ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2023ರಲ್ಲಿ ಅಧಿಕಾರ ಗದ್ದುಗೆಗಾಗಿ ಜೆಡಿಎಸ್ ರಣತಂತ್ರ: ಬಿಡದಿ ತೋಟದಲ್ಲಿ 4 ದಿನಗಳ ಕಾರ್ಯಾಗಾರ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್ 23: ಮುಂಬರುವ 2023ರ ವಿಧಾನಸಭೆ ಚುನಾವಣೆಯನ್ನು ಗುರಿ ಇಟ್ಟುಕೊಂಡು ರಾಜ್ಯದಲ್ಲಿ ತೃತೀಯ ಶಕ್ತಿಯಾಗಿ ಹೊರಹೊಮ್ಮಲು ಜೆಡಿಎಸ್ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪಕ್ಕಾ ಕಾರ್ಯತಂತ್ರ ರೂಪಿಸುತ್ತಿದ್ದು, "ಮನೆ ಬಾಗಿಲಿಗೆ' ಪಕ್ಷದ ಕಾರ್ಯಕರ್ತರನ್ನು ಬರಮಾಡಿಕೊಂಡು ಸಮಾಲೋಚನೆ ನಡೆಸಲು ಮುಂದಾಗಿದ್ದಾರೆ.

ಕಾರ್ಯಕರ್ತರ ಜೊತೆ ಸಮಾಲೋಚನೆಗಾಗಿ ಬಿಡದಿಯ ಕೇತುಗಾನಹಳ್ಳಿ ಬಳಿಯಿರುವ ತೋಟದಲ್ಲಿ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇದೇ ಸೆ.27, 28, 29 ಮತ್ತು 30ರಂದು ನಾಲ್ಕು ದಿನಗಳ ಕಾಲ ವಿಶೇಷ ಸಭೆಗಳನ್ನು ಮಾಜಿ ಸಿಎಂ ಎಚ್‌ಡಿಕೆ ಏರ್ಪಡಿಸಿದ್ದಾರೆ.

ರಾಜ್ಯದ ಉದ್ದಗಲಕ್ಕೂ ಇರುವ ಕಾರ್ಯಕರ್ತರಿಗೆ, ಮುಖಂಡರಿಗೆ ಚೈತನ್ಯ ತುಂಬುವುದು ಸೇರಿದಂತೆ ಪಕ್ಷವನ್ನು ಬಲಿಷ್ಠಗೊಳಿಸಲು ಎಲ್ಲಾ ತಂತ್ರಗಳನ್ನು ರೂಪಿಸಿ, ತಳಮಟ್ಟದಿಂದ ಪಕ್ಷವನ್ನು ಬಲವಾಗಿ ಮೇಲೆತ್ತಲು ಅಗತ್ಯ ಇರುವ ಎಲ್ಲಾ ಕ್ರಮಗಳ ಜತೆಗೆ, "ತಮ್ಮ ಪರಿಕಲ್ಪನೆಯಲ್ಲಿ' ಪಕ್ಷಕ್ಕೆ ಪುನಶ್ಚೇತನ ನೀಡಲು ಮಾಜಿ ಮುಖ್ಯಮಂತ್ರಿ ಸಭೆ ಹಮ್ಮಿಕೊಂಡಿದ್ದಾರೆ.

Ramanagara: 4 Days JDS Activists Workshop In HD Kumaraswamys Bidadi Residence

ರಾಜ್ಯವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ನಿರ್ಲಕ್ಷ್ಯ ಮಾಡಿವೆ. ಜೆಡಿಎಸ್ ಕನ್ನಡಿಗರ ಏಕೈಕ ಆಯ್ಕೆಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷದ ಮುಂದಿರುವ ಆಯ್ಕೆಗಳು ಹಾಗೂ ಸವಾಲುಗಳು, ಅವುಗಳ ಪರಿಹಾರದ ಬಗ್ಗೆಯೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಕುಮಾರಸ್ವಾಮಿ ಅಗತ್ಯ ಸೂಚನೆಗಳನ್ನು ನೀಡಲಿದ್ದಾರೆ.

ರಾಜ್ಯದ ಹಿತಾಸಕ್ತಿಗಳ ಪ್ರಶ್ನೆ ಬಂದಾಗ ರಾಷ್ಟ್ರೀಯ ಪಕ್ಷಗಳು ಇಬ್ಬಗೆಯ ನೀತಿ ತಾಳಿವೆ. ಜೆಡಿಎಸ್ ಮಾತ್ರ ಕನ್ನಡಿಗರಿಗೆ ಮಿಡಿಯುವ ಪಕ್ಷವಾಗಿದ್ದು, ಅದನ್ನು ಜನರಿಗೆ ಸಮರ್ಥವಾಗಿ ಮುಟ್ಟಿಸುವುದು ಸೇರಿ, ರಾಷ್ಟ್ರೀಯ ಪಕ್ಷಗಳು ಒಡ್ಡುವ ಸವಾಲುಗಳ ಬಗ್ಗೆ ಕೂಡ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಾಲ್ಕು ದಿನದ ಕಾರ್ಯಾಗಾರದಲ್ಲಿ ವಿವರವಾಗಿ ಚರ್ಚೆ ಮಾಡಲಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, "ಸದ್ಯಕ್ಕೆ ಕನ್ನಡಿಗರ ಕಷ್ಟ ಎಂದು ಬಂದಾಗ ಪ್ರತಿಯೊಂದು ವಿಷಯಕ್ಕೂ ದೆಹಲಿಯತ್ತ ನೋಡುವ ದುಸ್ಥಿತಿ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ದಿಲ್ಲಿ ಸಂಸ್ಕೃತಿಯಿಂದ ರಾಜ್ಯ ಹಿತವನ್ನು ನಿರಂತರವಾಗಿ ಬಲಿ ಕೊಡುತ್ತ ಬರಲಾಗಿದೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ. 2023ರಲ್ಲಿ ಕನ್ನಡಿಗರೆಲ್ಲಾ ಒಂದಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ,'' ಎಂದು ಹೇಳಿದರು.

Ramanagara: 4 Days JDS Activists Workshop In HD Kumaraswamys Bidadi Residence

"ರಾಷ್ಟ್ರೀಯ ಪಕ್ಷಗಳು ಎಷ್ಟೇ ಪ್ರಯತ್ನ ಮಾಡಿದರೂ, ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಾಗಿಲ್ಲ. ತುಳಿದಷ್ಟು ಅಷ್ಟೇ ಬಲವಾಗಿ ಪುಟಿದೆದ್ದು ಬರುತ್ತಿದೆ ನಮ್ಮ ಪಕ್ಷ. ಅರ್ಪಣಾ ಮನೋಭಾವದ ಕಾರ್ಯಕರ್ತರಿಂದ ಇದು ಸಾಧ್ಯವಾಗಿದೆ,'' ಎಂದು ವಿರೋಧ ಪಕ್ಷಗಳಿಗೆ ಪರೋಕ್ಷವಾಗಿ ಮಾಜಿ ಸಿಎಂ ಎಚ್‌ಡಿಕೆ ಟಾಂಗ್ ನೀಡಿದರು.

ನಾಲ್ಕು ದಿನದ ಕಾರ್ಯಗಾರದ ಪ್ರಮುಖ ಅಂಶಗಳು
1. ಮುಂದಿನ ಗುರಿ ಮತ್ತು ದಾರಿಯ ಬಗ್ಗೆ ಚರ್ಚೆ
2. ಚುನಾವಣೆ 2023ರ ಬಗ್ಗೆ ಸ್ಪಷ್ಟ ಗುರಿ ನಿಗದಿ ಮಾಡಲಿರುವ ಎಚ್.ಡಿ. ಕುಮಾರಸ್ವಾಮಿ
3. ಕಾರ್ಯಕರ್ತರ ಸಮಸ್ಯೆಗಳ ಚರ್ಚೆ
4. ಪ್ರಶ್ನೆ, ಉತ್ತರ ಮತ್ತು ಪರಿಹಾರ
5. ತಳಮಟ್ಟದಲ್ಲಿ ಪಕ್ಷ ಕಟ್ಟುವ ಬಗ್ಗೆ ಸ್ಪಷ್ಟ ದಿಕ್ಸೂಚಿ
6. ಕಾರ್ಯಕರ್ತರ ಸಮಸ್ಯೆ ಪರಿಹಾರಕ್ಕೆ ನಿರಂತರ ವ್ಯವಸ್ಥೆ

Recommended Video

27 September Bharat Bandh ಗೆ ಸಂಪೂರ್ಣ ಸಿದ್ಧತೆ ನಡೆದಿದೆ,ಸಾವಿರಾರು ರೈತರು ಬೀದಿಗಳಿದು ಪ್ರತಿಭಟನೆ ಮಾಡ್ತಾರೆ

English summary
Former CM HD Kumaraswamy has organized the JDS Activists meeting in Bidadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X