ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಂಸದೂಟ ಸೇವಿಸಿ ಅಸ್ವಸ್ಥವಾಗಿದ್ದ 6 ವರ್ಷದ ಬಾಲಕಿ ಸಾವು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 10: ಬುಧವಾರದಂದು ಚನ್ನಪಟ್ಟಣ ತಾಲ್ಲೂಕಿನ ಮೊಳೆದೊಡ್ಡಿ ಗ್ರಾಮದಲ್ಲಿ ಬೀಗರ ಔತಣ ಕೂಟದಲ್ಲಿ ಮಾಂಸದೂಟ ಸೇವಿಸಿ ಜನರು ಅಸ್ವಸ್ಥತಗೊಂಡ ಘಟನೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಅಸ್ಪತ್ರೆಯಲ್ಲಿ 6 ವರ್ಷದ ಹೆಣ್ಣುಮಗು ಮೃತಪಟ್ಟಿದೆ.

ಬೀಗರ ಔತಣದಲ್ಲಿ ಊಟ ಮಾಡಿದ್ದ 6 ವರ್ಷದ ಹೆಣ್ಣು ಮಗು ಚೈತನ್ಯ ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದು, ಗ್ರಾಮದ ವೆಂಕಟಭೈರ-ಸೌಮ್ಯ ದಂಪತಿಯ ಮಗು ಚೈತನ್ಯ ಬೀಗರೂಟದಲ್ಲಿ ಫುಡ್ ಪಾಯ್ಸನ್ ನಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.

ರಾಮನಗರ: ಮಾಂಸದೂಟ ಸೇವಿಸಿ 100 ಜನ ತೀವ್ರ ಅಸ್ವಸ್ಥರಾಮನಗರ: ಮಾಂಸದೂಟ ಸೇವಿಸಿ 100 ಜನ ತೀವ್ರ ಅಸ್ವಸ್ಥ

ಚನ್ನಪಟ್ಟಣ ತಾಲ್ಲೂಕಿನ ಮೊಳೆದೊಡ್ಡಿ ಗ್ರಾಮದಲ್ಲಿ ಭಾನುವಾರ ನಡೆದಿದ್ದ ಮದುವೆಯ ಹಿನ್ನಲೆಯಲ್ಲಿ ಮಂಗಳವಾರ ಯುವತಿ ಮನೆಯವರಿಂದ ಬೀಗರ ಔತಣ ಕೂಡ ಆಯೋಜನೆ ಮಾಡಲಾಗಿತ್ತು. ಔತಣಕೂಟದಲ್ಲಿ ಊಟ ಸೇವಿಸಿದ ಸುಮಾರು 700 ರಿಂದ 800 ಜನರಲ್ಲಿ 250 ರಿಂದ 300 ಜನ ಅಸ್ವಸ್ಥರಾಗಿದ್ದರು.

Ramanagara: 6-Year-Old Girl Dies After Eating Meat

ಬೀಗರ ಔತಣ ಕೂಟದಲ್ಲಿ ಊಟ ಸೇವಿಸಿದ್ದ ಕೆಲವರಿಗೆ ಬೆಳಿಗ್ಗೆ ಆಗುವಷ್ಟರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಈ ವಿಚಾರ ಎಲ್ಲಾ ಕಡೆ ವ್ಯಾಪಿಸಿದೆ. ವಿಚಾರ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿ ಪಿಡಿಒಗೆ ವಿಷಯ ಮುಟ್ಟಿಸಿದ್ದಾರೆ.

ಎಚ್ಚೆತ್ತುಕೊಂಡ ಅಧಿಕಾರಿಗಳು ಅಸ್ವಸ್ಥರಾಗಿದ್ದ ಜನರನ್ನು ಅದೇ ಗ್ರಾಮದ ಅಂಗನವಾಡಿ ಹಾಗೂ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಇನ್ನು ತೀವ್ರ ಆರೋಗ್ಯದಲ್ಲಿ ಏರುಪೇರಾಗಿದ್ದ ರೋಗಿಗಳನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಿದ್ದರು.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

Recommended Video

Corona ಪರೀಕ್ಷೆ ದರ ಕರ್ನಾಟಕದಲ್ಲಿ ಮಾತ್ರ ಬದಲಾಗಲು ಕಾರಣವೇನು | Oneindia Kannada

ಮೊಳೆದೊಡ್ಡಿ ಗ್ರಾಮದ ಮುತ್ತುರಾಜ್ ಹಾಗೂ ಅದೇ ಗ್ರಾಮದ ರೋಹಿಣಿ ಎಂಬುವವರು ಕಳೆದ ಮೂರು ದಿನಗಳ ಹಿಂದೆ ವಿವಾಹವಾಗಿದ್ದರು. ವಧುವಿನ ಮನೆಯವರು ಗ್ರಾಮದ ದೇವಾಲಯದ ಬಳಿ ಮದುವೆ ಕಾರ್ಯ ಮುಗಿಸಿದ್ದರು. ಸಂಪ್ರದಾಯದಂತೆ ಹೆಣ್ಣಿನ ಮನೆಯವರು ಬುಧವಾರ ಗ್ರಾಮದಲ್ಲಿಯೇ ಬೀಗರ ಔತಣಕೂಟ ಆಯೋಜನೆ ಮಾಡಿದ್ದರು.

English summary
Death of a 6-year-old girl after Eating Meat In Ramanagara District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X