ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ: ಎಚ್.ಡಿ.ದೇವೇಗೌಡ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ನವೆಂಬರ್ 14: ಬೆಳಗಾವಿ ಕರುನಾಡಿನ ಅವಿಭಾಜ್ಯ ಅಂಗ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ಅವರು ನ.13ರಂದು ರಾಮನಗರ ಜಿಲ್ಲೆ, ಬಿಡದಿ ಹೋಬಳಿಯ ಅಬ್ಬನಕುಪ್ಪೆ ಗ್ರಾಮದಲ್ಲಿನ ಆಂಜನೇಯಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು.

ಖಾಲಿ ಕುರ್ಚಿಗಳ ಅಧಿವೇಶನ, ಅತ್ತ ಮರಾಠಿ ಪುಂಡಾಟ; ದಿನದ 10 ಬೆಳವಣಿಗೆಗಳುಖಾಲಿ ಕುರ್ಚಿಗಳ ಅಧಿವೇಶನ, ಅತ್ತ ಮರಾಠಿ ಪುಂಡಾಟ; ದಿನದ 10 ಬೆಳವಣಿಗೆಗಳು

"ಬೆಳಗಾವಿಯಲ್ಲಿನ ಎಂಇಎಸ್ ಪುಂಡಾಟಿಕೆಯನ್ನ ಖಂಡಿಸಿದ ದೇವೇಗೌಡರು, ಅಂದೇ ಹೇಳಿದ್ದರು, 'ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ನಿಮಗೆ ಸಂಭಂದವಿಲ್ಲ, ಅದು ಮುಗಿದ ಅಧ್ಯಾಯ ಎಂದು ಅಂದೇ ಮೊರಾರ್ಜಿ ದೇಸಾಯಿಯವರು ಎಂಇಎಸ್ ನವರಿಗೆ ಖಡಾಖಂಡಿತವಾಗಿ ಹೇಳಿದ್ದರು. ವಿನಾಕಾರಣ ಬೆಳಗಾವಿ ವಿವಾದವನ್ನು ಕೆದುಕುತ್ತಿರುವ ಎಂಇಎಸ್ ನವರಿಗೆ ಕೇಂದ್ರಸರ್ಕಾರ ಬುದ್ಧಿ ಹೇಳಬೇಕು" ಎಂದು ತಾಕೀತು ಹಾಕಿದರು.

ಬೆಳಗಾವಿಯಲ್ಲಿ ಮಹಾರಾಷ್ಟ್ರ ಅಧಿವೇಶನ : ಕರ್ನಾಟಕ ಸರಕಾರಕ್ಕೆ ಸವಾಲ್ಬೆಳಗಾವಿಯಲ್ಲಿ ಮಹಾರಾಷ್ಟ್ರ ಅಧಿವೇಶನ : ಕರ್ನಾಟಕ ಸರಕಾರಕ್ಕೆ ಸವಾಲ್

Belagavi is the integral part of Karnataka, says HD Devegowda in Ramanagar

ವೇದಿಕೆಯಲ್ಲಿ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿಗಳು ಮತ್ತು ಮಾಗಡಿ ಜೆಡಿಎಸ್ ಅಭ್ಯರ್ಥಿ ಎ.ಮಂಜು ಮತ್ತು ಶಾಸಕ ಬಾಲಕೃಷ್ಣ ಪಾಲ್ಗೊಂಡಿದ್ದರು. ಜೆಡಿಎಸ್ ನ ಬಂಡಾಯ ಶಾಸಕ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಎಚ್.ಡಿ ದೇವೇಗೌಡರವರು ರಾಜ್ಯಸಭಾ ಚುನಾವಣೆ ಬಳಿಕ ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ದೇವಾಲಯದ ಉದ್ಘಾಟನೆ ಮಾಡುತ್ತಿರುವ ಹೆಚ್ಡಿಡಿ. ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರನ್ನು ಸನ್ಮಾನಿಸುತ್ತಿರುವುದು.

English summary
'Belagavi is the integral part of Karnataka', former Prime minister HD Devegowda told in Ramanagara on Nov 13th. He has inaugurated a temple in Abbanakoppe village, Bidadi, Ramanagara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X