• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್ ಲಸಿಕೆ ಕೇಂದ್ರ ಆರಂಭಿಸಿದ ಬಿಡದಿ ಟೊಯೋಟಾ ಘಟಕ

By ರಾಮನಗರ ಪ್ರತಿನಿಧಿ
|

ರಾಮನಗರ, ಏಪ್ರಿಲ್ 20; ಬಿಡದಿ ಕೈಗಾರಿಕಾ ವಲಯದಲ್ಲಿರುವ ಏಷ್ಯಾದ ಅತಿ ದೊಡ್ಡ ಕಾರು ತಯಾರಿಕಾ ಕಾರ್ಖಾನೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ತನ್ನ ನೌಕರರ ಸುರಕ್ಷತೆಗಾಗಿ ಕೆಲಸದ ಸ್ಥಳದಲ್ಲಿ ಕೋವಿಡ್ ಲಸಿಕೆ ಕೇಂದ್ರವನ್ನು (ಸಿವಿಸಿ) ಆರಂಭಿಸಿದೆ.

ಜಿಲ್ಲಾ ಆರೋಗ್ಯ ಪ್ರಾಧಿಕಾರವು ತನ್ನ ಔದ್ಯೋಗಿಕ ಆರೋಗ್ಯ ಇಲಾಖೆಯನ್ನು ಕೆಲಸದ ಸ್ಥಳದ ಕೋವಿಡ್ ಲಸಿಕೆ ಕೇಂದ್ರ (ಸಿವಿಸಿ) ಆಗಿ ನಿರ್ವಹಿಸಿದ ಮೊದಲ ಕಂಪನಿಗಳಲ್ಲಿ ಟಿಕೆಎಂ ಒಂದಾಗಿದೆ ಎಂದು ಹೆಮ್ಮ ವ್ಯಕ್ತಪಡಿಸಿದೆ.

ರಾಮನಗರ; ಶಾಸಕಿ ಅನಿತಾ ಕುಮಾರಸ್ವಾಮಿ ಹೋಂ ಕ್ವಾರಂಟೈನ್‌ ರಾಮನಗರ; ಶಾಸಕಿ ಅನಿತಾ ಕುಮಾರಸ್ವಾಮಿ ಹೋಂ ಕ್ವಾರಂಟೈನ್‌

ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಲಸಿಕೆ ನಿರ್ಣಾಯಕವಾಗಿರುವುದರಿಂದ ಟಿಕೆಎಂ ಸ್ಥಳೀಯ ಆರೋಗ್ಯ ಅಧಿಕಾರಿಗಳ ಸಹಕಾರದೊಂದಿಗೆ ಉದ್ಯೋಗಿಗಳಲ್ಲಿ ಲಸಿಕೆ ಅಳವಡಿಕೆಯನ್ನು ಅನುಕೂಲಕರವಾಗಿಸಲು ಲಸಿಕೆ ಕೇಂದ್ರ ಪ್ರಾರಂಭಿಸಿದೆ.

ಕೋವಿಡ್ 2ನೇ ಅಲೆ; ರಾಮನಗರ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಕೋವಿಡ್ 2ನೇ ಅಲೆ; ರಾಮನಗರ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ

ಲಸಿಕೆ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಟಿಕೆಎಂನ ಮಾನವ ಸಂಪನ್ಮೂಲ ಮತ್ತು ಸೇವೆಗಳ ಗುಂಪಿನ ಉಪಾಧ್ಯಕ್ಷ ಜಿ. ಶಂಕರ, "ಟಿಕೆಎಂನಲ್ಲಿ, ನಮ್ಮ ಎಲ್ಲಾ ಪಾಲುದಾರರು ಮತ್ತು ವಿಶೇಷವಾಗಿ ನಮ್ಮ ಉದ್ಯೋಗಿಗಳ ಆರೋಗ್ಯ ಮತ್ತು ಸುರಕ್ಷತೆಗೆ ನಾವು ಅತ್ಯಂತ ಮಹತ್ವ ನೀಡುತ್ತೇವೆ. ನಾವು ನಿರಂತರವಾಗಿ ನಮ್ಮ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಅಗತ್ಯವಿರುವ ಕಲ್ಯಾಣ ಕ್ರಮಗಳನ್ನು ಹಮ್ಮಿಕೊಂಡಿದ್ದೇವೆ" ಎಂದರು.

ಕೋವಿಡ್ ಪರಿಸ್ಥಿತಿ ಮಹತ್ವದ ಘೋಷಣೆ ಮಾಡಿದ ಟೊಯೋಟಾ ಕೋವಿಡ್ ಪರಿಸ್ಥಿತಿ ಮಹತ್ವದ ಘೋಷಣೆ ಮಾಡಿದ ಟೊಯೋಟಾ

ನಮ್ಮ ಉದ್ಯೋಗಿಗಳಿಗೆ ಲಸಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕೆಲಸದ ಸ್ಥಳದಲ್ಲಿ ಕೋವಿಡ್ ಲಸಿಕೆ ಕೇಂದ್ರವನ್ನು (ಸಿವಿಸಿ) ಪರಿಚಯಿಸಿದೆ. ಇದರ ಪರಿಣಾಮವಾಗಿ, ನಮ್ಮ ಉದ್ಯೋಗಿಗಳು ತಮ್ಮ ಇಚ್ಛೆ ಮತ್ತು ಅನುಕೂಲಕ್ಕೆ ಅನುಗುಣವಾಗಿ ಲಸಿಕೆ ಪಡೆಯಲು ಸಿವಿಸಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಸ್ಥಾವರದ ಹೊರಗೆ ಹೋಗಿ ಲಸಿಕೆ ಪಡೆಯುವ ಅನಿವಾರ್ಯತೆಯನ್ನು ತಪ್ಪಿಸಿದ್ದೇವೆ ಎಂದು ಕಂಪನಿ ಹೇಳಿದೆ.

ಕೋವಿಡ್ ಲಸಿಕೆ ಕೇಂದ್ರವನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಹಕಾರದೊಂದಿಗೆ ಮತ್ತು ಲಸಿಕೆಗಾಗಿ ಪ್ರಮಾಣಿತ ಕಾರ್ಯವಿಧಾನಗಳಿಗೆ ಅನುಸಾರವಾಗಿ ಮಾರ್ಗಸೂಚಿಗಳ ಪ್ರಕಾರ ಸ್ಥಾಪಿಸಲಾಗಿದೆ, ಇಲ್ಲಿಯವರೆಗೆ 175 ಅರ್ಹ ಉದ್ಯೋಗಿಗಳಿಗೆ ಸಿವಿಸಿಯಲ್ಲಿ ಲಸಿಕೆ ನೀಡಲಾಗಿದೆ.

   'ಕೊರೊನಾ ಚೈನ್‌‌ ಲಿಂಕ್‌ ಕಟ್‌ ಮಾಡಲು 14 ದಿನಗಳ ಕಠಿಣ ಕ್ರಮ ಅಗತ್ಯ'- ಆರೋಗ್ಯ ಸಚಿವ ಕೆ.ಸುಧಾಕರ್‌ | Oneindia
   English summary
   Toyota Kirloskar plants in Bidadi, Ramanagara has set up the COVID Vaccination Centres (CVCs) for employees.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X