• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಡಿಯೋ ವೈರಲ್: ರೈತನಿಗೆ ಹೆಣ್ಣು ಸಿಗುವಂತಹ ಕಾಯ್ದೆ ರೂಪಿಸಿ: ಸಚಿವರಿಗೆ ಬೇಡಿಕೆ ಸಲ್ಲಿಸಿದ ಯುವ ರೈತ

By ರಾಮನಗರ ಪ್ರತಿನಿಧಿ
|

ರಾಮನಗರ, ಫೆಬ್ರವರಿ 18: ಚನ್ನಪಟ್ಟಣದ ಯುವ ರೈತನೊಬ್ಬ ಫೋನ್ ಕರೆ ಮೂಲಕ ಸಚಿವ ಸಿಪಿ ಯೋಗೇಶ್ವರ್ ಅವರನ್ನು ಸಂಪರ್ಕಿಸಿ, ರೈತನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ರೈತ ಯುವಕರಿಗೆ ಮದುವೆಗೆ ಹೆಣ್ಣು ಸಿಗುವಂತಾ ಕಾಯ್ದೆ ರೂಪಿಸಿ ಎಂದು ಬೇಡಿಕೆ ಸಲ್ಲಿಸಿರುವ ಆಡಿಯೋ ಸಕತ್ ವೈರಲ್ ಆಗಿದೆ.

ಪ್ರವಾಸೋದ್ಯಮ ಮತ್ತು ಜೀವಶಾಸ್ತ್ರ ಸಚಿವ ಸಿಪಿ ಯೋಗೇಶ್ವರ್ ಅವರನ್ನು ಮಳವಳ್ಳಿ ಮೂಲದ ಪ್ರವೀಣ್ ಎಂಬ ಯುವ ರೈತ, ಫೋನ್ ಮೂಲಕ ಸಂಪರ್ಕ ಮಾಡಿದ ಯುವ ರೈತ ಮಕ್ಕಳ ಮದುವೆ ಬವಣೆಯನ್ನು ಬಿಚ್ಚಿಟ್ಟಿದ್ದಾನೆ.

ರಾಮನಗರ: ಫೆ.20ರಂದು 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಗೆ' ಕಾರ್ಯಕ್ರಮಕ್ಕೆ ಚಾಲನೆ

ರೈತ ಎಂದರೆ ಸಾಕು ಮದುವೆಗೆ ತಮ್ಮ ಹೆಣ್ಣು ಮಕ್ಕಳನ್ನು ಕೊಡಲು ಪೋಷಕರು ಹಿಂಜರಿಯುತ್ತಾರೆ. ಹಾಗೆ ಯುವತಿಯರು ಕೂಡ ರೈತನನ್ನು ಮದುವೆಯಾಗಲು ಒಪ್ಪುತ್ತಿಲ್ಲ ಎಂದು ತಮ್ಮ ನೋವನ್ನು ಸಚಿವ ಸಿಪಿ ಯೋಗೇಶ್ವರ್ ಬಳಿ ತನ್ನ ಅಳಲನ್ನು ತೊಡಿಕೊಂಡಿದ್ದಾನೆ.

ರೈತನಿಗೆ 35 ವರ್ಷ ಕಳೆದರೂ ಹೆಣ್ಣು ಸಿಗುತ್ತಿಲ್ಲ, ಅದೇ ಪಟ್ಟಣದಲ್ಲಿ ಕೂಲಿ ಮಾಡುತ್ತಿದ್ದರೆ ಹೆಣ್ಣು ಸಿಗುತ್ತಿವೆ. ಹಾಗಾಗಿ ತಾವು ಸರ್ಕಾರದಲ್ಲಿ ಯಾವುದಾರೂ ಕಾಯ್ದೆ ಮಾಡಿ ರೈತನನ್ನು ಮದುವೆಯಾಗುವ ಹೆಣ್ಣುಗಳಿಗೆ ಸಹಾಯ ಧನ ನೀಡುವಂತಹ ಯೋಜನೆ ಜಾರಿಗೆ ತನ್ನಿ ಎಂದು ಯುವ ರೈತನು ಸಚಿವ ಸಿಪಿವೈಗೆ ಬೇಡಿಕೆ ಸಲ್ಲಿಸಿದ್ದಾನೆ.

ರೈತ ಯುವಕ ಪ್ರವೀಣ್ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರವಾಸೋದ್ಯಮ ಮತ್ತು ಜೀವಶಾಸ್ತ್ರ ಸಚಿವ ಸಿಪಿ ಯೋಗೇಶ್ವರ್, ನಿನ್ನ ಬೇಡಿಕೆ ಒಳ್ಳೆಯದೇ, ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅನಿರ್ವಾಯತೆ ಇದೆ ಎಂದು ತಮ್ಮ ಸಹಮತ ವ್ಯಕ್ತಪಡಿಸುವ ಮೂಲಕ ಯುವಕನಿಗೆ ಧೈರ್ಯ ತುಂಬಿದ್ದಾರೆ.

English summary
An audio is viral when a young farmer from Channapatna has contacted Minister CP Yogeshwar over the phone and demanded that Form A Law To Get Girl For Farmer To Marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X