ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಶ್ವಥ್ ನಾರಾಯಣ್ ಭ್ರಷ್ಟ ಸಚಿವ; ಡಿ. ಕೆ. ಶಿವಕುಮಾರ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ 04; ಪಿಎಸ್ಐ ನೇಮಕಾತಿ ಹಗರಣದ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ್ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

ಬುಧವಾರ ಕನಕಪುರದ ದೊಡ್ಡಾಲಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು "ಅಶ್ವಥ್ ಇಸ್ ಮೋಸ್ಟ್ ಕರೆಪ್ಟೆಡ್ ಮಿನಿಸ್ಟರ್ ಆಫ್ ಕರ್ನಾಟಕ" ಎಂದು ವಾಗ್ದಾಳಿ ನಡೆಸಿದರು. "ಅವರು ಕರೆಪ್ಟೆಡ್ ಅನ್ನುವುದರಲ್ಲಿ ಅನುಮಾನ ಏನು ಇಲ್ಲ. ನಾನು ಶುದ್ಧ ರಾಜಕಾರಣಿ ಅನ್ನೋದು ಯಾಕೆ ಬೇಕು, ಇದೆಲ್ಲ ನಮಗೆ ಗೊತ್ತಾಗುತ್ತಿದೆ. ಅವರ ಮಾತುಗಳನ್ನು ನೋಡಿದರೆ ಸಂಸ್ಕೃತಿ ಇರುವವರು ಯಾರು? ಇಂತಹ ಕೆಲಸ ಮಾಡಲ್ಲ" ಎಂದರು.

ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಬ್ಲಾಕ್ ವೈಟ್ ಮಾಡಿಕೊಳ್ಳೋಕೆ ಕೆಜಿಎಫ್ ನಲ್ಲಿ ಹೂಡಿಕೆ ಮಾಡಿದ್ದಾರೆ: ವಿ.ಎಸ್. ಉಗ್ರಪ್ಪ ಅರೋಪಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಬ್ಲಾಕ್ ವೈಟ್ ಮಾಡಿಕೊಳ್ಳೋಕೆ ಕೆಜಿಎಫ್ ನಲ್ಲಿ ಹೂಡಿಕೆ ಮಾಡಿದ್ದಾರೆ: ವಿ.ಎಸ್. ಉಗ್ರಪ್ಪ ಅರೋಪ

ಅಮಿತ್ ಶಾ ಬರುವ ಹಿನ್ನಲೆ ಅಶ್ವಥ್ ನಾರಾಯಣ್ ಹೆಸರು ತಂದಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ ಅವರು, "ನಾನು ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ. ಈ ಜಿಲ್ಲೆಯಲ್ಲಿ ನಡೆದಂತಹ ಅನಾಹುತಗಳಿಗೆ ಇದು ಸತ್ಯವಾಗಿದೆ. ನಮಗೆ ಏನು ಬೇಕಾದರೂ ಮಾಡಲಿ ನಾವು ಸಿದ್ಧರಿದ್ದೇವೆ. ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಲು ಸಿದ್ಧರಿದ್ದೇವೆ" ಎಂದು ಹೇಳಿದರು.

ಪಿಎಸ್‌ಐ ಅಕ್ರಮ: ಸಚಿವ ಅಶ್ವಥ್ ನಾರಾಯಣ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ಪಿಎಸ್‌ಐ ಅಕ್ರಮ: ಸಚಿವ ಅಶ್ವಥ್ ನಾರಾಯಣ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಬಿಜೆಪಿ ಅವರೇ ಅಶ್ವಥ್ ನಾರಾಯಣ್ ವಿರುದ್ಧ ಕುತಂತ್ರ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಯನ್ನು ಸಮರ್ಥಿಸಿದ ಡಿ. ಕೆ. ಶಿವಕುಮಾರ್, "ಇರಬಹುದು ನಾನು ಇಲ್ಲ ಅಂತ ಹೇಳಲ್ಲ. ನಮ್ಮ ಜೊತೆ ಜಗಳವಾಡುವುದು ನಮ್ಮ ಪಕ್ಕದ ಮನೆಯವರು ಇಲ್ಲಾ ಮುಂದಿನ ಮನೆಯವರು, ನಾಲ್ಕನೇ ಮನೆಯವನು ಕಲ್ಲು ಹೊಡೆಯಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು".

 ಪಿಎಸ್ಐ ಹಗರಣದ ಆಂತರಿಕ ವಿಚಾರ ಗೊತ್ತಿಲ್ಲ :

ಪಿಎಸ್ಐ ಹಗರಣದ ಆಂತರಿಕ ವಿಚಾರ ಗೊತ್ತಿಲ್ಲ :

"ಪಿಎಸ್‌ಐ ನೇಮಕಾತಿ ಅಕ್ರಮದ ಆಂತರಿಕ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಕುಮಾರಸ್ವಾಮಿ ಪ್ರಮುಖವಾದ ಸ್ಥಾನದಲ್ಲಿದ್ದವರು. ಈಗಾಗಿ ಹಿರಿಯ ಅಧಿಕಾರಿಗಳು ಅವರಿಗೆ ತಿಳಿಸಿರಬಹುದು. ಆದರೆ ನಡೆದ ಹಗರಣವನ್ನು ಯಾರಾದರೂ ಮುಚ್ಚಿ ಹಾಕಲು ಸಾಧ್ಯನಾ?. ಸರ್ಕಾರದ ಪ್ರಭಾವದಿಂದ ಮುಚ್ಚಿಹಾಕಬಹುದು. ನಮ್ಮ ಜಿಲ್ಲೆಯಲ್ಲಿ ಮೂರು ಜನರಲ್ಲಿ ಮೊದಲ ಶ್ರೇಣಿ ಪಡೆದಿರುವವರು ಇದ್ದಾರೆ. ಅವರು ಕೂಡ ಈಗ ಒಳ ಹೋಗಿದ್ದಾರೆ. ಅವರು ನಮಗೆ ಬೇಕಾದ ಹುಡುಗರೇ, ಅವರಿಗೆ ಸಹಾಯವನ್ನು ಮಂತ್ರಿ ಕುಟುಂಬದವರೋ ಅಥವಾ ಇನ್ನ್ಯಾರೋ ಯಾವ ರೀತಿ ಸಹಾಯ ಮಾಡಿದರೋ ಗೊತ್ತಿಲ್ಲ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

 ಹಣ ನೀಡಿ ಸಿಕ್ಕಿಹಾಕಿಕೊಂಡಿದ್ದಾರೆ

ಹಣ ನೀಡಿ ಸಿಕ್ಕಿಹಾಕಿಕೊಂಡಿದ್ದಾರೆ

"ನಾನು ಅವರ ಊರಿನ ಅಕ್ಕಪಕ್ಕದಲ್ಲಿ ಚೆಕ್ ಮಾಡಿದ್ದೇನೆ. ಪ್ರಭಾವಿ ರಾಜಕಾರಣಿಗಳು ತಿಳಿಸಿರುವುದರಿಂದ ಕೆಲಸ ಸಿಗುವ ಆಸೆಯಿಂದ ಅವರು ಮನೆ, ಆಸ್ತಿ ಮಾರಿ ಸಾಲ ಮಾಡಿ ಹಣ ನೀಡಿ ಸಿಕ್ಕಿಹಾಕಿಕೊಂಡಿದ್ದಾರೆ. ಈಗ ಲಂಚ ಕೊಟ್ಟೆ ಅಂತಾ ಯಾರು ಹೇಳುವುದಿಲ್ಲ. ಪಡೆದುಕೊಂಡವರು ಸಹ ಹೇಳಲ್ಲ‌. ಪರೀಕ್ಷೆ ಬರೆದ ಹುಡುಗರಿಗೆ ನೋಟೀಸ್ ಕೊಟ್ಟು ಪ್ರಭಾವಿ ಮಂತ್ರಿ ಕಡೆಯವರು ಹೇಳಿದ್ದಾನೆ ಅಂತ ನೀವು ವಾಪಸ್ ಕಳಿಸಿದ್ದೀರಲ್ಲ. ನೀವು ಯಾರನ್ನು?, ಹೇಗೆ, ಎಲ್ಲಿ ವಿಚಾರಣೆ ಮಾಡಿದ್ದೀರಿ? ಎಂಬುದನ್ನು‌ ಆಚೆ ಬಿಡಬೇಕಿತ್ತು" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

 ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ

ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ

ಹಗರಣದ ಬಗ್ಗೆ ಕಾಂಗ್ರೆಸ್ ನಾಯಕರ ಬಳಿ ದಾಖಲೆ ಇಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ. ಕೆ. ಶಿವಕುಮಾರ್, "ನಮ್ಮ ಬಳಿ ದಾಖಲೆ ಇದಿಯೋ ಇಲ್ಲವೋ ಬೇಡ. ಆದರೆ 17 ಜನರನ್ನು ಯಾಕೆ ಅರೆಸ್ಟ್ ಮಾಡಿದಿರಿ. ನಾವೇನು ಇನ್ವೆಸ್ಟಿಗೇಷನ್ ಏಜೆನ್ಸಿನಾ?. ನಾವು ವಿರೋಧ ಪಕ್ಷದಲ್ಲಿರುವ ಕಾರ್ಯಕರ್ತರು. ನಮಗೆ ಆ ಹುಡುಗರೇ ಬಂದು ಯಾರು ಯಾರು ಎಷ್ಟೆಷ್ಟು ಶ್ರೇಯಾಂಕ ಪಡೆದಿದ್ದಾರೆ ಎಂದು ತೋರಿಸಿದ್ದಾರೆ. ಅಲ್ಲದೇ ನಮಗೂ ಅಧಿಕಾರಿಗಳು‌ ಬಂದು ಹೇಳಿದ್ದಾರೆ. ಅದರ ವಿವರ ಹೇಳಲು ಆಗುತ್ತದೆಯೇ?.
ಕುಮಾರಸ್ವಾಮಿ ಮೂಲಗಳ ಬಗ್ಗೆ ಹೇಳುತ್ತಾರಾ?. ಬಿಜೆಪಿ ಸರ್ಕಾರದಲ್ಲಿ ಹಗರಣ ನಡೆದಿರುವುದು ಪೊಲೀಸ್ ಇಲಾಖೆ ಒಂದೇ ಅಲ್ಲ ತುಂಬಾ ಕಡೆ ಆಗಿದೆ. ಆದರೆ ಬೊಮ್ಮಾಯಿ ಅವರು ಇದುವರೆಗೂ ಯಾವುದೇ ಪ್ರಕರಣವನ್ನು ತನಿಖೆಗೆ ತೆಗೆದುಕೊಂಡಿಲ್ಲ. ಅವರೆಲ್ಲ ಯಾಕೆ ಸುಮ್ಮನೆ ಕುಳಿತ್ತಿದ್ದಾರೆ?" ಎಂದು ಡಿ. ಕೆ. ಶಿವಕುಮಾರ್ ಪ್ರಶ್ನಿಸಿದರು.

Recommended Video

CSK ವಿರುದ್ಧದ ಪಂದ್ಯದಲ್ಲಿ RCB ಗೆಲುವಿಗೆ ಕಾರಣವೇನು | Oneindia Kannada
 ಬಂದು ಎರಡು ವರ್ಷ ಕಳೆದರು ಏನೂ ಮಾಡಿಲ್ಲ

ಬಂದು ಎರಡು ವರ್ಷ ಕಳೆದರು ಏನೂ ಮಾಡಿಲ್ಲ

"ಅಶ್ವಥ್ ನಾರಾಯಣ್ ನಮ್ಮ ಬಗ್ಗೆ ಬಿಚ್ಚಿಡುತ್ತೇನೆ ಎಂದಿದ್ದಾರೆ. ಅವರು ಬಂದು ಎರಡು ವರ್ಷ ಆದರೂ ಏನು ಮಾಡಿಲ್ಲ. ಬಿಜೆಪಿ ಸರ್ಕಾರದಲ್ಲಿ ಪ್ರತಿ ತಾಲೂಕಿನಲ್ಲೂ ಭ್ರಷ್ಟಚಾರ ತಂಡವವಾಡುತ್ತಿದೆ. ಅಶ್ವಥ್ ನಾರಾಯಣ್ ನಮ್ಮ ಬಗ್ಗೆ ತೊಡೆ ತಟ್ಟಿಲ್ಲ. ರಾಮನಗರದ ಜನರ ವಿರುದ್ಧ ತೊಡೆತಟ್ಟಿದರು. ಅದಕ್ಕೆ ಅನಿತಾ ಅಕ್ಕ ಸಾಕ್ಷಿ. ಸಿಎಂ ಹಾಗೆ ಬೇರೆ ಬಿಜೆಪಿ ಮಂತ್ರಿಗಳು ಸಾಕ್ಷಿ. ಅವರು ಹೇಳಬೇಕು ಈಗ ಗಂಡಸರು ಇದರೋ ಇಲ್ವಾ ಅಂತ. ನಾವೆಲ್ಲ ಹೆಂಗಸರುಗಳು, ಸೀರೆ ಕೊಟ್ಟರೆ ಸೀರೆ ಉಟ್ಟುಕೊಳ್ಳುತ್ತೇವೆ" ಎಂದು ಅಶ್ವಥ್ ನಾರಾಯಣ್ ವಿರುದ್ಧ ವಾಗ್ದಾಳಿ ನಡೆಸಿದರು.

English summary
KPCC president D. K. Sivakumar alleged that higher education minister Dr. Ashwath Narayana is most corrupt minister of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X