ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್ಎಸ್ಎಸ್ ಯುವಕರನ್ನು ಸೇನೆಗೆ ತುಂಬುವ ಹುನ್ನಾರವೇ 'ಅಗ್ನಿಪಥ್' : ಎಚ್.ಡಿ.ಕುಮಾರಸ್ವಾಮಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂ 19: ಕೇಂದ್ರ ಸರ್ಕಾರ ಹತ್ತು ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಸಲು ಆರಂಭಿಸಿರುವ 'ಅಗ್ನಿಪಥ್ ಯೋಜನೆ' ಆರ್.ಎಸ್.ಎಸ್. ಯೋಜನೆ ಎಂಬ ಅನುಮಾನ‌ವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ಚನ್ನಪಟ್ಟಣದಲ್ಲಿ ಬಮೂಲ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್ಡಿಕೆ, ಅಗ್ನಿಪಥ್ ಯೋಜನೆಯನ್ನು ಆರಂಭಿಸಿಸುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ಕೊಟ್ಟವರು ಯಾರು?. ರಕ್ಷಣಾ ಇಲಾಖೆಯವರು ಸಲಹೆ ಕೊಟ್ಟರೂ, ಸಂಸದರ ಸಮಿತಿ ಸಲಹೆ ಕೊಟ್ಟಿದೆಯಾ ಅಥವಾ ಆರ್.ಎಸ್.ಎಸ್ ನವರು ಸಲಹೆ ಕೊಟ್ಟಿದ್ದಾರ? ಎಂದು ಪ್ರಶ್ನಿಸಿದರು.

"ಹಿಂದೆ ನಾಜಿ ಸಾಮ್ರಾಜ್ಯದ ಹಿಟ್ಲರ್ ಸರ್ವಾಧಿಕಾರಿ ಇತ್ತಲ್ಲ, ಆಗಲೇ ಅರ್ಎಸ್ಎಸ್ ಹುಟ್ಟಿಕೊಂಡಿತ್ತು. ನಾಜಿ ಮಾದರಿಯ ರೀತಿ ಸೇನೆಯಲ್ಲೂ ಹಿಡಿತ ಸಾಧಿಸಲು ಹೊರಟಿದ್ದಾರೆ. ಸೇನೆಯಲ್ಲಿ ಆರ್.ಎಸ್.ಎಸ್. ನವರನ್ನು ತುಂಬಲು ಈ ಪ್ಲ್ಯಾನ್. ಇದು ಅರ್ಎಸ್ಎಸ್ ನವರ ಅಗ್ನಿಪಥ್ ಯೋಜನೆ. ಪ್ರಾರಂಭದಲ್ಲಿ ಹತ್ತು ಲಕ್ಷ ಸೇನೆಗೆ ಆರ್ಎಸ್ಎಸ್ ಕಾರ್ಯಕರ್ತರನ್ನು ಆಯ್ಕೆ ಮಾಡಿ ನಾಲ್ಕು ವರ್ಷಗಳ ನಂತರ 25% ಯುವಕರನ್ನು ಉಳಿಸಿಕೊಂಡು ಸೇನೆಯನ್ನು ಅರ್ಎಸ್ಎಸ್ ಮಯ ಮಾಡಿ ಇನ್ನೂ ಉಳಿದ 75% ಯುವಕರನ್ನು ದೇಶಕ್ಕೆ ಹಂಚಿ ನಾಜಿ ಸಂಸ್ಕೃತಿ ತರಲು ಬಿಜೆಪಿ ಹೊರಟಿದೆ," ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿದರು.

ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ಗಂಟುರೋಗ ಬಾಧೆ; ಆತಂಕದಲ್ಲಿ ರೇಷ್ಮೆ ಉದ್ಯಮರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ಗಂಟುರೋಗ ಬಾಧೆ; ಆತಂಕದಲ್ಲಿ ರೇಷ್ಮೆ ಉದ್ಯಮ

ಚನ್ನಪಟ್ಟಣ ಬಿಟ್ಟು, ಬೇರೆ ಕಡೆ ನಿಲ್ಲುವುದಿಲ್ಲ

ಚನ್ನಪಟ್ಟಣ ಬಿಟ್ಟು, ಬೇರೆ ಕಡೆ ನಿಲ್ಲುವುದಿಲ್ಲ

ಮುಂದಿನ 2023 ನೇ ವಿಧಾನಸಭಾ ಚುನಾವಣೆಗೆ ಕ್ಷೇತ್ರ ಬದಲಾವಣೆ ಮಾಡುತ್ತಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, "ನನ್ನದೇನು ಟೂರಿಂಗ್ ಟಾಕೀಸೇ, ಯಾವುದೇ ಕಾರಣಕ್ಕೂ ಚನ್ನಪಟ್ಟಣ ಕ್ಷೇತ್ರ ಬಿಟ್ಟು, ಬೇರೆ ಯಾವುದೇ ಕ್ಷೇತ್ರದಲ್ಲೂ ಚುನಾವಣೆ ನಿಲ್ಲೋ ಪ್ರಶ್ನೆ ಇಲ್ಲ," ಎಂದು ವದಂತಿಗಳಿಗೆ ತೆರೆ ಎಳೆದರು.

ಇನ್ನೂ ಕೇಂದ್ರದ ಚುನಾವಣಾ ಆಯೋಗ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಿಸುವಂತಿಲ್ಲ ಎಂಬ ಕಾನೂನು ತರಲು ಮುಂದಾಗಿದೆ. ಒಂದು ವೇಳೆ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೆ ಐದು ಲಕ್ಷ ದಂಡ ವಿಧಿಸಿಸುವ ಕಾನೂನು ತರಲು ಹೊರಟಿದೆ .ಈ ಕಾನೂನು ಜಾರಿಯಾದರೆ ಒಳ್ಳೆಯ ಬೆಳವಣಿಗೆ, ಕೇಂದ್ರ ಚುನಾವಣಾ ಆಯೋಗದ ಕಾನೂನಿಗೆ ನನ್ನ ಸ್ವಾಗತವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇ.ಡಿ ತನಿಖೆ ಬೇಡ ಎನ್ನುವುದು ಕಾಂಗ್ರೆಸ್ ನಾಯಕರ ಗೂಂಡಾಗಿರಿ: ಈಶ್ವರಪ್ಪಇ.ಡಿ ತನಿಖೆ ಬೇಡ ಎನ್ನುವುದು ಕಾಂಗ್ರೆಸ್ ನಾಯಕರ ಗೂಂಡಾಗಿರಿ: ಈಶ್ವರಪ್ಪ

ರಾಮನಗರ ಕ್ಷೇತ್ರ ನನ್ನ ಕರ್ಮಭೂಮಿ

ರಾಮನಗರ ಕ್ಷೇತ್ರ ನನ್ನ ಕರ್ಮಭೂಮಿ

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರದಲ್ಲಿ ನಿಲ್ಲಲು ಕಾರಣ ಚನ್ನಪಟ್ಟಣ ದೇವೇಗೌಡರ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕ್ಷೇತ್ರ. ಚನ್ನಪಟ್ಟಣದ ಕಾರ್ಯಕರ್ತರ ನೋವಿಗಾಗಿ ಸ್ಪಂದಿಸುವ ಹಿನ್ನೆಲೆಯಲ್ಲಿ ಸ್ಪರ್ಧೆ ಮಾಡಿದ್ದೆ. ಇನ್ನೂ ರಾಮನಗರ ಕ್ಷೇತ್ರ ನನ್ನ ಕರ್ಮಭೂಮಿ, ಹಾಗಾಗಿ ರಾಮನಗರ ಜನತೆ ಒಪ್ಪಿಗೆ ಪಡೆದು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಅನಿವಾರ್ಯವಾಗಿ ರಾಮನಗರಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣ ಉಳಿಸಿಕೊಂಡಿದ್ದೆ. ಮುಂದೆಯೂ ಚನ್ನಪಟ್ಟಣ ಕ್ಷೇತ್ರದಲ್ಲೇ ಮುಂದುವರಿಯುತ್ತೇನೆ ಎಂದು ಮಾಜಿ ಸಿಎಂ ಹೆಚ್ಡಿಕೆ ಸ್ಪಷ್ಟಪಡಿಸಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಮುಂದುವರಿಯಲು ನನಗೆ ಯಾವುದೇ ಅಂಜಿಕೆ ಇಲ್ಲ, ಈ ಕ್ಷೇತ್ರದ ಮತದಾರರಿಗೆ ನಮ್ಮ ಕುಟುಂಬ ಮೇಲೆ ಅಭಿಮಾನವಿದೆ. ಯಾರು ಯಾವುದೇ ಅಪ ಪ್ರಚಾರ ಮಾಡಿದರು ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಇಲ್ಲಿನ ಜನರು, ಕಾರ್ಯಕರ್ತರು ನನ್ನ ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ಮಾಜಿ ಸಿಎಂ ಹೆಚ್ಡಿಕೆ ವಿಶ್ವಾಸ ವ್ಯಕ್ತಪಡಿಸಿದರು. ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ ಎನ್ನುವುದು ಸುಳ್ಳು. ಮಾಗಡಿಯಲ್ಲಿ ಈಗಿರುವ ಅಭ್ಯರ್ಥಿಯೇ ನಿಲ್ಲಲಿದ್ದಾರೆ. ಈಗಿನ ಶಾಸಕರೇ ಮುಂದೆಯೂ ಅಲ್ಲಿ ಗೆಲ್ಲಲಿದ್ದಾರೆ. ಈ ಬಗ್ಗೆ ಯಾವ ಸಂಶಯ ಇಟ್ಟುಕೊಳ್ಳಬೇಡಿ ನಾನು ಅಲ್ಲಿ ಹೋಗಿ ಅರ್ಜಿ ಹಾಕುವ ಪ್ರಶ್ನೆ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ನನ್ನ ಗುರಿ 123 ಸ್ಥಾನ ಗೆಲ್ಲುವುದು

ನನ್ನ ಗುರಿ 123 ಸ್ಥಾನ ಗೆಲ್ಲುವುದು

ಇತ್ತೀಚೆಗೆ ನಡೆದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸೋತ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಹೆಚ್ಡಿಕೆ ರಾಜ್ಯಸಭೆಯಲ್ಲಿ ಇದ್ದದ್ದೇ 32 ಮತಗಳಿದ್ದವು, 32 ಮತದಲ್ಲಿ ಇಬ್ಬರು ಮೊದಲೇ ಪಕ್ಷದಿಂದ ಹೊರಗೆ ಇದ್ದರು. ಅದರಲ್ಲಿ ಕಾಂಗ್ರೆಸ್ ಬಿಜೆಪಿ ಒಳಗೊಳಗೆ ಏನೇನು ಆಟವಾಡಿದ್ದಾರೆ ಗೊತ್ತಿದೆ. ಬಿಜೆಪಿಯ ಬಿ ಟೀಮ್ ಯಾರೆಂದು ಈಗ ಫ್ರೂವ್ ಆಗಿದೆಯಲ್ವ ಎಂದರು.

ವಿಧಾನ ಪರಿಷತ್ ಚುನಾವಣಾ ಫಲಿತಾಂಶ ನನಗೆ ಆಶ್ಚರ್ಯ ಉಂಟು ಮಾಡಿಲ್ಲ . ದಕ್ಷಿಣ ಪದವಿಧರ ಕ್ಷೇತ್ರದಲ್ಲಿ ಎರಡು ದಿನ ಹೋಗಿದ್ದೇ, ಯಾವ ಕಾರಣಕ್ಕೆ ಅಲ್ಲಿ ಸೋತಿದ್ದೇವೆ ಎಂದು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ. ಇವತ್ತು ಅಲ್ಲಿ ಸೋತಿರುವುದು ನಮಗೆ ಮುಖಭಂಗ ಅಲ್ಲ. ನಮ್ಮ ಇಂಟರ್ ನಲ್ ಸಮಸ್ಯೆಯಿಂದ ಸೋಲಾಗಿದೆ . ವಿಧಾನ ಪರಿಷತ್ ಚುನಾವಣೆ, ವಿಧಾನ ಸಭೆ ಚುನಾವಣೆಗೂ ಸಂಬಂಧ ಇಲ್ಲ ಎಂದು ಮಾಜಿ ಸಿಎಂ ಹೆಚ್ಡಿಕೆ ತಿಳಿಸಿದರು.

ಎಂಎಲ್ಸಿ ಚುನಾವಣೆಗೂ ಸಾರ್ವತ್ರಿಕ ಚುನಾವಣೆಗೂ ವ್ಯತ್ಯಾಸವಿದೆ ನಮಗೆ ಮುಖ್ಯ ವಿಧಾನ ಸಭಾ ಸದಸ್ಯ ಸ್ಥಾನ ಈ ಬಾರಿ 123ರ ಗುರಿ ಏನಿಟ್ಟಿದ್ದೇವೆ ಅದು ನಮಗೆ ಮುಖ್ಯ. ಬರುವ ಅಗಸ್ಟ್ ನಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವೆ. ಇಡೀ ರಾಜ್ಯದಲ್ಲಿ ಹಳ್ಳಿ ಹಳ್ಳಿಗಳಲ್ಲಿ ವಾಸ್ತವ್ಯ ಮಾಡಿ ಪಂಚರತ್ನ ಯೋಜನೆ ಅನುಷ್ಠಾನಕ್ಕೆ ತರಲು ನಾಡಿನ ಜನತೆ ಆಶೀರ್ವಾದ ಪಡೆಯಲು ಸವಾಲ್ ಸ್ವೀಕರಿಸಿ ಹೊರಟಿದ್ದೇನೆ ಎಂದು ತಮ್ಮ ಮುಂದಿನ ಹೋರಾಟದ ಬಗ್ಗೆ ಹೆಚ್ಡಿಕೆ ಸುಳಿವು ನೀಡಿದರು.

ನಮ್ಮ ಕುಟುಂಬದಲ್ಲಿ ಎಲ್ಲರೂ ಸೋತು ಗೆದ್ದಿದ್ದೇವೆ

ನಮ್ಮ ಕುಟುಂಬದಲ್ಲಿ ಎಲ್ಲರೂ ಸೋತು ಗೆದ್ದಿದ್ದೇವೆ

ಮುಂದಿನ ನಮ್ಮ ಗುರಿ ಇರತಕ್ಕಂತಹದ್ದು ವಿಧಾನ ಸಭಾ ಚುನಾವಣೆ. ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ನಮ್ಮ ಕುಟುಂಬದಲ್ಲಿ ಎಲ್ಲರೂ ಸೋತು ಗೆದ್ದಿದ್ದೇವೆ, ಸೋತ ತಕ್ಷಣ ಹೆದರಿ ಕುಳಿತುಕೊಂಡಿರಲಿಲ್ಲ ನಾವು, ಕಾರ್ಯಕರ್ತರು, ಜನರ ಮಧ್ಯೆ ಕೆಲಸ ಮಾಡಿಕೊಂಡು ಬಂದಿದ್ದೇವೆ ಈಗಲೂ ನಮ್ಮ ಮುಂದೆ ಹೆಚ್ಚಿನ ಸ್ಥಾನ ಗೆಲ್ಲುವ ಸವಾಲಿದೆ. ಕಾಂಗ್ರೆಸ್ ಬಿಜೆಪಿ ಪಕ್ಷಕ್ಕಿಂತ ಜೆಡಿಎಸ್​ ಹೆಚ್ಚಿನ ಸ್ಥಾನ ಪಡೆಯುವ ಮೂಲಕ ಸ್ವತಂತ್ರವಾಗಿ ಜೆಡಿಎಸ್​ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.

ಜೆಡಿಎಸ್ ಸ್ವತಂತ್ರ ಸರ್ಕಾರ ತರುವ ನಿಟ್ಟಿನಲ್ಲಿ ಎಷ್ಟೇ ಅಡಚಣೆ ಬರಲಿ, ನಮ್ಮ ಪಕ್ಷವನ್ನು ಸರ್ವನಾಶ ಮಾಡುವ ಯಾವುದೇ ಹುನ್ನಾರ ನಡೆಸಲಿ ಅದೆಲ್ಲವನ್ನ ಮೆಟ್ಟಿ ನಿಂತು ಈ ಪಕ್ಷಕ್ಕೆ ಶಕ್ತಿ ತುಂಬುವ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಬಿಜೆಪಿಯ ಬಿ ಟೀಮ್ ಯಾರೆಂದು ಈಗ ಫ್ರೂವ್ ಆಗಿದೆಯಲ್ವ ಅದನ್ನೇ ಜನಗಳ ಮುಂದೆ ಚರ್ಚೆಮಾಡಿ ಬಿ ಟೀಮ್, ಸಿ ಟೀಮ್, ಇ ಟೀಮ್ ಯಾವುದು ಎನ್ನುವುದನ್ನು ಜನಗಳಿಗೆ ತಿಳಿಸಲಾಗುವುದು ಎಂದರು.

English summary
The RSS has launched the Agnipath project through the government with a view to recruited its youth to Army: HD Kumaraswamy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X