ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತವರು ಜಿಲ್ಲೆಯಲ್ಲೇ ಸಿಎಂ ಕುಮಾರಸ್ವಾಮಿಗೆ ಮತ್ತೊಂದು ಶಾಕ್

|
Google Oneindia Kannada News

ರಾಮನಗರ, ಜುಲೈ 4: ತವರು ಜಿಲ್ಲೆಯಾದ ರಾಮನಗರದಲ್ಲೇ ಸಿಎಂ ಕುಮಾರಸ್ವಾಮಿ ಬಿಗ್ ಶಾಕ್ ದೊರೆತಿದೆ.ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಂಪಿ ಅಶೋಕ್ ರಾಜೀನಾಮೆ ನೀಡಿದ್ದಾರೆ.

ಮಾಗಡಿಯ ಮಾಜಿ ಶಾಸಕ ಬಾಲಕೃಷ್ಣ ಅವರೊಂದಿಗೆ ಗುರತಿಸಿಕೊಂಡಿದ್ದ ಎಂಪಿ ಅಶೋಕ್ ಈಗ ರಾಜೀನಾಮೆ ನೀಡಿದ್ದಾರೆ. ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಸಿಎಂ ಕುಮಾರಸ್ವಾಮಿ ಇಬ್ಬರಿಗೂ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

13 ಅತೃಪ್ತ ಶಾಸಕರ ಬಗ್ಗೆ ಗುಪ್ತಚರ ಇಲಾಖೆಯಿಂದ ಕುಮಾರಸ್ವಾಮಿಗೆ ಮಾಹಿತಿ13 ಅತೃಪ್ತ ಶಾಸಕರ ಬಗ್ಗೆ ಗುಪ್ತಚರ ಇಲಾಖೆಯಿಂದ ಕುಮಾರಸ್ವಾಮಿಗೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಅನಿತಾ ಕುಮಾರಸ್ವಾಮಿಯಾಗಲಿ ಅಥವಾ ಸಿಎಂ ಕುಮಾರಸ್ವಾಮಿಯಾಗಲಿ ಸ್ಥಳೀಯ ಕಾರ್ಯಕರ್ತರ ಬಗ್ಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲ, ಅವರ ಸಲಹೆ ಸೂಚನೆಗಳಿಗೂ ಬೆಲೆ ಕೊಡುತ್ತಿರಲಿಲ್ಲ ಎನ್ನುವ ಅಸಮಾಧಾನವೂ ಕೂಡ ಇತ್ತು ಎನ್ನಲಾಗಿದೆ.

Big shock for hdk Ramanagara JDS president resigned

ಎಂಪಿ ಅಶೋಕ್ ಕಳೆದ ಮೂರು ವರ್ಷಗಳಿಂದ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದರೂ ಸಕ್ರಿಯವಾಗಿ ಪಕ್ಷದಲ್ಲಿ ಕಾರ್ಯ ಮಾಡುತ್ತಿರಲಿಲ್ಲ, ಸಭೆ, ಸಮಾರಂಭಗಳಿಗೂ ಪಾಲ್ಗೊಳ್ಳುತ್ತಿರಲಿಲ್ಲ.

ಸಿಎಂ ಹಾಗೂ ಅನಿತಾ ಕುಮಾರಸ್ವಾಮಿಯವರೂ ಇಬ್ಬರೂ ತಮ್ಮ ಸ್ವಂತ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ, ತಾವು ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರೂ ಕೂಡ ತಮಗೆ ಯಾವುದೇ ಮನ್ನಣೆ ನೀಡುತ್ತಿಲ್ಲ ಎನ್ನುವ ಆರೋಪವನ್ನು ಕಾರ್ಯಕರ್ತರು ಮಾಡಿದ್ದಾರೆ.

ಕಾಂಗ್ರೆಸ್‌ನ ಶಾಸಕರು ರಾಜೀನಾಮೆ ನೀಡುತ್ತಿರವ ಬೆನ್ನಲ್ಲೇ ಆ ಗಾಳಿ ಈಗ ಜೆಡಿಎಸ್‌ಗೂ ಬೀಸಿದಂತಿದೆ. ಮಾಗಡಿ ಶಾಸಕ ಬಾಲಕೃಷಣ ಅವರು ಇತ್ತೀಚೆಗೆ ಜೆಡಿಎಸ್ ಬಗ್ಗೆ ಕಿಡಿಕಾರಿದ್ದರು, ಈಗ ಎಂಪಿ ಅಶೋಕ್ ಕೂಡ ಅವರ ಜೊತೆಗೆ ಸೇರಿಕೊಂಡಿದ್ದಾರೆ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ.

ಒಟ್ಟಿನಲ್ಲಿ ಕಾಂಗ್ರೆಸ್, ಜೆಡಿಎಸ್ ಎಲ್ಲಿ ರಾಜೀನಾಮೆ ನೀಡಿದರೂ ಸರ್ಕಾರಕ್ಕೆ ಹೊಡೆತ ಬೀಳುವುದು ಮಾತ್ರ ಸತ್ಯ.

English summary
Ramanagar JDS district president MP Ashok gave his resignation to the post this is big shok for CM HD Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X