• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಪಚುನಾವಣೆ ಫಲಿತಾಂಶಕ್ಕೆ ಅನಿತಾ ಕುಮಾರಸ್ವಾಮಿ ಕೊಟ್ಟ ಉತ್ತರವೇ ಅಚ್ಚರಿ

By ರಾಮನಗರ ಪ್ರತಿನಿಧಿ
|
Google Oneindia Kannada News
   ಉಪಚುನಾವಣೆ ಫಲಿತಾಂಶಕ್ಕೆ ಅನಿತಾ ಕುಮಾರಸ್ವಾಮಿ ಕೊಟ್ಟ ಉತ್ತರವೇ ಅಚ್ಚರಿ | Oneindia Kannada

   ರಾಮನಗರ, ಡಿಸೆಂಬರ್ 11: ರಾಜ್ಯದಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಶಾಸಕಿ ಅನಿತಾ ಕುಮಾರಸ್ವಾಮಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

   ರಾಮನಗರದಲ್ಲಿ ನಗರಸಭೆ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಎಚ್ಡಿಕೆ ಪತ್ನಿ ಹಾಗೂ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ, "ಜನರ ತೀರ್ಪಿಗೆ ನಾವು ತಲೆಬಾಗಬೇಕು. ರಾಜಕೀಯ ನಿಂತ ನೀರಲ್ಲ, ಇವತ್ತು ಇದ್ದದ್ದು ನಾಳೆ ಇರುವುದಿಲ್ಲ. ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು, ಜನ ಈಗಲೂ ನಮ್ಮ ಪರವಾಗಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

   ಅನಿತಾ ಕುಮಾರಸ್ವಾಮಿ ಫೋನ್ ಕರೆಗಳ ಕದ್ದಾಲಿಕೆ; ಎಚ್ ಡಿಕೆಗೆ ನೋಟಿಸ್ ಸಾಧ್ಯತೆಅನಿತಾ ಕುಮಾರಸ್ವಾಮಿ ಫೋನ್ ಕರೆಗಳ ಕದ್ದಾಲಿಕೆ; ಎಚ್ ಡಿಕೆಗೆ ನೋಟಿಸ್ ಸಾಧ್ಯತೆ

   "ಆದರೆ ಜನರು ಇಂತಹವರನ್ನು ಸ್ವೀಕರಿಸಿದ್ದಾರಲ್ಲ, ಅದೇ ನನಗೆ ಆಶ್ಚರ್ಯ, ಒಂದು ಪಕ್ಷದಿಂದ ಗೆದ್ದು, ಅಧಿಕಾರಕ್ಕೆ ಇನ್ನೊಂದು ಪಕ್ಷಕ್ಕೆ ಹೋದವರನ್ನು ಜನ ಗೆಲ್ಲಿಸಿದ್ದಾರೆ. ಮುಂದೆ ಜನರಿಗೆ ಮನವರಿಕೆಯಾಗಬೇಕು. ಈ ಚುನಾವಣೆಯಲ್ಲಿ ಯಾವ ಅಂಶ ಪ್ರಭಾವ ಬೀರಿದೆ ಎಂಬುದು ನನಗೆ ಗೊತ್ತಿಲ್ಲ. ಆದರೂ ಅನರ್ಹರನ್ನು ಜನರು ಸ್ವಾಗತಿಸಿದ ರೀತಿ ನೋಡಿ ನನಗೆ ಬಹಳ ಅಚ್ಚರಿಯಾಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.

   English summary
   Anitha Kumaraswamy has expressed surprise over By election result. She has participated in meeting in Ramanagar today,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X