ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಟಲ್ ಜೀವಜಲ ಯೋಜನೆಗೆ ರಾಮನಗರದ 49 ‌ಗ್ರಾಮಗಳು ಆಯ್ಕೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಫೆಬ್ರವರಿ 12: ಅಂತರ್ಜಲ ಮಟ್ಟವನ್ನು ಸುಧಾರಿಸಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಜಾರಿಯಾದ ಕೇಂದ್ರದ ಅಟಲ್ ಭೂಜಲ ಯೋಜನೆಗೆ ರಾಮನಗರ ಜಿಲ್ಲೆಯ 49 ಗ್ರಾಮಗಳನ್ನು ಆಯ್ಕೆ ಮಾಡಿದೆ. ಅಟಲ್ ಜೀವಜಲ ಯೋಜನೆಗೆ ಜಿಲ್ಲಾ ಪಂಚಾಯತಿ ಸಿಇಒ ಇಕ್ರಂ ಅವರು ಜಿಲ್ಲಾ ಪಂಚಾಯತ್ ಭವನದಲ್ಲಿ ಚಾಲನೆ ನೀಡಿದರು.

ರಾಮನಗರ ಜಿಲ್ಲೆಯಲ್ಲಿ ಎರಡು ತಾಲ್ಲೂಕುಗಳಿಂದ 49 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಕನಪುರ ತಾಲ್ಲೂಕಿನ ಅರೆಕಟ್ಟೆ ದೊಡ್ಡಿ, ಚೊಡಹಳ್ಳಿ, ಕಬ್ಬಾಳ್, ಚಕನಹಳ್ಳಿ, ಅರಕೆರೆ, ದೊಡ್ಡ ಮರಳವಾಡಿ, ಯಲಚನವಾಡಿ, ಹೆರಿಂದ್ಯಾಪ್ಪನಹಳ್ಳಿ, ಕೋಲಗೊಂಡನಹಳ್ಳಿ, ಬನವಾಸಿ, ಹುಣಸನಹಳ್ಳಿ, ಕೊಡಿಹಳ್ಳಿ, ತೋಕಸಂದ್ರ, ಅಚಲು, ಬುದಿಗುಪ್ಪೆ, ಹೊನ್ನಿಗನಹಳ್ಳಿ, ಹೊಸದುರ್ಗ, ಹುಕುಂದ, ನಾರಾಯಣಪುರ, ಸಾತನೂರು, ಶಿವನಹಳ್ಳಿ, ಟಿ.ಬೇಕುಪ್ಪೆ, ಹಳ್ಳಿಮಾರನಹಳ್ಳಿ, ಕಗ್ಗಲಹಳ್ಳಿ, ಟಿ.ಹೊಸಹಳ್ಳಿ, ಬನ್ನಿಮುಕೂಡ್ಲೂ, ದ್ಯಾವಸಂದ್ರ, ಕಲ್ಲಹಳ್ಳಿ, ಸೊಮಂದ್ಯಾಪನಹಳ್ಳಿ, ತುಂಗಣಿ ಸೇರಿದಂತೆ ಒಟ್ಟು 30 ಗ್ರಾಮಗಳನ್ನು ಗುರುತಿಸಲಾಗಿದೆ.

ರಾಮನಗರ; ಆರೋಗ್ಯ ವಿಶ್ವವಿದ್ಯಾಲಯ ಶೀಘ್ರವೇ ನಿರ್ಮಾಣ ರಾಮನಗರ; ಆರೋಗ್ಯ ವಿಶ್ವವಿದ್ಯಾಲಯ ಶೀಘ್ರವೇ ನಿರ್ಮಾಣ

ಇನ್ನು ರಾಮನಗರ ತಾಲ್ಲೂಕಿನ ಅಕ್ಕೂರು, ದೊಡ್ಡಂಗನವಾಡಿ, ಹರಿಸಂದ್ರ, ಜಾಲಮಂಗಲ, ಕೂಟಗಲ್, ಲಕ್ಷಿಪುರ, ಸುಗ್ಗನಹಳ್ಳಿ, ಬಿಳಗುಂಬ, ಮಯಗಾನಹಳ್ಳಿ, ಶ್ಯಾನುಬೊಗನಹಳ್ಳಿ, ಬನ್ನಿಕುಪ್ಪೆ(ಕೆ), ಬನ್ನಿಕುಪ್ಪೆ(ಬಿ), ವಿಬೂತಿಕೆರೆ, ಮಂಚನಾಯಕನಹಳ್ಳಿ, ಹುಣಸನಹಳ್ಳಿ, ಕಂಚನಕುಪ್ಪೆ, ಗೋಪಹಳ್ಳಿ, ಕಂಚುಗಾರನಹಳ್ಳಿ, ಬೈರಮಂಗಲ ಸೇರಿ ಒಟ್ಟು 19 ಗ್ರಾಮಗಳನ್ನು ಗುರುತಿಸಲಾಗಿದೆ.

Ramanagara: 49 Villages In Ramanagara To Be Selected For Atal Water Project

ಅಟಲ್ ಭೂ ಜಲ ಯೋಜನೆಯ ನೋಡಲ್ ಅಧಿಕಾರಿ ರವಿ ಸಿ.ಪಿ. ಮಾತನಾಡಿ, ನೀರಿನ ಮಿತವ್ಯಯ ಸಾಧಿಸುವುದು ಮತ್ತು ಅದರಂತೆ ಅಂತರ್ಜಲ ಅಭಿವೃದ್ಧಿ ಪಡಿಸುವುದು, ಪರಿಣಾಮಕಾರಿ ಅಂತರ್ಜಲ ನಿರ್ವಹಣೆ ಮತ್ತು ಸಾಂಸ್ಥಿಕ ಚೌಕಟ್ಟನ್ನು ಬಲಪಡಿಸುವುದು, ಸಮರ್ಪಕ ನೀರಿನ ಬಳಕೆಗಾಗಿ ಉತ್ತಮ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಇದಕ್ಕಾಗಿ ಅಧ್ಯಯನ ಕೊಳವೆ ಬಾವಿಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಇಂದು ಸಾಂಕೇತಿಕವಾಗಿ ಹುಣಸನಹಳ್ಳಿಯಲ್ಲಿ ಅಧ್ಯಯನ ಕೊಳವೆ ಬಾವಿಯನ್ನು ನಿರ್ಮಿಸಿ ಅಧ್ಯಯನ ಪ್ರಾರಂಭಿಸಲಾಗಿದೆ. ಯೋಜನೆಯ ಅನುಷ್ಠಾನಕ್ಕೆ ತಕ್ಕಂತೆ ಅನುದಾನಕ್ಕೆ ಪ್ರಸ್ತವಾನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

Ramanagara: 49 Villages In Ramanagara To Be Selected For Atal Water Project

Recommended Video

ನಿರ್ಮಲ ಸೀತಾರಾಮನ್ ಗೆ ಬಸವಣ್ಣನ ವಚನವನ್ನ ಬಿಡಿಸಿ ಹೇಳಿದ್ದು ಇದೆ ಕಾರಣಕ್ಕೆ | Oneindia Kannada

ಇನ್ನೂ ಕಾರ್ಯಕ್ರಮದಲ್ಲಿ ಹಿರಿಯ ಭೂ ವಿಜ್ಞಾನಿ ರಾಜಶ್ರೀ, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕೊಟ್ರೇಶ್, ಜಿಲ್ಲಾ ಉದ್ಯೋಗಾಧಿಕಾರಿ ಶಿವಮೂರ್ತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

English summary
49 villages in Ramanagar district have been selected for implementation of the Central Government's Atal Ground Water Project to improve groundwater levels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X