ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದಲ್ಲಿ ಸಿಎಂ ವಿರುದ್ಧವೇ ಗರಂ ಆದ ಜೆಡಿಎಸ್ ಕಾರ್ಯಕರ್ತರು

|
Google Oneindia Kannada News

Recommended Video

ರಾಮನಗರದಲ್ಲಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಗರಂ ಆದ ಜೆಡಿಎಸ್ ಕಾರ್ಯಕರ್ತರು | Oneindia Kannada

ರಾಮನಗರ, ಅಕ್ಟೋಬರ್.04: ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದು ಮುಖ್ಯಮಂತ್ರಿಯೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರವನ್ನು ಕಡೆಗಣಿಸುತ್ತಿದ್ದಾರೆ ಎಂಬ ಅಸಮಾಧಾನ ಕಾರ್ಯಕರ್ತರಲ್ಲಿದ್ದು, ಅದನ್ನು ಸಭೆಯಲ್ಲಿ ಹೊರ ಹಾಕಿರುವುದು ಬೆಳಕಿಗೆ ಬಂದಿದೆ.

ಬಿಡದಿಯ ಕೇತುಗಾನಹಳ್ಳಿ ತೋಟದ ಮನೆಯಲ್ಲಿ ನಡೆದ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಸಿಎಂ ವಿರುದ್ಧವೇ ತಿರುಗಿ ಬಿದ್ದ ನಾಯಕರು ಜನರ ಸಮಸ್ಯೆಗಳು ಆಲಿಸಲು ನೀವು ಕ್ಷೇತ್ರಕ್ಕೆ ಬರುತ್ತಿಲ್ಲ. ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ.

ದೇವೇಗೌಡರು ಹಾಸನ ಬಿಡಲ್ಲ: ಜೆಡಿಎಸ್ ಗೆ 9 ಸೀಟು ತಪ್ಪಲ್ಲದೇವೇಗೌಡರು ಹಾಸನ ಬಿಡಲ್ಲ: ಜೆಡಿಎಸ್ ಗೆ 9 ಸೀಟು ತಪ್ಪಲ್ಲ

ಜೆಡಿಎಸ್ ನವರೇ ಮುಖ್ಯಮಂತ್ರಿಯಾಗಿದ್ದರೂ ನಮ್ಮ ಮಾತನ್ನು ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಜನ ಅಸಮಾಧಾನಗೊಂಡಿದ್ದಾರೆ. ನಾವು ಜನಗಳಿಗೆ ಉತ್ತರಿಸುವುದು ಕಷ್ಟವಾಗುತ್ತಿದೆ ಎಂಬ ಅಸಮಾಧಾನ ಹೊರ ಹಾಕಿದ್ದಾರೆ.

ಆದರೆ ಕಾರ್ಯಕರ್ತರು, ಮುಖಂಡರು ಕೂಗಾಡುತ್ತಿದ್ದರೂ ಎಲ್ಲವನ್ನೂ ಸಮಾಧಾನವಾಗಿಯೇ ಕೇಳಿಸಿಕೊಂಡ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಎಲ್ಲದಕ್ಕೂ ಸಮಜಾಯಿಷಿ ನೀಡುತ್ತಲೇ ಬರತೊಡಗಿದ್ದರಾದರೂ ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ಕಾರ್ಯಕರ್ತರ ಮೇಲೆ ರೇಗಿದ ಪ್ರಸಂಗವೂ ನಡೆಯಿತು.

ಲೋಕಸಭೆ ಚುನಾವಣೆಗೆ ದೇವೇಗೌಡ ಕುಟುಂಬದಿಂದ ಮೂವರ ಸ್ಪರ್ಧೆ?ಲೋಕಸಭೆ ಚುನಾವಣೆಗೆ ದೇವೇಗೌಡ ಕುಟುಂಬದಿಂದ ಮೂವರ ಸ್ಪರ್ಧೆ?

ಇಷ್ಟಕ್ಕೂ ಕಾರ್ಯಕರ್ತರು ಮತ್ತು ಮುಖಂಡರು ಅಸಮಾಧಾನ ವ್ಯಕ್ತಪಡಿಸಲು ಕಾರಣವೂ ಇದೆ. ಅದೇನೆಂದು ತಿಳಿಯಲು ಈ ಲೇಖನ ಓದಿ...

 ಸಮಸ್ಯೆಗಳ ಸರಮಾಲೆ

ಸಮಸ್ಯೆಗಳ ಸರಮಾಲೆ

"ಕಳೆದ 20 ವರ್ಷಗಳಿಂದ ರಾಮನಗರದಲ್ಲಿ ಜೆಡಿಎಸ್ ಶಾಸಕರಿಲ್ಲದೆ ಕಾರ್ಯಕರ್ತರು ಮತ್ತು ಮುಖಂಡರು ಸಂಕಷ್ಟ ಅನುಭವಿಸುವಂತಾಗಿತ್ತು. ಇದೀಗ ಕ್ಷೇತ್ರದಿಂದ ಆಯ್ಕೆಯಾಗಿ ಮುಖ್ಯಮಂತ್ರಿಗಳಾಗಿದ್ದೀರಿ ಆದರೂ ಅಭಿವೃದ್ಧಿ ವಿಷಯವಾಗಿ ನಮ್ಮನ್ನು ಕಡೆಗಣಿಸಿದ್ದೀರಿ.

ನಿಗಮ ಮಂಡಳಿಗಳಿಗೆ ನೇಮಕ ಮಾಡುವ ವಿಚಾರದಲ್ಲಿ ಚನ್ನಪಟ್ಟಣ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡಿಲ್ಲ, ಚುನಾಯಿತ ಪ್ರತಿನಿಧಿಗಳನ್ನು ಪರಿಗಣಿಸುತ್ತಿಲ್ಲ" ಹೀಗೆ ಒಂದರ ಮೇಲೊಂದರಂತೆ ಸಮಸ್ಯೆಗಳ ಸರಮಾಲೆಯನ್ನು ಕಾರ್ಯಕರ್ತರು ಬಿಚ್ಚಿಟ್ಟರು.

 ಸಿಎಂಗೆ ಮನವಿ

ಸಿಎಂಗೆ ಮನವಿ

ಚನ್ನಪಟ್ಟಣ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಶಾಸಕರಿಲ್ಲದೆ ಜೆಡಿಎಸ್ ಕಾರ್ಯಕರ್ತರು ಸಂಕಷ್ಟ ಅನುಭವಿಸಿದರು. ನಾಲ್ಕು ತಿಂಗಳ ಹಿಂದೆ ಶಾಸಕರಾಗಿ ಆಯ್ಕೆ ಮಾಡಿಕೊಂಡಿರುವ ನೀವು ಮುಖ್ಯಮಂತ್ರಿಯಾಗಿ ಸರಿಯಾಗಿ ಕ್ಷೇತ್ರಕ್ಕೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಲು ಮುಂದಾಗಿಲ್ಲ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಟ್ಟರು.

ಜತೆಗೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದು, ಪಹಣಿ ವಿತರಣೆಗೆ ಒತ್ತು ಮತ್ತು ಮನೆ ನಿರ್ಮಾಣಕ್ಕೆ ಮರಳು ಪೂರೈಕೆಗೆ ಅವಕಾಶ ನೀಡುವುದು. ನೀರಾವರಿ, ಇ - ಖಾತಾ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಕೆಲಸವಾಗಬೇಕು ಎಂದು ಮನವಿ ಮಾಡಿದರು.

ರಾಮನಗರಕ್ಕೆ ಅನಿತಾ ಕುಮಾರಸ್ವಾಮಿ? 'ಸೀತೆ' ಹೇಳಿಕೆ ನೀಡಿದೆ ಸುಳಿವುರಾಮನಗರಕ್ಕೆ ಅನಿತಾ ಕುಮಾರಸ್ವಾಮಿ? 'ಸೀತೆ' ಹೇಳಿಕೆ ನೀಡಿದೆ ಸುಳಿವು

 ಭರವಸೆ ನೀಡಿದ ಕುಮಾರಸ್ವಾಮಿ

ಭರವಸೆ ನೀಡಿದ ಕುಮಾರಸ್ವಾಮಿ

ಎಲ್ಲವನ್ನು ಕೇಳಿದ ಸಿಎಂ ಕುಮಾರಸ್ವಾಮಿ, ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ನಡೆದುಕೊಳ್ಳಬೇಡಿ. ಇತರೆ ನಾಯಕರುಗಳ ಬಗ್ಗೆ ಮಾತನಾಡಬೇಡಿ. ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಚರ್ಚೆ ಮಾಡಿ. ಏನೇ ತಪ್ಪಾಗಿದ್ದರೂ ನಾನು ತಿದ್ದುಕೊಳ್ಳುತ್ತೇನೆ.

ದೇವೇಗೌಡರ ಪಕ್ಷ ನಿಮ್ಮಿಂದ ಉಳಿಯಬೇಕು. ಗಲಾಟೆಗೆ ಅಸ್ಪದ ನೀಡಬೇಡಿ ಸಣ್ಣದನ್ನೇ ದೊಡ್ಡದಾಗಿ ಮಾಡಬೇಡಿ. ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದು ಕೆಲವರು ದೂರಿದಾಗ ಸರಕಾರದ ಮುಖ್ಯ ಕಾರ್ಯದರ್ಶಿಗಳ ಜತೆ ಮಾತನಾಡಿ ಇನ್ನೆರಡು ದಿನಗಳಲ್ಲಿ ಕ್ಷೇತ್ರಕ್ಕೆ ಹಿರಿಯ ಅಧಿಕಾರಿಗಳನ್ನು ಕಳುಹಿಸಿ ಆಡಳಿತಕ್ಕೆ ಚಿಕೆತ್ಸೆ ನೀಡುವುದಲ್ಲದೇ ಭ್ರಷ್ಟ ಅಧಿಕಾರಿಗಳನ್ನು ನಿಯಂತ್ರಿಸುವುದಾಗಿ ಭರವಸೆ ನೀಡಿದರು.

 ಈ ಸಭೆಯ ಔಚಿತ್ಯ ಏನು?

ಈ ಸಭೆಯ ಔಚಿತ್ಯ ಏನು?

ಒಟ್ಟಾರೆ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗೊಂದಲ ಅಸಮಾಧಾನ ಎಲ್ಲವೂ ಇತ್ತು. ಇಷ್ಟಕ್ಕೂ ಈ ಸಭೆಯ ಔಚಿತ್ಯ ಏನು ಎಂಬುದನ್ನು ನೋಡುವುದಾದರೆ ಮುಂದಿನ ಉಪಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಜೆಡಿಎಸ್ ನಿಂದ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧಿಸುವ ಲಕ್ಷಣಗಳು ಕಂಡು ಬರುತ್ತಿದ್ದು, ಹೀಗಾಗಿ ಸಭೆಗೂ ಒಂದು ರೀತಿಯ ಮಹತ್ವ ಬಂದಂತಾಗಿದೆ.

ಮಂಡ್ಯ ರಾಜಕೀಯದಲ್ಲಿ ಗೆದ್ದವನೇ 'ಗೌಡ', ಪ್ರಜ್ವಲ್ ರೇವಣ್ಣಗೆ ಅಲ್ಲೂ ಕಷ್ಟಕಷ್ಟಮಂಡ್ಯ ರಾಜಕೀಯದಲ್ಲಿ ಗೆದ್ದವನೇ 'ಗೌಡ', ಪ್ರಜ್ವಲ್ ರೇವಣ್ಣಗೆ ಅಲ್ಲೂ ಕಷ್ಟಕಷ್ಟ

English summary
Activists have expressed boredom and said that Chief Minister HD Kumaraswamy are ignoring the Ramanagar constituency. See the detailed article on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X