ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರದ ಮೊರೆ ಹೋದ ರಾಮನಗರ ಕಲ್ಯಾಣ ಮಂಟಪಗಳ ಮಾಲೀಕರ ಸಂಘ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂನ್ 02: ಕೊರೊನಾ ವೈರಸ್ ಸೋಂಕಿನಿಂದಾಗಿ ಹಲವು ಉದ್ಯಮಗಳು ನೆಲ ಕಚ್ಚಿವೆ. ಅವುಗಳಲ್ಲಿ ಕಲ್ಯಾಣ ಮಂಟಪವೂ ಒಂದು. ಜಿಲ್ಲೆಯ ಕಲ್ಯಾಣ ಮಂಟಪಗಳಿಗೆ ಸುಮಾರು 20 ಕೋಟಿ ನಷ್ಟವಾಗುತ್ತಿದೆ. ಸರ್ಕಾರ ಕೂಡಲೇ ಸಂಕಷ್ಟದಲ್ಲಿರುವ ಕಲ್ಯಾಣ ಮಂಟಪಗಳ ಮಾಲೀಕರ ನೆರವಿಗೆ ಧಾವಿಸಬೇಕೆಂದು ರಾಮನಗರ ಜಿಲ್ಲಾ ಕಲ್ಯಾಣ ಮಂಟಪಗಳ ಮಾಲೀಕರ ಸಂಘದ ಅಧ್ಯಕ್ಷ ಜೆ.‌ಜಗದೀಶ್ ಆಗ್ರಹಿಸಿದರು.

ಈ ಸಂಬಂಧ ನಗರ ಪ್ಯಾಲೆಸ್ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಮಂಟಪದ ಮಾಲೀಕರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಮಾಧ್ಯಮಗಳೂಂದಿಗೆ ಹಂಚಿಕೊಂಡರು. ಜಿಲ್ಲೆಯಲ್ಲಿ ಸುಮಾರು 68 ಕಲ್ಯಾಣ ಮಂಟಪಗಳು ಇದ್ದು, ಇವುಗಳು ಮುಚ್ಚಿರುವ ಕಾರಣದಿಂದ ಸರ್ಕಾರಕ್ಕೆ 4.5 ಕೋಟಿ ಜಿ.ಎಸ್.ಟಿ ಹಾಗೂ ಸುಮಾರು 4 ಕೋಟಿ ಆಸ್ತಿ ತೆರಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದರು.

ಚಿಕ್ಕಮಗಳೂರು; ಮದುವೆಯಲ್ಲಿ ತಾಂಬೂಲದ ಬದಲು ಮಾಸ್ಕ್ ವಿತರಣೆಚಿಕ್ಕಮಗಳೂರು; ಮದುವೆಯಲ್ಲಿ ತಾಂಬೂಲದ ಬದಲು ಮಾಸ್ಕ್ ವಿತರಣೆ

ಕೊರೊನಾ ಭೀತಿಯಿಂದ ಸುಮಾರು 1750 ಮದುವೆಗಳು ರದ್ದಾಗಿವೆ. ಆದ್ದರಿಂದ ಸರ್ಕಾರಕ್ಕೆ ಕಟ್ಟಬೇಕಾದ ಜಿಎಸ್ಟಿ ಮತ್ತು ಆಸ್ತಿ ತೆರಿಗೆ ಮನ್ನಾ ಮಾಡಬೇಕೆಂದು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದೇವೆ. ಜಿಲ್ಲಾಡಳಿತದ ನಿರ್ದೇಶನ ಹಾಗೂ ಸರ್ಕಾರದ ನಿಬಂಧನೆಗಳಿಗೊಳಪಟ್ಟು ಮದುವೆ ಮತ್ತು ಶುಭ
ಸಮಾರಂಭ ನಡೆಸಲು ಜಿಲ್ಲಾಡಳಿತದಿಂದ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

Ramanagar Association Of Marriage Halls Owners Requested Government Help

ಕಲ್ಯಾಣ ಮಂಟಪವನ್ನೇ ನಂಬಿಕೊಂಡು ಹೂವು ಬೆಳೆಗಾರರು, ತರಕಾರಿ ಬೆಳೆಗಾರರು, ಹಣ್ಣು ಬೆಳೆಗಾರರು, ಹೂವಿನ ಡೆಕೊರೇಷನ್ ಕೆಲಸಗಾರರು, ಕಲ್ಯಾಣ ಮಂಟಪಕ್ಕೆ
ದೀಪಾಂಲಕಾರ ಮಾಡುವ ಕಾರ್ಮಿಕರು, ಕಲ್ಯಾಣ ಮಂಟಪದ ಸ್ವಚ್ಛತಾ ಕೆಲಸ ನಿರ್ವಹಿಸುವ ಮಹಿಳಾ ಕಾರ್ಮಿಕರು, ಸಗಟು ದಿನಸಿ ಮತ್ತು ಬಟ್ಟೆ ವ್ಯಾಪಾರಿಗಳು, ಶಾಮಿಯಾನ, ಬಾಣಸಿಗರು, ಮಂಗಳವಾಧ್ಯ ನುಡಿಸುವವರು, ಫೋಟೊಗ್ರಫಿ ಮತ್ತು ವಿಡಿಯೋಗ್ರಫಿ ಮಾಡುವವರು, ಪಾರ್ಲರ್, ಆಮಂತ್ರಣ
ಪತ್ರಿಕೆ ಮುದ್ರಿಸುವವರು ಸೇರಿದಂತೆ ಅಸಂಖ್ಯಾತ ಅಸಂಘಟಿತ ಕಾರ್ಮಿಕರ ಬದುಕು ದುರ್ಬರವಾಗಿದೆ.

ಹಾಲಿ 50 ಜನರಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಅವಕಾಶವಿದೆ. ಇದರಿಂದ ಕಲ್ಯಾಣ ಮಂಟಪಗಳಿಗೆ ಅನುಕೂಲವಾಗುವುದಿಲ್ಲ. ಆದ್ದರಿಂದ ಈ ಸಂಖ್ಯೆಯನ್ನು 500 ಜನರಿಗೆ ವಿಸ್ತರಿಸಿದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರ ಎಲ್ಲಾ ನಿಬಂಧನೆಗಳನ್ನು ಪಾಲಿಸಿಕೊಂಡು ಹೋಗುತ್ತೇವೆ ಎಂದು ಮನವಿ‌ ಮಾಡಿದರು. ಈ ವೇಳೆ ಸಂಘದ ಗೌರವಾಧ್ಯಕ್ಷ ಅಪ್ಪಾಜಿಗೌಡ, ಉಪಾಧ್ಯಕ್ಷ ಬಸವರಾಜು, ಕಾರ್ಯದರ್ಶಿ ಮಹೇಶ್ವರ್, ಖಜಾಂಚಿ ಆರ್.ವಿ.ಸುರೇಶ್ ಸೇರಿದಂತೆ‌ ಸಂಘದ‌ ನಿರ್ದೇಶಕರು ಉಪಸ್ಥಿತರಿದ್ದರು.

English summary
Ramanagar Association of marriage halls owners requested to allow 500 people in marriages
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X