ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚನ್ನಪಟ್ಟಣ ತಹಶೀಲ್ದಾರ್ ನಡೆಗೆ ಬೇಸತ್ತು ವಿಷ ಕುಡಿದು ರೈತ ಆತ್ಮಹತ್ಯೆ ಯತ್ನ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 11: ಬಲವಂತವಾಗಿ ಕೃಷಿ ಜಮೀನಿನಲ್ಲಿ ಇಟ್ಟಿಗೆ ಕಾರ್ಖಾನೆಗೆ ರಸ್ತೆ ಮಾಡಲು ಮುಂದಾದ ಕಂದಾಯ ಇಲಾಖೆ ಅಧಿಕಾರಿಗಳ ದೌರ್ಜನ್ಯಕ್ಕೆ ಬೇಸತ್ತ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಘಟನೆ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಪ್ಪಾಜಿಗೌಡರ ಮಗ ಅನಿಲ್‌ಕುಮಾರ್(30) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಯುವ ರೈತನಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೇ, ರೈತನ ಜಮೀನಿನಲ್ಲಿ ಟ್ರಂಚ್ ತೆಗೆದಿದ್ದು, ಇದನ್ನು ಪ್ರಶ್ನಿಸಿದ ವೇಳೆ ತಹಶೀಲ್ದಾರ್ ಸುದರ್ಶನ್ ಮತ್ತು ಗ್ರಾಮಲೆಕ್ಕಾಧಿಕಾರಿ ಆನಂದ್ ಅವರು ಅನಿಲ್‌ಕುಮಾರ್ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ರೈತನಿಂದ ಲಂಚಕ್ಕೆ ಬೇಡಿಕೆ: ಮಾಗಡಿ ತಹಶೀಲ್ದಾರ್ ಎಸಿಬಿ ಬಲೆಗೆರೈತನಿಂದ ಲಂಚಕ್ಕೆ ಬೇಡಿಕೆ: ಮಾಗಡಿ ತಹಶೀಲ್ದಾರ್ ಎಸಿಬಿ ಬಲೆಗೆ

ಇದರಿಂದ ಮನನೊಂದ ಯುವರೈತ ಅನಿಲ್‌ಕುಮಾರ್, ಅಧಿಕಾರಿಗಳ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅನಿಲ್‌ಕುಮಾರ್‌ ಸ್ಥಿತಿ ಗಂಭೀರವಾಗಿದ್ದು, ಮಂಡ್ಯದ ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

A Farmer Attemt Suicide In Channapattana

ಇಗ್ಗಲೂರು ಗ್ರಾಮದ ಅನಿಲ್‌ಕುಮಾರ್‌ ತಮಗೆ ಸೇರಿದ ೨.೩೦ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದು, ಈತನ ಜಮೀನಿನ ಹಿಂಬದಿಯಲ್ಲಿನ ಇಟ್ಟಿಗೆ ಫ್ಯಾಕ್ಟರಿಗೆ ರಸ್ತೆ ನಿರ್ಮಿಸಿಕೊಡುವ ಉದ್ದೇಶದಿಂದ ಇಲ್ಲಿ ಸರ್ಕಾರಿ ನಕಾಶೆ ರಸ್ತೆ ಇದೆ ಎಂದು ತಹಶೀಲ್ದಾರ್ ಸುದರ್ಶನ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಆನಂದ್ ಬಲವಂತವಾಗಿ ಟ್ರಂಚ್ ತೆಗೆಯಲು ಮುಂದಾಗಿದ್ದು, ಅಲ್ಲದೇ ನನ್ನ ನಿರ್ಧಾರ ಸರಿಯಿದೆ ಎಂದು ರೈತ ಅನಿಲ್ ಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.

ಇನ್ನು ಅನಿಲ್‌ಕುಮಾರ್‌ ಅಧಿಕಾರಿಗಳ ನಡೆಯಿಂದ ಮನನೊಂದು, ಪಕ್ಕದ ಮಿಷನ್ ಮನೆಯಲ್ಲೆ ಇದ್ದ ಕ್ರಿಮಿನಾಶಕ ಔಷಧಿಯನ್ನು ತಂದು ನೀವು ನನಗೆ ಕಿರುಕುಳ ನೀಡುತ್ತಿದ್ದು, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಹಸೀಲ್ದಾರ್ ಅವರ ಎದುರೆ ವಿಷಸೇವನೆ ಮಾಡಿದ್ದಾರೆ. ಈ ವೇಳೆ ವಿಷದ ಬಾಟಲಿಯನ್ನು ಕಿತ್ತುಕೊಳ್ಳಲು ಮುಂದಾದ ಗ್ರಾಮ ಲೆಕ್ಕಿಗ ಆನಂದ್ ನ ಬಟ್ಟೆಯ ಮೇಲೆ ಸಹ ಚೆಲ್ಲಿದ್ದು ಅತನು ಕೂಡ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಚನ್ನಪಟ್ಟಣದಿಂದಲೇ ಗೆದ್ದು ಮತ್ತೆ ಸಿಎಂ ಆಗುತ್ತೇನೆ: ಎಚ್ಡಿಕೆಚನ್ನಪಟ್ಟಣದಿಂದಲೇ ಗೆದ್ದು ಮತ್ತೆ ಸಿಎಂ ಆಗುತ್ತೇನೆ: ಎಚ್ಡಿಕೆ

ರೈತರ ತೆಂಗು ಮತ್ತು ಅಡಕೆ ಮರ ಕತ್ತರಿಸಿ ದಬ್ಬಾಳಿಕೆ ಮಾಡಿ ಜನರಿಂದ ಛೀಮಾರಿಗೆ ಒಳಗಾಗಿರುವ ಗುಬ್ಬಿ ತಾಲ್ಲೂಕು ತಹಶೀಲ್ದಾರ್ ಮತ್ತು ಗ್ರಾಮಲೆಕ್ಕಿಗ ಪ್ರಕರಣ ಮಾಸುವ ಮುನ್ನವೇ ಅಧಿಕಾರಿಗಳ ದರ್ಪಕ್ಕೆ ರೈತ ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದಾನೆ.

A Farmer Attemt Suicide In Channapattana

ರೈತ ಅನಿಲ್ ನಡೆಯಿಂದ ಬೆದರಿದ ಗ್ರಾಮಲೆಕ್ಕಿಗ ಆನಂದ್ ರೈತನೇ ನನಗೆ ವಿಷ ಕುಡಿಸಲು ಬಂದ ಎಂದು ಆರೋಪಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ನಾಟಕವಾಡಿದ್ದಾರೆ ಎಂದು ಗ್ರಾಮದ ರೈತರು ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಹಶೀಲ್ದಾರ್ ಸುದರ್ಶನ್‌, ರೈತ ಅನಿಲ್ ಕೈಯಿಂದ ಗ್ರಾಮಲೆಕ್ಕಿಗ ಆನಂದ್ ವಿಷವನ್ನು ಕಿತ್ತುಕೊಳ್ಳುವ ವೇಳೆ ಆತನ ಮೇಲೆ ಚಲ್ಲಿತು ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

English summary
A farmer who was fed up with the atrocities of Revenue Department officials tried to commit suicide in Channapattana taluku.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X