ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಕೆದಾಟು ಪಾದಯಾತ್ರೆಗೆ ಪೊಲೀಸರಿಂದ ಅಡ್ಡಿ, ರೈತರ ಪ್ರತಿಭಟನೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್ 25: ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮೇಕೆದಾಟುವಿನಿಂದ ಬೆಂಗಳೂರಿನ ವಿಧಾನಸೌಧಕ್ಕೆ ಪಾದಯಾತ್ರೆ ಕೈಗೊಂಡಿದ್ದ ಮೇಕೆದಾಟು ಹೋರಾಟ ಸಮಿತಿಯ ಪಾದಯಾತ್ರಿಗಳನ್ನು ಬಂಧಿಸಿದ್ದ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಕನಕಪುರದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.

ದೇಗುಲ ಮಠದಲ್ಲಿ ಸಮಾವೇಶಗೊಂಡ ರೈತ ಸಂಘ, ಹಸಿರು ಸೇನೆ, ಕನ್ನಡಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಎಂ.ಜಿ. ರಸ್ತೆಯಲ್ಲಿ ಮೆರವಣಿಗೆ ನಡೆಸಿ, ಚನ್ನಬಸವಪ್ಪ ವೃತ್ತದಲ್ಲಿ ಧರಣಿ ನಡೆಸಿ ರಾಜ್ಯ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಮೇಕೆದಾಟು ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ಬಯಲುಸೀಮೆಯ ನಾಲ್ಕೈದು ಜಿಲ್ಲೆಗಳ ಜನ- ಜಾನುವಾರುಗಳ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನ ಮಾಡುವಂತೆ ಜನರ ಭಾವನೆಯನ್ನು ಅರಿತು ಸರ್ಕಾರದ ಮೇಲೆ‌ ಒತ್ತಡ ಹಾಕಲು ಶಾಂತಿಯುತವಾಗಿ ಮಠಾಧೀಶರ ನೇತೃತ್ವದಲ್ಲಿ ಪಾದಯಾತ್ರೆ ನಡೆಸುತ್ತಿದ್ದವರನ್ನು ಪೊಲೀಸರು ಬಂಧಿಸಿ, ಪಾದಯಾತ್ರೆಗೆ ತಡೆಯುಂಟು ಮಾಡಿದ್ದು ಖಂಡನೀಯವೆಂದು ಕಿಡಿಕಾರಿದರು.

ತಮಿಳಗರು ಕಾವೇರಿ ಹೋರಾಟ ಕೈಗೊಂಡರೆ ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ಪೊಲೀಸರು ಪ್ರತಿಭಟನೆಗಳಿಗೆ ವ್ಯಾಪಕ ಬಂದೋಬಸ್ತ್ ಏರ್ಪಡಿಸಿ ಹೋರಾಟಗಾರರಿಗೆ ಭದ್ರತೆ ನೀಡುತ್ತಾರೆ. ಸ್ವತ ಸರ್ಕಾರ ಹೋರಾಟಗಾರರ ಬೆನ್ನಿಗೆ ನಿಂತು ಹೋರಾಟದ ಕಿಚ್ಚು ಕೇಂದ್ರ ಸರ್ಕಾರಕ್ಕೆ ತಲುಪಿಸಲು ಶ್ರಮಿಸುತ್ತದೆ. ಅದರೆ ರಾಜ್ಯ ಸರ್ಕಾರ ಹೋರಾಟಗಾರರ ಮೇಲೆ ಕಾನೂನು ಅಸ್ತ್ರ ಬಳಸುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

 ತಮಿಳುನಾಡಿನ ಹಿತಕಾಯಲು ನಿಂತಿದೆ

ತಮಿಳುನಾಡಿನ ಹಿತಕಾಯಲು ನಿಂತಿದೆ

ಜನರ ಭಾವನೆ ಮತ್ತು ಅವರ ಹಕ್ಕುಗಳಿಗೆ ಸ್ಪಂದಿಸಬೇಕಾದ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ರಾಜ್ಯದ ಹಿತ ಕಾಯುವುದಕ್ಕಿಂತ ತಮಿಳುನಾಡಿನ ಹಿತಕಾಯಲು ನಿಂತಿದೆ. ರಾಜ್ಯದ ನೀರಾವರಿ ಯೋಜನೆಗಳಿಗೆ ತಮಿಳುನಾಡಿನವರ ಕ್ಯಾತೆಗಿಂತ ಜಿಲ್ಲಾಡಳಿತ ಮತ್ತು ಸರ್ಕಾರದ ಕ್ಯಾತೆ ಕನ್ನಡ ನಾಡಿನ ಜನತೆಗೆ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾವಿರಾರು ಸಂಖ್ಯೆಯ ಜನರನ್ನು ಸೇರಿಸಿಕೊಂಡು ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಪ್ರತಿಭಟನೆ ಸೇರಿದಂತೆ ಇನ್ನಿತರ ಕಾರ್ಯಕ್ರಮ ಮಾಡುವಾಗ ಸುಮ್ಮನಿರುವ ಜಿಲ್ಲಾಡಳಿತ, ರೈತರು ಪ್ರತಿಭಟನೆ, ಪಾದಯಾತ್ರೆ ಮಾಡಿದಾಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎನ್ನುವ ಸಿದ್ಧಾಂತಕ್ಕೆ ಅಂಟಿಕೊಂಡಿದೆ ಎಂದು ಪ್ರತಿಭಟನಾನಿರತರು ದೂರಿದರು.
 ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವು

ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವು

ನಾವು ಪಾದಯಾತ್ರೆ ಮೊದಲು ಹತ್ತಾರು ಸಭೆಗಳನ್ನು ವಿವಿಧ ಸಂಘಟನೆಗಳ ಸಮ್ಮುಖದಲ್ಲಿ ಮಾಡಿ, ಎರಡ್ಮೂರು ತಿಂಗಳ ಹಿಂದಿನಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವು. ಆದರೆ ರಾಮನಗರ ಜಿಲ್ಲಾಡಳಿತ ಮತ್ತು ಸರ್ಕಾರ ಈ ಬಗ್ಗೆ ಮೌನ ವಹಿಸಿದ್ದರಿಂದ ಪಾದಯಾತ್ರೆಗೆ ಅನುಮತಿಯನ್ನು ಕೇಳಿ, ಶಾಂತಿಯುತ ಪಾದಯಾತ್ರೆ ಹಮ್ಮಿಕೊಂಡಿದ್ದೆವು. ಅನುಮತಿಯನ್ನು ನಿರಾಕರಿಸಿ, ಜಿಲ್ಲಾಧಿಕಾರಿಗಳು ಪಾದಯಾತ್ರೆ ತಡೆದಿದ್ದಾರೆ. ಅವರು ಸ್ಥಳಕ್ಕೆ ಬರುವವರೆಗೂ ತಾವು ಧರಣಿಯನ್ನು ಕೈ ಬಿಡುವುದಿಲ್ಲವೆಂದರು.
ರೈತ ಸಂಘದ ರಾಮನಗರ ಜಿಲ್ಲಾಧ್ಯಕ್ಷ ಸಂಪತ್ ಕುಮಾರ್, ಹಾಸನ‌ ಜಿಲ್ಲೆಯ ಮಂಜೇಗೌಡ, ಚಿಕ್ಕಬಳ್ಳಾಪುರದ ನಾರಾಯಣಗೌಡ, ಕೋಲಾರದ ರಾಜಣ್ಣ ಮುಖಂಡರಾದ ಚಲಪತಿ, ಅಶ್ವತ್ಥ ನಾರಾಯಣ, ತುಂಬೇನಹಳ್ಳಿ ಶಿವಕುಮಾರ್, ಬಸವರಾಜು, ದೇವರಾಜು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 ಅಸ್ಸಾಂ ಘಟನೆ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

ಅಸ್ಸಾಂ ಘಟನೆ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

ಅಸ್ಸಾಂನ ಧೋಲ್ಪುರ್ ಗ್ರಾಮದಲ್ಲಿ ಗುರುವಾರ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ವೇಳೆ ಜನರನ್ನು ಅಮಾನವೀಯವಾಗಿ ತಳಿಸಿದ್ದಾರೆ ಎಂದು ಆರೋಪಿಸಿ ಚನ್ನಪಟ್ಟಣದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮೊಯಿನುಲ್ ಹಕ್ ಎಂಬ ವ್ಯಕ್ತಿಯನ್ನು ಅಸ್ಸಾಂ ಪೊಲೀಸರು ಅಮಾನವೀಯವಾಗಿ ಥಳಿಸಿ, ತುಳಿದು, ಗುಂಡಿಟ್ಟು ಕೊಲೆ ಮಾಡಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

Recommended Video

ABD ಔಟ್ ಆದಾಗ ಅತ್ಯಂತ ನೊಂದ ಅಭಿಮಾನಿ ಇವನೇ | Oneindia Kannada
 ಮೊಯೀನುಲ್ ಹೆಸರು ಎನ್‌ಆರ್‌ಸಿಯಲ್ಲಿದೆ

ಮೊಯೀನುಲ್ ಹೆಸರು ಎನ್‌ಆರ್‌ಸಿಯಲ್ಲಿದೆ

"ಮೂವರು ಮಕ್ಕಳ ತಂದೆಯಾಗಿರುವ ಮೊಯಿನುಲ್ ಹಕ್, ಒಂದು ತುಂಡು ಭೂಮಿಯಲ್ಲಿ ತರಕಾರಿ ಬೆಳೆದು ಕುಟುಂಬವನ್ನು ಮುನ್ನಡೆಸುತ್ತಿದ್ದರು. ಆದರೆ ಸರ್ಕಾರ ಈ ಭೂಮಿ ಅವರದ್ದಲ್ಲ ಎಂದು ಸ್ಥಳಾಂತರ ಮಾಡಲು ಹೊರಟಿತ್ತು. ಇದನ್ನು ವಿರೋಧಿಸಿ ಅವರು ಪೊಲೀಸರ ವಿರುದ್ಧ ಪ್ರತಿಭಟಿಸಿದ್ದರು. ಇದನ್ನು ಸಹಿಸದೇ ಅವರನ್ನು ಕೊಲೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮುಯೀನುಲ್ ಹತ್ಯೆಯ ಬಗ್ಗೆ ದೇಶದಾದ್ಯಂತ ಆಕ್ರೋಶ ಹೆಚ್ಚುತ್ತಿದ್ದಂತೆ, ಬಾಂಗ್ಲಾದೇಶದಿಂದ ಅತಿಕ್ರಮಣವಾಗಿ ದೇಶಕ್ಕೆ ಬಂದವರು ಎಂದು ಬಿಂಬಿಸಲಾಗುತ್ತಿದೆ. ಆದರೆ ಮೊಯೀನುಲ್ ಹೆಸರು ಎನ್‌ಆರ್‌ಸಿಯಲ್ಲಿದೆ ಎಂದು ದೃಢೀಕರಣವಾಗಿದೆ. ಅವರು ಅಕ್ರಮ ನಿವಾಸಿಯಲ್ಲ ಎನ್ನುವುದು ಖಚಿತವಾಗಿದ್ದು, ಆಧಾರ್ ಕಾರ್ಡ್ ಕೂಡಾ ಹೊಂದಿದ್ದರು. ಅವರ ಪೌರತ್ವ ಪ್ರಮಾಣಪತ್ರಗಳ ಹೊರತಾಗಿಯೂ ಅವರನ್ನು ಕ್ಯಾಮರಾ ಮುಂದೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ," ಎಂದು ಎಸ್‌ಡಿಪಿಐ ಕಾರ್ಯಕರ್ತರು ಕಿಡಿಕಾರಿದರು.

English summary
Leaders of progressive organizations in Kanakapura staged a protest on Saturday against the government and the Ramanagara district administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X