• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚನ್ನಪಟ್ಟಣ; 70 ಸಾವಿರಕ್ಕೆ ಹೆಣ್ಣು ಮಗು ಖರೀದಿಸಿದ್ದ ಮಹಿಳೆ ಬಂಧನ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜುಲೈ 27; ಮದುವೆಯಾಗಿ ಎರಡು ವರ್ಷಕಳೆದರು ಮಕ್ಕಳಾಗಲಿಲ್ಲ ಎಂಬ ಕೊರಗಿನಲ್ಲಿದ್ದ ಮಹಿಳೆ ಗಂಡ ಹಾಗೂ ಮನೆಯವರನ್ನು ನಾನು ಗರ್ಭಿಣಿ ಎಂದು ನಂಬಿಸಿ, ಕೊನೆಗೆ ಹಣ ಕೊಟ್ಟು ಬೇರೆ ಮಗುವನ್ನು ಖರೀದಿಸಿದ್ದಳು. ಈಗ ಪ್ರಕರಣ ಬಯಲಿಗೆ ಬಂದಿದ್ದು, ಮಹಿಳೆ ಬಂಧನವಾಗಿದೆ.

ಚನ್ನಪಟ್ಟಣದ ಅಪ್ಪಗೆರೆ ನಿವಾಸಿ ಸುಷ್ಮಾ ಬಂಧನಕ್ಕೊಳಗಾದ ಮಹಿಳೆ. ಸರ್ಕಾರಿ ನೌಕರನಾಗಿರುವ ತನ್ನ ಗಂಡ ಹಾಗೂ ಮನೆಯವರನ್ನು ನಂಬಿಸಲು ಗರ್ಭಿಣಿ ಎಂದು ಸೀಮಂತದ ಶಾಸ್ತ್ರಕೂಡ ಮಾಡಿಸಿಕೊಂಡಿದ್ದಳು. ಹೆರಿಗೆ ಸಮಯದಲ್ಲಿ ಮಧ್ಯವರ್ತಿಗಳ ಸಹಾಯದಿಂದ ಹಣ ನೀಡಿ ಹೆಣ್ಣು ಮಗುವನ್ನು ಖರೀದಿ ಮಾಡಿದ್ದಳು.

ರೇಖಾ ಚಿತ್ರ ನೀಡಿದ ಸುಳಿವಿನಿಂದ ಒಂದು ವರ್ಷದ ಬಳಿಕ ಮಗು ಕಳ್ಳಿ ವೈದ್ಯೆ ಸೆರೆ ರೇಖಾ ಚಿತ್ರ ನೀಡಿದ ಸುಳಿವಿನಿಂದ ಒಂದು ವರ್ಷದ ಬಳಿಕ ಮಗು ಕಳ್ಳಿ ವೈದ್ಯೆ ಸೆರೆ

ಅಂಗನವಾಡಿ ಕಾರ್ಯಕರ್ತೆಯ ವಿಚಾರಣೆಯಿಂದ ಮಹಿಳೆಯ ನಾಟಕ ಬಯಲಾಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಜೈಲು ಸೇರಿರುವ ಸುಷ್ಮಾ ಬಿಬಿಎಂಪಿಯಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ರವಿಕುಮಾರ್ ಎಂಬುವರನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದಳು.

ಹೊನ್ನಾವರ; ಮಗು ಮುಖ ನೋಡುವ ಮುನ್ನವೇ ಕಣ್ಮುಚ್ಚಿದ ತಾಯಿ ಹೊನ್ನಾವರ; ಮಗು ಮುಖ ನೋಡುವ ಮುನ್ನವೇ ಕಣ್ಮುಚ್ಚಿದ ತಾಯಿ

ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಿದ್ದ ಸುಷ್ಮಾ ಗರ್ಭಿಣಿಯಾಗುವುದಿಲ್ಲ ಎಂದು ಖಚಿತ ಪಡಿಸಿಕೊಂಡಿದ್ದಳು. ಮಕ್ಕಳಾಗದ ಹಿನ್ನಲೆಯಲ್ಲಿ ಗಂಡ ಮತ್ತು ಮನೆಯವರಿಂದ ಅಸಡ್ಡೆಗೆ ಒಳಾಗಾಗುವ ಭೀತಿಯಿಂದ ಮಗುವನ್ನು ಖರೀದಿ ಮಾಡಿ, ತನ್ನದೇ ಮಗು ಎಂದು ನಂಬಿಸಿದ್ದಳು.

ಧಾರವಾಡ: ಸಾಲ ತೀರಿಸದ್ದಕ್ಕೆ ಒಂದು ತಿಂಗಳ ಮಗು ಮಾರಾಟ; 6 ಜನರ ಬಂಧನಧಾರವಾಡ: ಸಾಲ ತೀರಿಸದ್ದಕ್ಕೆ ಒಂದು ತಿಂಗಳ ಮಗು ಮಾರಾಟ; 6 ಜನರ ಬಂಧನ

ಸೀಮಂತ ಮಾಡಿಸಿಕೊಂಡಿದ್ದಳು; ತಾನು ಗರ್ಭಿಣಿ ಎಂದು ನಂಬಿಸಲು ಸುಷ್ಮಾ ಗಂಡನ ಮನೆಯಲ್ಲಿ ಸೀಮಂತ ಶಾಸ್ತ್ರ ಮಾಡಿಸಿಕೊಂಡು ತಾಯಿಯ ಮನೆಗೆ ಹೋಗಿದ್ದಳು. ಯಾರುಗೂ ಅನುಮಾನ ಬಾರದಂತೆ ಮಗುವನ್ನು ಖರೀದಿ ಮಾಡಿ ತಂದು ನನ್ನದೇ ಮಗು ಎಂದು ನಂಬಿಸಲು ಮುಂದಾಗಿದ್ದಳು.

ಮಗು ಖರೀದಿಗಾಗಿ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ಶಾರದಾ ಎಂಬ ಮಹಿಳೆಯನ್ನು ಸಂಪರ್ಕಿಸಲಾಗಿತ್ತು. ಹಿಂದೆ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಶಾರದಾ ಮಗು ಮಾರಾಟ ಮಾಡಿಸುವ ಕೆಲಸ ಮಾಡಿಸುತ್ತಿದ್ದಳು. 70 ಸಾವಿರ ಹಣ ಕೊಟ್ಟು 10 ದಿನದ ಹೆಣ್ಣು ಹಸುಗುಸನ್ನು ಖರೀದಿ ಮಾಡಿಸಿದ್ದಳು.

ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಗರ್ಭಿಣಿಯರು ಮತ್ತು ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಮನೆ-ಮನೆಗೆ ಭೇಟಿ ನೀಡಿದ ಸಮಯದಲ್ಲಿ ಸುಷ್ಮಾ ಬಳಿ ಸರ್ಕಾರದ ಯೋಜನೆಗಳ ಫಲಾನುಭವಿ ದಾಖಲಾತಿಗೆ ತಾಯಿ ಕಾರ್ಡ್ ಕೇಳಿದ ಸಂದರ್ಭದಲ್ಲಿ ಸಮರ್ಪಕ ಉತ್ತರ ನೀಡಲಿಲ್ಲ. ಈ ಹಿನ್ನಲೆಯಲ್ಲಿ ಅನುಮಾನಗೊಂಡ ಅವರು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ನಕಲಿ ತಾಯಿ ಸುಷ್ಮಾಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ ಒಂದು ವಾರದೊಳಗೆ ಮಗುವಿನ ಜನನ ಪ್ರಮಾಣ ಪತ್ರ ಹಾಗೂ ತಾಯಿ ಕಾರ್ಡ್ ಇಲಾಖೆಗೆ ಒದಗಿಸುವಂತೆ ಸೂಚನೆ ಕೊಟ್ಟಿದ್ದರು. ಯಾವುದೇ ದಾಖಲೆಗ ಇಲಾಖೆಗೆ ಕೊಡದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ದೂರು ದಾಖಲಿಸಿದ ಅಧಿಕಾರಿ; ಸರ್ಕಾರದ ನಿಯಮಾವಳಿಯ ಪ್ರಕಾರ ದತ್ತು ಪ್ರಕ್ರಿಯೆಗೆ ಒಳಪಡಿಸದೇ ಅನಧಿಕೃತವಾಗಿ 9 ದಿನದ ಹೆಣ್ಣು ಮಗುವಿನ ಪಾಲನೆ ಮಾಡುತ್ತಿದ್ದ ಮಹಿಳೆಯ ವಿರುದ್ಧ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಸಿದ್ದಲಿಂಗಯ್ಯ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಕಲಿಸಿಕೊಂಡ ಪೊಲೀಸರು ಶಿಶು ಮಾರಾಟ ಜಾಲ ಅಡಿಯಲ್ಲಿ ಸುಷ್ಮಾ, ರವಿ ಕುಮಾರ್, ಶಾರದಮ್ಮ, ಜಯಲಕ್ಷ್ಮಿ, ಲಕ್ಷ್ಮಿ ಎಂಬ ಐದು ಮಂದಿ ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಮಕ್ಕಳಿಲ್ಲ ಎಂಬ‌ ಚಿಂತೆಗೆ ಸುಷ್ಮಾ ಸರ್ಕಾರದ ನಿಯಮದಂತೆ ದತ್ತು ಸ್ವೀಕಾರ ಮಾಡಬೇಕಿತ್ತು. ಆದರೆ ವಾಮಮಾರ್ಗದಿಂದ ಮಗುವನ್ನು ಖರೀದಿ ಮಾಡಿ, ನನ್ನ ಮಗು ಅಂತಾ ಬಿಂಬಿಸಿಕೊಳ್ಳಲು ಹೋಗಿ ಜೈಲು ಸೇರಿದ್ದಾಳೆ.

   BSY ನೋವಿನಿಂದ ಕಣ್ಣೀರು ಹಾಕಿದ್ದಕ್ಕೆ ಬಿಜೆಪಿಗಿಂತ ಹೆಚ್ಚು ಮರುಗಿದ ಕಾಂಗ್ರೆಸ್ | Oneindia Kannada

   ಇನ್ನೂ ಸುಷ್ಮಾಗೆ ಮಗು ಖರೀದಿಗೆ ಮಧ್ಯವರ್ತಿಯಾಗಿರುವ ಮಹಿಳೆ ಹಿಂದೆ ಈ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಇದೆ ಕಾರಣಕ್ಕೆ ಆಕೆ ಕೆಲಸಮಾಡುತ್ತಿದ್ದ ಆಸ್ಪತ್ರೆಯವರು ಆಕೆಯನ್ನು ಕೆಲಸದಿಂದ ವಜಾ ಮಾಡಿದ್ದರು. ಈ ಬಗ್ಗೆ ಪೋಲಿಸರು ತನಿಖೆ ನಡೆಸುತ್ಯಿದ್ದಾರೆ.

   English summary
   Chennapatna police arrested Susma who purchase the 10 days of baby girl for Rs 70,000. Mediators who help to purchase the child also arrested.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X