ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಬ್ಬರು ಬೇಟೆಗಾರರ ಬಂಧನ, 41 ಸಜೀವ ನಾಡ ಬಾಂಬ್ ವಶ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 08: ನಾಡ ಬಾಂಬ್ ತಯಾರಿಸಿ ಕಾಡು ಪ್ರಾಣಿಗಳನ್ನು ಭೇಟೆಯಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 41 ನಾಡ ಬಾಂಬ್ ಗಳನ್ನು ವಶಕ್ಕೆ ಪಡೆಯುವಲ್ಲಿ ಕನಕಪುರ ತಾಲ್ಲೂಕಿನ ಸಾತನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕನಕಪುರ ತಾಲೂಕಿನ ಸಾತನೂರು ಸುತ್ತಮುತ್ತಲಿನ ಅರಣ್ಯ ಪ್ರದೇಶ ಹೆಚ್ಚಾಗಿದ್ದು ನಾಡ ಬಾಂಬ್ ಗಳನ್ನ ತಯಾರಿಸಿ ಅರಣ್ಯ ಪ್ರದೇಶದಲ್ಲಿಟ್ಟು ಕಾಡು ಪ್ರಾಣಿಗಳನ್ನ ಭೇಟೆಯಾಡಲು ಮುಂದಾಗಿದ್ದ ಆರೋಪಿಗಳಾದ ಕೇಶವ(30) ರಾಮ (30) ಎಂಬು ಇಬ್ಬರು ಕಳ್ಳ ಬೇಟೆಗಾರರನ್ನು ಪೊಲೀಸರು ಬಂಧಿಸಿದ್ದಾರೆ.

ಕಾರಿನ ಗಾಜು ಒಡೆದು 3 ಲಕ್ಷ ರೂ, ದೋಚಿದ ಕಳ್ಳರುಕಾರಿನ ಗಾಜು ಒಡೆದು 3 ಲಕ್ಷ ರೂ, ದೋಚಿದ ಕಳ್ಳರು

ಅರಣ್ಯ ಪ್ರದೇಶಗಳಲ್ಲಿ ಕೋಳಿ ತಲೆಯನ್ನ ಸೇರಿಸಿ ನಾಡ ಬಾಂಬ್ ಗಳನ್ನು ಪ್ರಾಣಿಗಳಿಗೆ ಇಡಲಾಗುತ್ತಿತ್ತು, ಕಾಡು ಪ್ರಾಣಿಗಳು ಅದನ್ನ ಆಹಾರ ಎಂದುಕೊಂಡು ತಿನ್ನಲು ಬಂದಾಗ ಬಾಂಬ್ ಸಿಡಿದು ಪ್ರಾಣಿಗಳು ಸಾವಿಗೀಡಾಗುತ್ತಿದ್ದವು, ಈ ದಂಧೆ ನಿರಂತರವಾಗಿ ನಡೆಯುತ್ತಿತ್ತು.

Arrest of two hunters, 41 Animate Bomb Recover In Kanakapura

ನಾಡ ಬಾಂಬ್ ಗೆ ಪ್ರಾಣಿಗಳು ಬಲಿಯಾದ ಪ್ರಕರಣಗಳಿಂದ ಕನಕಪುರ, ಸಾತನೂರು ಪೊಲೀಸರಿಗೆ ದೊಡ್ಡ ತಲೆ‌ ನೋವಾಗಿ ಪರಿಣಮಿಸಿತ್ತು. ಇದೀಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳ‌ನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿ ನಾಡ ಬಾಂಬ್ ಗಳನ್ನು ತಯಾರಿಸುತ್ತಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬಳಿಕ ಕೊಳ್ಳೇಗಾಲದಲ್ಲಿ 30 ಸಜೀವ ನಾಡ ಬಾಂಬ್ ಗಳನ್ನ ಇಟ್ಟಿರುವ ಬಗ್ಗೆ ಬಾಯ್ಬಿಟ್ಟ ಹಿನ್ನಲೆಯಲ್ಲಿ ಆರೋಪಿಗಳಿಂದ ಒಟ್ಟು 41 ನಾಡ ಬಾಂಬ್ ಗಳನ್ನ ವಶಕ್ಕೆ ಪಡೆದು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ವೀಡಿಯೋ ವೈರಲ್; ದರ್ಗಾಕ್ಕೆ ನುಗ್ಗಿ ಪೂಜೆ ಸ್ವೀಕರಿಸಿದ ಬಸವವೀಡಿಯೋ ವೈರಲ್; ದರ್ಗಾಕ್ಕೆ ನುಗ್ಗಿ ಪೂಜೆ ಸ್ವೀಕರಿಸಿದ ಬಸವ

ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕನಕಪುರ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಿ, ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.

English summary
Arrest Of Two animal hunters and 41 animate bomb recover in Satanuru, kanakapura Talluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X