ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನಕಪುರದಲ್ಲಿ ಏಸು ಪ್ರತಿಮೆ ನಿರ್ಮಾಣ; ಅನಿತಾ ಕುಮಾರಸ್ವಾಮಿ ಹೇಳುವುದೇನು?

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 14: "ಏಸು ಪ್ರತಿಮೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿಲ್ಲ, ಹೊರಗಿನಿಂದ ಜನರನ್ನು ಕರೆತಂದು ರಾಜಕೀಯ ಮಾಡುತ್ತಿರುವುದು ತಪ್ಪು" ಜಿಲ್ಲೆಯ ಆರೋಬೆಲೆಯ ಕಪಾಲ ಬೆಟ್ಟದಲ್ಲಿ ಜಗತ್ತಿನ ಎತ್ತರದ ಏಸು ಪ್ರತಿಮೆ ನಿರ್ಮಾಣ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಮತ್ತು ಸಂಘ ಪರಿವಾರ ಹಮ್ಮಿಕೊಂಡಿರುವ "ಮುನೇಶ್ವರ ಬೆಟ್ಟ ಉಳಿಸಿ, ಕನಕಪುರ ಚಲೋ" ಸಂಬಂಧ ಪ್ರತಿಕ್ರಿಯಿಸಿದ್ದಾರೆ ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ.

ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ದೇವೇಗೌಡರ ಬೆಂಬಲಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ದೇವೇಗೌಡರ ಬೆಂಬಲ

Recommended Video

ಡಿಕೆಶಿ ಬಗ್ಗೆ ವ್ಯಂಗ್ಯವಾಡಿದ ಸಂಸದ ಪ್ರತಾಪ್ ಸಿಂಹ | Oneindia Kannada

ನಿನ್ನೆ ನಗರದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಾಲನೆ ನೀಡಿ ಮಾತನಾಡಿದ ಅವರು, "ಕನಕಪುರದಲ್ಲಿ ಯಾವ ರೀತಿ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಜಿಲ್ಲೆಯಲ್ಲಿ ಎಲ್ಲಾ ಸಮುದಾಯದ ಜನರು ಸೌಹಾರ್ದವಾಗಿ ಅಣ್ಣ-ತಮ್ಮಂದಿರ ರೀತಿ ಜೀವನ ನಡೆಸುತ್ತಿದ್ದಾರೆ. ಅವರ ಮಧ್ಯೆ ಜಾತಿ ಧರ್ಮ ತರುವುದು ಸರಿಯಿಲ್ಲ, ಏಸು ಪ್ರತಿಮೆ ಬೇಕು ಬೇಡ ಎನ್ನುವುದನ್ನು ಕನಕಪುರದ ಜನತೆ ಹೇಳಬೇಕು, ನಾನು ಆ ಬಗ್ಗೆ ಮಾತನಾಡುವುದು ಸರಿಯಿಲ್ಲ" ಎಂದರು.

Anitha Kumaraswamy Reaction On Construction Of Jesus Christ Statue In Kanakapura

ಡಿಕೆ ಶಿವಕುಮಾರ್ ರಾಜಕೀಯ ಭವಿಷ್ಯ ನಾಶ: ಕನಕಪುರ ಚಲೋದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ಡಿಕೆ ಶಿವಕುಮಾರ್ ರಾಜಕೀಯ ಭವಿಷ್ಯ ನಾಶ: ಕನಕಪುರ ಚಲೋದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್

ಇನ್ನು ಕಪಾಲ ಬೆಟ್ಟದಂತೆ ರಾಮನಗರ ತಾಲ್ಲೂಕಿನ ಬಿಳಗುಂಬ ಪಂಚಾಯ್ತಿ ವ್ಯಾಪ್ತಿಯ ಹರ್ನಾಗುಡ್ಡದಲ್ಲಿ ಶಿಲುಬೆ ನಿರ್ಮಾಣಕ್ಕೆ ಮುಂದಾಗಿರುವ ವಿವಾದಕ್ಕೆ ಪ್ರತಿಕ್ರಿಯೆ ನೀಡಿ, "ನನ್ನ ಹಾಗೂ ಎಚ್ಡಿಕೆಯವರ ಅವಧಿಯಲ್ಲಿ ಜಮೀನು ಮಂಜೂರಾಗಿಲ್ಲ. ತಹಶೀಲ್ದಾರ್ ಅವರಿಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ಹೈಕೋರ್ಟ್ ಸರ್ಕಾರಿ ಜಮೀನನ್ನು ಧಾರ್ಮಿಕ ಚಟುವಟಿಕೆಗಳಿಗೆ ನೀಡಬಾರದು ಎಂದು ಆದೇಶ ಮಾಡಿದೆ. ಹಾಗಾಗಿ ಸರ್ಕಾರ ಅವರದೇ ಇದೆ ಕಾನೂನು ಬಾಹಿರವಾಗಿದ್ದರೆ ಕ್ರಮ ಜರುಗಿಸಲಿ, ನಮ್ಮ ಅಭ್ಯಂತರವಿಲ್ಲ" ಎಂದರು.

English summary
"There is no local opposition to the construction of the statue. It is wrong to bring in people from outside and do politics" commented Anitha Kumaraswamy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X