ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಮನ ಸೆಳೆಯುತ್ತಿದೆ ರಾಮನಗರದ ಫಲಪುಷ್ಪ ಪ್ರದರ್ಶನ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 27: ವಿವಿಧ ಬಗೆಯ ಹೂಗಳಿಂದ ನಿರ್ಮಾಣವಾಗಿರುವ ಮಾಗಡಿಯ ಶ್ರೀರಂಗನಾಥಸ್ವಾಮಿ, ಬಣ್ಣಬಣ್ಣದ ಕ್ಯಾಪ್ಸಿಕಮ್ ಗಳಿಂದ ಸಿದ್ದವಾಗಿರೋ ಜಿರಾಫೆ, ದೇಶ-ವಿದೇಶದ ತರಕಾರಿ, ಹೂಗಳು. ಇದು ರಾಮನಗರ ಫಲಪುಷ್ಪ ಪ್ರದರ್ಶನದ ಹೈಲೆಟ್ಸ್.

ಮಾಗಡಿ ಶ್ರೀರಂಗನಾಥಸ್ವಾಮಿ ದೇವಾಲಯದ ಪ್ರತಿಕೃತಿಯು ರೇಷ್ಮೆ ನಾಡಿನ ಫಲಪುಷ್ಪ ಪ್ರದರ್ಶನದಲ್ಲಿ ಸಾರ್ವಜನಿಕರ ಮನಸೆಳೆಯುತ್ತದೆ. ಹೂ, ಹಣ್ಣುಗಳಿಂದ ಇಡೀ ಮೈದಾನ ಕಂಗೊಳಿಸುತ್ತಿದೆ. ಈ ಸೊಬಗನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ಆಗಮಿಸುತ್ತಿದ್ದಾರೆ.

ಲಾಲ್ ಬಾಗ್ ಫ್ಲವರ್ ಶೋ ಥೀಮ್ ಗೆ ಹೂವಿನ ಬಳಕೆಯಿಲ್ಲ!ಲಾಲ್ ಬಾಗ್ ಫ್ಲವರ್ ಶೋ ಥೀಮ್ ಗೆ ಹೂವಿನ ಬಳಕೆಯಿಲ್ಲ!

ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ 71 ನೇ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ತೋಟಗಾರಿಕೆ, ಕೃಷಿ ಇಲಾಖೆಯ ವತಿಯಿಂದ ಮೂರು ದಿನಗಳ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಪ್ರತಿವರ್ಷದಂತೆ ಈ ಬಾರಿಯೂ ವಿಶೇಷವಾಗಿ ಆಯೋಜನೆ ಮಾಡಲಾಗಿತ್ತು.

 Attraction To The People Of Flower Show In Ramanagara

ಈ ಫಲಪುಷ್ಪ ಪ್ರದರ್ಶನದಲ್ಲಿ ಸರಿಸುಮಾರು 65 ಕ್ಕೂ ಹೆಚ್ಚು ಮಳಿಗೆಗಳಿದ್ದು, ವಿವಿಧ ಜಾತಿಯ ಬಣ್ಣಬಣ್ಣದ ಹೂಗಳಿಂದ ಮಾಗಡಿ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಆಕೃತಿಯನ್ನ ಅಲಂಕಾರಗೊಳಿಸಲಾಗಿದೆ.

 Attraction To The People Of Flower Show In Ramanagara

ಲಾಲ್‌ಬಾಗ್‌ ತೋಟದಲ್ಲಿ ಹೂಗಳ ಬೆಡಗು ಬಿನ್ನಾಣ! ಲಾಲ್‌ಬಾಗ್‌ ತೋಟದಲ್ಲಿ ಹೂಗಳ ಬೆಡಗು ಬಿನ್ನಾಣ!

ಯುವಕ, ಯುವತಿಯರು ಸೇರಿದಂತೆ ಹಲವಾರು ಪ್ರಗತಿಪರ ಚಿಂತಕರು ಫಲಪುಷ್ಟ ಪ್ರದರ್ಶನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಉದ್ಘಾಟನೆ ಮಾಡಿದರು.

 Attraction To The People Of Flower Show In Ramanagara

26 ರಿಂದ 28 ರವರೆಗೆ ಮೂರು ದಿನಗಳ ಕಾಲ ಈ ಫಲಪುಷ್ಟ ಪ್ರದರ್ಶನ ನಡೆಯಲಿದ್ದು, ಕೃಷಿ ಮತ್ತು ತೋಟಗಾರಿಕೆಯ ಬಗ್ಗೆ ತಿಳಿದುಕೊಳ್ಳಲು ಮಾಹಿತಿ ಕೇಂದ್ರಗಳಿವೆ. ಇಲ್ಲಿ ನಾಟಿ ಕೋಳಿ, ಹಳ್ಳಿಕಾರ್ ಹೋರಿ, ಟಗರುಗಳು ಇರುವುದರಿಂದ ಜಿಲ್ಲೆಯ ಜನರು ಆಗಮಿಸಿ ಕಣ್ತುಂಬಿಕೊಳ್ಳಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

English summary
The flower show was organized by the Department of Horticulture and Agriculture as part of the 71st Republic Day celebrations at the Ramanagar District Stadium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X