• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿಕ್ಷಕರ ಕ್ಷೇತ್ರದ ಚುನಾವಣೆ: ರಾಮನಗರದಲ್ಲಿ ಶೇ.90ರಷ್ಟು ಮತದಾನ

By ರಾಮನಗರ ಪ್ರತಿನಿಧಿ
|

ರಾಮನಗರ, ಅಕ್ಟೋಬರ್ 28: ಜಿಲ್ಲೆಯಲ್ಲಿ ಬುಧವಾರ ನಡೆದ ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶೇ.90ರಷ್ಟು ಮತದಾನ ದಾಖಲಾಗಿದೆ.

ಜಿಲ್ಲೆಯಲ್ಲಿ ಪುರುಷರು-1545, ಮಹಿಳೆಯರು- 953 ಹಾಗೂ ಇತರರು-1 ಸೇರಿ ಒಟ್ಟು 2499 ಮತದಾರರಿದ್ದು, ಪುರುಷರು-1414, ಮಹಿಳೆಯರು-843 ಹಾಗೂ ಇತರರು -0 ಸೇರಿದಂತೆ ಒಟ್ಟು 2257 ಮತದಾರರು ಮತ ಚಲಾಯಿಸಿದ್ದಾರೆ.

ಅ.28 ರಂದು ವಿಧಾನ ಪರಿಷತ್ ಚುನಾವಣೆ: 2.34 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ

ಶೇಕಡಾವಾರು ಪುರುಷರು ಶೇ 92ರಷ್ಟು ಮತ್ತು ಮಹಿಳೆಯರು ಶೇ 88ರಷ್ಟು ಮತದಾನ ಮಾಡಿದ್ದಾರೆ. ಒಟ್ಟಾರೆ ಮತದಾನ ಮುಕ್ತಾಯದ ಅವಧಿಗೆ ಶೇ.90 ರಷ್ಟು ದಾಖಲಾಗಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಗೊಂದಲವಿಲ್ಲದೇ ಶಾಂತಿಯುತವಾಗಿ ಚುನಾವಣೆ ನಡೆಯಿತ್ತು. ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 11 ಪೋಲಿಂಗ್ ಸ್ಟೇಷನ್ ನಿರ್ಮಾಣ ಮಾಡಲಾಗಿತ್ತು.

ಚುನಾವಣೆ; ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ. 73.32ರಷ್ಟು ಮತದಾನ

   ರೌಡಿಸಂ ಮಾಡಿದ್ರೆ ಚುನಾವಣೆ ಗೆಲ್ತಾರ | Oneindia Kannada

   80 ಜನ ಪೊಲೀಂಗ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು. ಇನ್ನೂ ಚುನಾವಣಾ ಕಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪುಟ್ಟಣ್ಣ, ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರವೀಣ್ ಪೀಟರ್, ಜೆಡಿಎಸ್ ನಿಂದ ಎ.ಪಿ.ರಂಗನಾಥ್ ಹಾಗೂ ಪಕ್ಷೇತರರು ಸೇರಿದಂತೆ 9 ಮಂದಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

   English summary
   90 percent voting recorded in ramanagar district for bengaluru teachers constituency election
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X