾರವನ್ನು ಸ್ಕೆಚ್ ಹಾಕಿ ಪತನಗೊಳಿಸಿದ್ದು ನಾನೇ"ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಕಷ್ಟ ಅನುಭವಿಸುವುದು ಇನ್ನೂ ಬೇಕಾದಷ್ಟಿದೆ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಕಷ್ಟ ಅನುಭವಿಸುವುದು ಇನ್ನೂ ಬೇಕಾದಷ್ಟಿದೆ

"ಕುಮಾರಸ್ವಾಮಿಯವರಿಗೆ ಅಧಿಕಾರವಿಲ್ಲದೇ ಕಷ್ಟದಲ್ಲಿದ್ದಾರೆ, ಇವರು ಮತ್ತು ಡಿ.ಕೆ.ಶಿವಕುಮಾರ್ ಅವರು ಇನ್ನೂ ಕಷ್ಟ ಪಡುವುದು ಬೇಕಾದಷ್ಟಿದೆ. ನಾವೇನೂ ಮಾಡಲು ಸಾಧ್ಯವಿಲ್ಲ" ಎಂದು ಕೆಲವು ದಿನಗಳ ಹಿಂದೆ ಯೋಗೇಶ್ವರ್ ಕಿಡಿಕಾರಿದ್ದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಆತ್ಮೀಯ ಸ್ನೇಹಿತರಂತಿದ್ದ ಡಿಕೆಶಿ ಮತ್ತು ಎಚ್ಡಿಕೆ, ಈಗ ಮತ್ತೆ ಒಬ್ಬರೊನ್ನಬ್ಬರು ಟೀಕಿಸಲು ಪ್ರಾರಂಭಿಸಿದ್ದಾರೆ. ಈ ಬಗ್ಗೆಯೂ, ಸಿಪಿವೈ ವ್ಯಂಗ್ಯವಾಡಿದ್ದಾರೆ.

ಸಹೋದರರಿಬ್ಬರು ಇದನ್ನು ಮೊದಲು ಅರಿತುಕೊಂಡು ರಾಜಕೀಯ ಮಾಡಲಿ

ಸಹೋದರರಿಬ್ಬರು ಇದನ್ನು ಮೊದಲು ಅರಿತುಕೊಂಡು ರಾಜಕೀಯ ಮಾಡಲಿ

"ಸಂಸದ ಡಿ.ಕೆ.ಸುರೇಶ್ ಅವನ್ಯಾರು ಎಂದು ನನ್ನನ್ನು ಕೆಣಕಿದ್ದರು. ಈಗ ನಾನು ಏನು ಮತ್ತು ಚನ್ನಪಟ್ಟಣದವರು ಅಂದರೆ ಯಾರು ಎನ್ನುವ ಶಕ್ತಿಯನ್ನು ತೋರಿಸಿದ್ದೇನೆ. ಸಹೋದರರಿಬ್ಬರು ಇದನ್ನು ಮೊದಲು ಅರಿತುಕೊಂಡು ಜಿಲ್ಲೆಯಲ್ಲಿ ರಾಜಕೀಯ ಮಾಡಲಿ" ಎಂದು ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಅಧಿಕಾರವಿದ್ದಾಗ ನಾವಿಬ್ಬರು ಜೋಡೆತ್ತುಗಳು ಎಂದು ತಿರುಗಾಡುತ್ತಿದ್ದರು

ಅಧಿಕಾರವಿದ್ದಾಗ ನಾವಿಬ್ಬರು ಜೋಡೆತ್ತುಗಳು ಎಂದು ತಿರುಗಾಡುತ್ತಿದ್ದರು

ಕುಮಾರಸ್ವಾಮಿ ಮತ್ತು ಡಿಕೆಶಿ ಉಲ್ಲೇಖಿಸಿ ಮಾತನಾಡಿದ ಯೋಗೇಶ್ವರ್, "ಅಧಿಕಾರವಿದ್ದಾಗ ನಾವಿಬ್ಬರು ಜೋಡೆತ್ತುಗಳು ಎಂದು ತಿರುಗಾಡುತ್ತಿದ್ದರು. ಅಧಿಕಾರ ಹೋದ ಕೂಡಲೇ, ಕಿತ್ತಾಡಿಕೊಳ್ಳುತ್ತಾರೆ. ಸಾರ್ವಜನಿಕರಿಗೆ ಈ ವಿಚಾರ ಅರ್ಥವಾಗದಷ್ಟು ದಡ್ಡರೇನೂ ಅಲ್ಲ"ಎಂದು ಯೋಗೇಶ್ವರ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲೇ ಕೂತು, ಸ್ಕೆಚ್ ಹಾಕಿ ಕುಮಾರಸ್ವಾಮಿ ಸರಕಾರವನ್ನೇ ಉರುಳಿಸಿದೆ

ಬೆಂಗಳೂರಿನಲ್ಲೇ ಕೂತು, ಸ್ಕೆಚ್ ಹಾಕಿ ಕುಮಾರಸ್ವಾಮಿ ಸರಕಾರವನ್ನೇ ಉರುಳಿಸಿದೆ

"ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಸೇರಿ ನನ್ನನ್ನು ಸೋಲಿಸಿದರು. ನಾನು ಬೆಂಗಳೂರಿನಲ್ಲೇ ಕೂತು, ಸ್ಕೆಚ್ ಹಾಕಿ ಕುಮಾರಸ್ವಾಮಿ ಸರಕಾರವನ್ನೇ ಉರುಳಿಸಿದೆ"ಎಂದು ಕುಮಾರಸ್ವಾಮಿ ಸರಕಾರ ಪತನದ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟರು.

ಸಚಿವನಾಗಬೇಕೇ, ಬೇಡವೇ ಎನ್ನುವುದು ನಮ್ಮ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ

ಸಚಿವನಾಗಬೇಕೇ, ಬೇಡವೇ ಎನ್ನುವುದು ನಮ್ಮ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ

ದೇವೇಗೌಡರ ಕುಟುಂಬಕ್ಕೆ ನನ್ನ ಶಕ್ತಿ ಏನು ಎನ್ನುವುದು ಗೊತ್ತಿದೆ. ನಾನು ಬೇಕಿದ್ದರೆ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಕುಮಾರಸ್ವಾಮಿಯವರು ಚನ್ನಪಟ್ಟಣದ ಹತ್ತು ಹಳ್ಳಿಗಳ ಹೆಸರನ್ನು ಹೇಳಲಿ ನೋಡೋಣ. ನಾನು ಸಚಿವನಾಗಬೇಕೇ, ಬೇಡವೇ ಎನ್ನುವುದು ನಮ್ಮ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ"ಎಂದು ಯೋಗೇಶ್ವರ್ ಹೇಳಿದರು.

ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆ ಬಳಿ 3 ಹಾಗೂ 4 BHK ಐಷಾರಾಮಿ ಅಪಾರ್ಟ್ಮೆಂಟ್. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ

English summary
BJP Leader CP Yogeshwar Revelared Hos HD Kumaraswamy Government Fallen,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X