ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಅಚೀವರ್ಸ್‌ ಬುಕ್‌ ಸೇರಿದ ಕನಕಪುರದ ಪೋರಿ!

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜುಲೈ 11; ಶಾಲೆಯ ಮೆಟ್ಟಿಲು ಹತ್ತದ 4 ವರ್ಷದ ಪುಟ್ಟ ಪೋರಿ ಕರ್ನಾಟಕ ಅಚೀವರ್ಸ್‌ ಬುಕ್‌ ಆಫ್ ರೆಕಾರ್ಡ್ಸ್‌ ಸೇರಿದ್ದಾಳೆ. ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಮಲ್ಲಿಗೆ ಮೆಟ್ಟಿಲು ಗ್ರಾಮದ ಮಹದೇವ ಮತ್ತು ಮಮತಾ ದಂಪತಿ ಪುತ್ರಿ ಧ್ವನಿ ಎಂ. ಗೌಡ ಈ ಸಾಧನೆ ಮಾಡಿದ ಬಾಲಕಿ.

ಧ್ವನಿ ಶಾಲೆಗೆ ಅಲ್ಲ ಇದುವರೆಗೂ ಅಂಗನವಾಡಿ ಮುಖವನ್ನು ಕಂಡಿಲ್ಲ. ಆದರೆ ರಾಷ್ಟ್ರೀಯ ಚಿಹ್ನೆಗಳು, ರಾಜಕೀಯ ವ್ಯಕ್ತಿಗಳು, ಅವರ ವೃತ್ತಿ ಹಾಗೂ ಕಾರ್ಯವೈಖರಿ, ದಿನಗಳ ಹೆಸರು, ಪ್ರಾಣಿಗಳ ಹೆಸರು, ಜ್ಞಾನಪೀಠ ವಿಜೇತ ವ್ಯಕ್ತಿಗಳ ಹೆಸರು, ಕ್ರೀಡಾಪಟುಗಳ ಹೆಸರು ಹೀಗೆ ಎಲ್ಲವನ್ನು ಅಚ್ಚುಕಟ್ಟಾಗಿ ಹೇಳುತ್ತಾಳೆ.

ಗಿನ್ನಿಸ್ ದಾಖಲೆಗೆ ಅರ್ಹತೆ ಪಡೆದ ದಾವಣಗೆರೆ ಪೋರ! ಗಿನ್ನಿಸ್ ದಾಖಲೆಗೆ ಅರ್ಹತೆ ಪಡೆದ ದಾವಣಗೆರೆ ಪೋರ!

ನೃತ್ಯ, ಹಾಡುಗಾರಿಕೆ, ನಟನೆ ಸಹ ಮಾಡುತ್ತಾಳೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕವಯಸ್ಸಿನಲ್ಲಿಯೇ ಧ್ವನಿಯ ಸಾಧನೆ ಕರ್ನಾಟಕ ಅಚೀವರ್ಸ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.

 ಮಕ್ಕಳ ದಿನಾಚರಣೆ ವಿಶೇಷ: ಯೋಗ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಮೈಸೂರಿನ ಪೋರಿ ಮಕ್ಕಳ ದಿನಾಚರಣೆ ವಿಶೇಷ: ಯೋಗ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಮೈಸೂರಿನ ಪೋರಿ

 4 Year Old Kanakapura Child Joined Karnataka Achievers Book Of Records

ತಾಯಿ ಮಮತಾ ದಿನಪತ್ರಿಕೆಯಲ್ಲಿ ಮಗುವೊಂದು ಸಾಧನೆ ಮಾಡಿರುವುದನ್ನು ಕಂಡು ಪ್ರೇರೇಪಣೆಗೊಂಡು ತಮ್ಮ ಮಗುವೂ ಈ ರೀತಿ ಸಾಧನೆ ಮಾಡಬೇಕು ಎಂಬ ಆಸೆ ಹೊಂದಿದ್ದರು. ಧ್ವನಿ 2 ವರ್ಷದ ಮಗುವಾಗಿದ್ದಾಗಲೇ ತಾಯಿ ಹೇಳಿಕೊಡುತ್ತಿದ್ದ ಪ್ರಾಣಿಗಳ ಹೆಸರು, ಹಣ್ಣು, 1 ರಿಂದ 10ವರೆಗಿನ ಅಂಕಿಗಳು, ಕನ್ನಡ ಹಾಗೂ ಆಂಗ್ಲ ವರ್ಣಮಾಲೆ, ತರಕಾರಿಗಳ ಹೆಸರನ್ನು ನೆನಪಿಟ್ಟುಕೊಂಡು ಹೇಳಲಾರಂಭಿಸಿದ್ದಳು.

ಅಬ್ಬಬ್ಬಾ.ಗಿನ್ನೆಸ್ ದಾಖಲೆ ಮಾಡಿ ಹೂನಗೆ ಚೆಲ್ಲಿದ ಒಂಬತ್ತರ ಪೋರಿ ! ಅಬ್ಬಬ್ಬಾ.ಗಿನ್ನೆಸ್ ದಾಖಲೆ ಮಾಡಿ ಹೂನಗೆ ಚೆಲ್ಲಿದ ಒಂಬತ್ತರ ಪೋರಿ !

ಕಳೆದ ವರ್ಷ ಮಗುವನ್ನು ಎಲ್‌ಕೆಜಿಗೆ ದಾಖಲು ಮಾಡಬೇಕು ಎಂದುಕೊಂಡಿದ್ದರು. ಆದರೆ, ಕೋವಿಡ್‌ನಿಂದ ಬಾಲಕಿ ಮನೆಯಲ್ಲಿಯೇ ಉಳಿದಳು. ಕೊರೊನಾ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡ ತಾಯಿ ಮಮತಾ, ಬಾಲಕಿಗೆ ಶ್ರದ್ಧೆಯಿಂದ ಹೇಳುವುದನ್ನು ವಿಡಿಯೋ ಮಾಡಿ ಕರ್ನಾಟಕ ಅಚೀವರ್ಸ್‌ ಬುಕ್‌ ಆಫ್‌ ರೆಕಾರ್ಡ್‌ ಸಂಸ್ಥೆಗೆ ಕಳುಹಿಸಿ ಕೊಟ್ಟಿದ್ದರು.

ಮಗುವಿನ ವಿಡಿಯೋ ಪರಿಶೀಲನೆ ಮಾಡಿದ ಬಳಿಕ ಸಂಸ್ಥೆಯ ಅಧಿಕಾರಿಗಳು ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಿ ಮಗುವಿನ ಕಲಿಕಾ ಸಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಂಸ್ಥೆಯಿಂದ ಒಂದು ಬ್ಯಾಡ್ಜ್, ಒಂದು ಶೀಲ್ಡ್‌, ಗುರುತಿನ ಚೀಟಿಯನ್ನು ಅಂಚೆ ಮೂಲಕ ಕಳುಹಿಸಿದ್ದಾರೆ.

 4 Year Old Kanakapura Child Joined Karnataka Achievers Book Of Records

"ನಾನು ಪದವಿ ತನಕ ವ್ಯಾಸಂಗ ಮಾಡಿದ್ದೇನೆ. ಮದುವೆ ನಂತರ ಮಗು ನೋಡಿಕೊಂಡು ಮನೆಯಲ್ಲೇ ಇದ್ದೇ. ಮಗಳು ಎರಡು ವರ್ಷದವಳಿದ್ದಾಗ ಅಕೆಯ ಆಸಕ್ತಿಯನ್ನು ಗಮನಿಸಿ ಅಂದಿನಿಂದ ಅಭ್ಯಾಸ ಮಾಡಿಸಲು ಮುಂದಾದೆ. ಹೇಳಿಕೊಟ್ಟ ಪ್ರತಿ ಮಾತನ್ನು ಧ್ವನಿ ಶ್ರದ್ಧೆಯಿಂದ ಕೇಳಿಸಿಕೊಳ್ಳುವ ಗುಣ ಕಂಡು ನನಗೆ ಖುಷಿಯಾಗುತ್ತಿತ್ತು. ಇಂದಿನ ಸಾಧನೆ ನನಗೆ ಹೆಮ್ಮೆ ಎನಿಸುತ್ತಿದೆ" ಎನ್ನುತ್ತಾರೆ ಮಮತಾ.

ಧ್ವನಿ ತಂದೆ ಮಹದೇವ್ ಲಾರಿ ಚಾಲಕರಾಗಿದ್ದು ಎಸ್. ಎಸ್. ಎಲ್. ಸಿ ತನಕ ಓದಿದ್ದಾರೆ. ತಮ್ಮ ಮಗಳು ಶಾಲೆಗೆ ಹೋಗದೇ ಮಾಡಿರುವ ಸಾಧನೆಗೆ ಸಂತಸ ವ್ಯಕ್ತಪಡಿಸುವ ಜೊತೆಗೆ ಮುಂದಿನ ಎಲ್ಲಾ ಮಗಳ ಆಸಕ್ತಿ ಬೆನ್ನುಲುಬಾಗಿ ನಿಲ್ಲುವುದಾಗಿ ಹೇಳಿದ್ದಾರೆ.

Recommended Video

ನೂತನ ರೈಲ್ವೇ ಸಚಿವ Ashwini Vaishnaw ವಿಡಿಯೋ ವೈರಲ್ | Oneindia Kannada

ಮಗುವಿಗೆ ಡಿಕೆಶಿ ಅಭಿನಂದನೆ; ಶಾಲೆಗೆ ಹೋಗದೆ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕೇವಲ ತಾಯಿ ಹೇಳಿಕೊಟ್ಟ ಪಾಠವನ್ನು ಕೇಳಿ ಬಾಲ್ಯದಲ್ಲೇ ಸಾಧನೆ ಮಾಡಿರುವ ಪುಟ್ಟ ಪೋರಿ ಧ್ವನಿಗೆ ಕೆಪಿಸಿಸಿ ಅಧ್ಯಕ್ಷ‌ ಡಿ. ಕೆ. ಶಿವಕುಮಾರ್‌ ಅಭಿನಂದನೆ ಸಲ್ಲಿಸಿದ್ದಾರೆ. ಮಗುವಿಗೆ ಉನ್ನತ ‌ಶಿಕ್ಷಣ ಕೊಡಿಸಿ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.

English summary
Ramanagara district Kanakapura taluk 4 year old girl joined Karnataka achievers book of records with memory power. Girl yet to join school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X