ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆನರಾ ಬ್ಯಾಂಕ್ ಲಾಕರ್‌ನಲ್ಲಿ 9.5 ಕೆಜಿ ನಕಲಿ ಚಿನ್ನ; ಮ್ಯಾನೇಜರ್ ಬಂಧನ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಆಗಸ್ಟ್ 04; ರಾಮನಗರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ. ಸುಮಾರು 24 ಪ್ರಕರಣಗಳನ್ನು ಭೇದಿಸಿ, 3 ಕೋಟಿ ಮೌಲ್ಯದ ಚಿನ್ನಾಭರಣ, ನಗದು, ವಾಹನಗಳನ್ನು ಜಪ್ತಿ ಮಾಡಿದ್ದಾರೆ. 6 ಜನರನ್ನು ಬಂಧಿಸಿ 5.7 ಕೆಜಿ ಚಿನ್ನ, 9 ವಾಹನಗಳು, 23 ಲಕ್ಷ ನಗದು ಹಾಗೂ 2 ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಕುದೂರು, ಸಾತನೂರು, ಕಗ್ಗಲೀಪುರ, ಐಜೂರು ಪೊಲೀಸರು ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ, ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಬಳಕೆ, ಬೈಕ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿದ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ‌. ಅದರಲ್ಲೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಸುಮಾರು 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಸರಗಳನನ್ನು ಬಂಧಿಸಲಾಗಿದೆ.

 ರಾಮನಗರ: ಬೊಮ್ಮಾಯಿ ಸರ್ಕಾರದಲ್ಲಿಯಾದರೂ ಮಾವು ಸಂಸ್ಕರಣ ಘಟಕ ಅನುಷ್ಠಾನಗೊಳ್ಳುವುದೇ? ರಾಮನಗರ: ಬೊಮ್ಮಾಯಿ ಸರ್ಕಾರದಲ್ಲಿಯಾದರೂ ಮಾವು ಸಂಸ್ಕರಣ ಘಟಕ ಅನುಷ್ಠಾನಗೊಳ್ಳುವುದೇ?

7 ವರ್ಷಗಳ ನಂತರ ಸೆರೆಸಿಕ್ಕ‌; ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನನ್ನು ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಸನ ಮೂಲದ ಸಂತೋಷ್ ಬಂಧಿತ ಆರೋಪಿ. ಒಂಟಿ ಮನೆಗೆ ನುಗ್ಗಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ದೋಚಿ, ಮಾರಾಟ ಮಾಡಿದ ಹಣದಲ್ಲಿ ಐಶಾರಾಮಿ ಬದುಕು ಕಟ್ಟಿಕೊಂಡಿದ್ದ.

 Infographics: ಆಗಸ್ಟ್ 3ರಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ Infographics: ಆಗಸ್ಟ್ 3ರಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ

9 Kg Gold Missing From Bank Locker Bank Manager Arrested

ಕೋಲಾರ, ಮಂಡ್ಯ, ಹಾಸನ, ದಾವಣಗೆರೆ ಹಾರೋಹಳ್ಳಿ ಹಾಗೂ ಕಗ್ಗಲೀಪುರ ಪೊಲೀಸ್ ಠಾಣೆಗಳಲ್ಲಿ ಸುಮಾರು 14ಕ್ಕೂ ಹೆಚ್ಚು ಪ್ರಕರಣಗಳು ಸಂತೋಷ್ ವಿರುದ್ಧ ದಾಖಲಾಗಿತ್ತು. ಬಂಧಿತ ಆರೋಪಿಯಿಂದ ಸುಮಾರು 40 ಲಕ್ಷ ರೂ ಮೌಲ್ಯದ 802 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡು, ಆರೋಪಿಯ ವಿಚಾರಣೆ ಮುಂದುವರೆಸಿದ್ದಾರೆ.

ರಾಮನಗರ; ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕ ಸ್ಥಾಪನೆ ರಾಮನಗರ; ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕ ಸ್ಥಾಪನೆ

ಏಳು ವರ್ಷಗಳಿಂದ ಆರೋಪಿ ತಲೆಮರೆಸಿಕೊಂಡಿದ್ದ ಇದೀಗ ಆತನ ಬೆನ್ನು ಬಿದ್ದು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ರಾಮನಗರ ಎಸ್ಪಿ ಎಸ್. ಗಿರೀಶ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಕಲಿ ಚಿನ್ನ ಇಟ್ಟ ಬ್ಯಾಂಕ್ ವ್ಯವಸ್ಥಾಪಕ; ಬ್ಯಾಂಕಿನಲ್ಲಿ ಗಿರವಿ ಇಟ್ಟಿದ್ದ ಚಿನ್ನದ ಅಭರಣಗಳನ್ನು ಎಗರಿಸಿ ಅದೇ ಜಾಗದಲ್ಲಿ ನಕಲಿ ಒಡವೆ ಇಟ್ಟು ಬ್ಯಾಂಕ್ ಹಾಗೂ ಗ್ರಾಹಕರನ್ನು ಯಾಮಾರಿಸಲು ಯತ್ನಿಸಿದ ಪ್ರಕರಣ ಪತ್ತೆ ಯಾಗಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರಿನ ಹೊನ್ನಗನಹಳ್ಳಿಯಲ್ಲಿರು ಕೆನರಾ ಬ್ಯಾಂಕ್‌ನಲ್ಲಿ ನಡೆದಿದೆ.

ಅಡವಿಟ್ಟಿದ್ದ ಬಹುತೇಕ ಚಿನ್ನವನ್ನು ನಕಲಿ ಮಾಡಲಾಗಿದೆ. ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕನೇ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿದ್ದಾನೆ. ಗಿರವಿ ಇಟ್ಟ ಓಡವೆಗಳಿಗೆ ಬಡ್ಡಿ ಕಟ್ಟದೆ ಇರೋದನ್ನ ಬ್ಯಾಂಕ್ ನಿಯಮದಂತೆ ಹರಾಜು ಮಾಡಲಾಗುತ್ತೆ. ಈ ನಿಯಮವನ್ನ ಚೆನ್ನಾಗಿ ತಿಳಿದಿದ್ದ ಬ್ಯಾಂಕ್ ಮ್ಯಾನೇಜರ್ ಅನಂತ್ ನಾಗ್ ಅಂತಹ ಚಿನ್ನಾಭರಣಗಳನ್ನ ಬ್ಯಾಂಕ್ ಲಾಕರ್‌ನಿಂದ ತಗೆದು ಆ ಜಾಗಕ್ಕೆ ಅದೇ ರೀತಿ ಇದೆ ಇರುವ ಚಿನ್ನಾಭರಣಗಳನ್ನ ತಂದು ಇಟ್ಟು ಜೈಲು ಪಾಲಾಗಿದ್ದಾನೆ.

ಬ್ಯಾಂಕ್ ನಿಯಮದಂತೆ ಇಟ್ಟ ಓಡವೆಗಳಿಗೆ ಬಡ್ಡಿಯನ್ನು ಕಟ್ಟದೆ ರಿನಿವಲ್ ಮಾಡಿಕೊಳ್ಳದೆ ಇರೋ ಚಿನ್ನವನ್ನು ಹರಾಜು ಮಾಡಲಾಗುತ್ತೆ. ಅದೇ ರೀತಿ ಜುಲೈ 17 ರಂದು ಓಡವೆ ಹರಾಜು ಮಾಡಲಾಗುತ್ತಿತ್ತು. ಇದಕ್ಕೆ ಅಂತಾ ಮಂಡ್ಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಿಂದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಮಾಕಾಂತ್ ಆಗಮಿಸಿದ್ದರು.

ಬ್ಯಾಂಕ್‌ಗೆ ಬಂದ ರಮಾಕಾಂತ್ ಹಾರಜಿಗೆ ಇದ್ದ ಚಿನ್ನಾಭರಣಗಳನ್ನು ಪರೀಕ್ಷೆ ಮಾಡಿದರೆ ಆದ್ರೆ ಅಲ್ಲಿ ಇದ್ದ ಚಿನ್ನಾಭರಣಗಳು ನಕಲಿ ಎಂಬುದು ತಿಳಿಯುತ್ತದೆ. ಒಟ್ಟು 352 ಗ್ರಾಹಕರು ಇಟ್ಟಿದ್ದ 9.5 ಕೆಜಿ ಚಿನ್ನಾಭರಣಗಳು ನಕಲಿಯಾಗಿವೆ. ಈ ಸಂಬಂಧ ರಮಾಕಾಂತ್ ಸಾತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಬ್ಯಾಂಕ್ ಮ್ಯಾನೇಜರ್ ಅನಂತ್ ನಾಗ್ ಹಾಗೂ ಅಸಲಿ ಚಿನ್ನವನ್ನು ನಕಲಿ ಮಾಡಿಕೊಡುತ್ತಿದ್ದ ಗಿರವಿ ಅಂಗಡಿ ಕೆಲಸಗಾರ ರಜನೀಶ್ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯ ಹೊರ ಬಂದಿದೆ. ಅನಂತ್ ನಾಗ್ ಬ್ಯಾಂಕ್‌ನಲ್ಲಿದ್ದ ಓಡವೆಗಳನ್ನ್ ಈ ರಜನೀಶ್‌ಗೆ ನೀಡಿ ಅದೇ ರೀತಿ ಇರುವ ನಕಲಿ ಓಡವೆಗಳನ್ನು ಮಾಡುವಂತೆ ಹೇಳಿದ್ದ. ನಕಲಿ ಓಡವೆಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುತ್ತಿದ್ದ.

ಐಜೂರು ಪೊಲೀಸ್ ಠಾಣೆ; ಐಜೂರು ಪೋಲಿಸ್ ಠಾಣೆಯ ಪೊಲೀಸರು ಎರಡು ಕಳ್ಳತನ ಪ್ರಕರಣಗಳಲ್ಲಿ ಪ್ರವೀಣ್ ಕುಮಾರ ಜೈನ್ ಎಂಬಾತನ್ನು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ 128 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.

Recommended Video

ಮಗಳು ಹಾಗೂ ತಾಯಿಯ ಬಗ್ಗೆ ಮನ ಬಿಚ್ಚಿ ಮಾತಾಡಿದ ವಿರಾಟ್ | Oneindia Kannada

ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿ ಪ್ರವೀಣ್ ಕುಮಾರ ಜೈನ್ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ, ಉಪ್ಪಾರಪೇಟೆ ಪೊಲೀಸ್ ಠಾಣೆ, ಮಾಗಡಿ ರಸ್ತೆ ಪೊಲೀಸ್ ಠಾಣೆ ಮತ್ತು ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಪ್ರಕರಣಗಳನ್ನು ಪತ್ತೆಹಚ್ಚಿ, ಆತನಿಂದ ಸುಮಾರು 2.5 ಲಕ್ಷ ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

English summary
Ramanagara police arrested Sathanur Canara bank manger in connection with the 9.5 kg gold missing from bank locker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X