ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ; 8405 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 05: " ರಾಮನಗರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಸುಮಾರು 8405 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ಲಸಿಕೆ ನೀಡಲು ನಿರ್ಧಾರ ಮಾಡಲಾಗಿದೆ" ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಿರಂಜನ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ರಾಜ್ಯದಲ್ಲಿ ಕೋವಿಡ್ ಲಸಿಕೆ ನೀಡಲು ಸಿದ್ಧತೆ ನಡೆಯುತ್ತಿದೆ. ಜಿಲ್ಲೆಯಲ್ಲಿ 8405 ಮಂದಿಯನ್ನು ಲಸಿಕೆ ನೀಡಲು ಗುರುತಿಸಿದ್ದು, ಸರ್ಕಾರಿ ಆರೋಗ್ಯ ಕಾರ್ಯಕರ್ತರು 5,440 ಮಂದಿ ಹಾಗೂ 2,961 ಮಂದಿ ಖಾಸಗಿ ಆರೋಗ್ಯ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು" ಎಂದರು.

ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆ ಪರ ಸಚಿವ ಸುಧಾಕರ್ ಬ್ಯಾಟಿಂಗ್ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆ ಪರ ಸಚಿವ ಸುಧಾಕರ್ ಬ್ಯಾಟಿಂಗ್

"ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಲು ಸುಮಾರು 270 ಮಂದಿಗೆ ತರಬೇತಿ ನೀಡಲಾಗಿದೆ. ಸುಮಾರು 395 ಆರೋಗ್ಯ ಕೇಂದ್ರಗಳನ್ನು ಇದಕ್ಕಾಗಿ ಸಜ್ಜುಗೊಳಿಸಿದ್ದೇವೆ. ಜಿಲ್ಲೆಯಲ್ಲಿ ಲಸಿಕೆಗಳನ್ನು ಶೇಖರಣೆ ಮಾಡಲು ಅಗತ್ಯವಾದ ಫ್ರೀಜರ್ ಸೌಲಭ್ಯ ಎಲ್ಲಾ ಕೇಂದ್ರಗಳಲ್ಲಿ ಇದೆ" ಎಂದು ವಿವರಣೆ ನೀಡಿದರು.

ಬಳ್ಳಾರಿಯಲ್ಲಿ ಎಷ್ಟು ಜನರಿಗೆ‌ ಕೊರೊನಾ ಲಸಿಕೆ ಹಾಕಲಾಗುತ್ತೆ ಗೊತ್ತಾ? ಬಳ್ಳಾರಿಯಲ್ಲಿ ಎಷ್ಟು ಜನರಿಗೆ‌ ಕೊರೊನಾ ಲಸಿಕೆ ಹಾಕಲಾಗುತ್ತೆ ಗೊತ್ತಾ?

8405 Health Workers Will Get First Phase Of COVID Vaccine

"ಕೇಂದ್ರ ಸರ್ಕಾರವು ದೇಶದ ಎಲ್ಲಾ ರಾಜ್ಯಗಳಿಗೆ ಶೀಘ್ರದಲ್ಲಿಯೇ ಕೋವಿಡ್-19 ಲಸಿಕೆಯನ್ನು ಹಸ್ತಾಂತರ ಮಾಡಲಿದೆ. ಲಸಿಕೆಯನ್ನು ಮೊದಲ ಹಂತದಲ್ಲಿ ಕೋವಿಡ್-19 ವಾರಿಯರ್ಸ್ ನೀಡಲು ಯೋಜನೆ ಸಿದ್ದಗೊಂಡಿದೆ" ಎಂದು ನಿರಂಜನ್ ತಿಳಿಸಿದರು.

Timeline: ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಬೆಳೆದ ವಿವಿಧ ಹಂತಗಳುTimeline: ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಬೆಳೆದ ವಿವಿಧ ಹಂತಗಳು

"ಎರಡನೇ ಹಂತದಲ್ಲಿ 60 ವರ್ಷ ಹಾಗೂ 50 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಲಾಗುತ್ತದೆ. ನಂತರ ಹಂತ ಹಂತವಾಗಿ ಜನರಿಗೆ ಲಸಿಕೆ ಸಿಗಲಿದೆ" ಎಂದು ಆರೋಗ್ಯಾಧಿಕಾರಿ ನಿರಂಜನ್ ಮಾಹಿತಿ ನೀಡಿದರು.

8405 Health Workers Will Get First Phase Of COVID Vaccine

"ಈಗಾಗಲೇ ಜಿಲ್ಲೆಯಲ್ಲಿ ಪ್ರತಿ ದಿನ 3 &4 ಮಂದಿ ಹೊಸ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಹಾವಳಿ ಕಡಿಮೆಯಾಗಿದ್ದು ಸಮಾಧಾನದ ತಂದಿದೆ. ಜನರು ಮುಂದೆಯು ಅಗತ್ಯ ಎಚ್ಚರಿಕೆಗಳನ್ನು ಪಾಲಿಸುವ ಮೂಲಕ ಜಿಲ್ಲೆಯನ್ನು ಕೋವಿಡ್ ಮುಕ್ತ ಮಾಡಲು ಸಹಕಾರ ನೀಡಬೇಕು" ಎಂದು ಮನವಿ ಮಾಡಿದರು.

Recommended Video

ಬಿಬಿಎಂಪಿ ನಿರ್ಧಾರಕ್ಕೆ ತೇಜಸ್ವಿ ಆಕ್ಷೇಪ!! | Tejasvi Surya | Oneindia Kannada

English summary
8405 health workers identified for first phase of COVID vaccine in Ramanagara district. 395 primary health centre will be used for this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X