ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚನ್ನಪಟ್ಟಣ ತಾಲ್ಲೂಕು ಆಸ್ಪತ್ರೆಯ ವೈದ್ಯ ಹಾಗೂ 3 ಸಿಬ್ಬಂದಿಗೆ ಕೊರೊನಾ ಸೋಂಕು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜುಲೈ 19: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ 3 ಮಂದಿ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಪ್ರಕರಣ ದೃಢಪಟ್ಟಿದ್ದು, ಸರ್ಕಾರಿ‌ ಆಸ್ಪತ್ರೆಯನ್ನು 2 ದಿನ ಸೀಲ್ ಡೌನ್ ಮಾಡಲಾಗಿದೆ.

Recommended Video

Corona ಹೋರಾಟದಲ್ಲಿ ಭಾರತ ಮುಖ್ಯ ಪಾತ್ರ | Oneindia Kannada

ಸರ್ಕಾರಿ ಆಸ್ಪತ್ರೆ ಓರ್ವ ವೈದ್ಯ ಹಾಗೂ 3 ಜನ ಸಿಬ್ಬಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಆಸ್ಪತ್ರೆಯ ಖ್ಯಾತ ವೈದ್ಯ, ಆಸ್ಪತ್ರೆಯ ಆ್ಯಂಬುಲೆನ್ಸ್ ಡ್ರೈವರ್, ಡಾಟಾ ಎಂಟ್ರಿಯ ಓರ್ವ ಹಾಗೂ ಕ್ಲರ್ಕ್ ಗೆ ಕೊರೊನಾ ಸೋಂಕು ಧೃಡಪಟ್ಟಿದೆ.

4 ತಿಂಗಳ ನಂತರ ಕಾರ್ಯಾರಂಭ ಮಾಡಿತು ರಾಮನಗರ ಜಿಲ್ಲಾ ಕಾರಾಗೃಹ4 ತಿಂಗಳ ನಂತರ ಕಾರ್ಯಾರಂಭ ಮಾಡಿತು ರಾಮನಗರ ಜಿಲ್ಲಾ ಕಾರಾಗೃಹ

ಸಿಬ್ಬಂದಿಗೆ ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಶನಿವಾರ ಮತ್ತು ಭಾನುವಾರ ಸೀಲ್ ಡೌನ್ ಮಾಡಿದ್ದು, ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಿ ಸೋಮವಾರದಿಂದ ಎಂದಿನಂತೆ ಆಸ್ಪತ್ರೆ ಕಾರ್ಯನಿರ್ವಹಿಸಲಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

14 New Coronavirus Infection Cases Reported In Ramanagara District On Saturday

ರಾಮನಗರ ಜಿಲ್ಲೆಯಲ್ಲಿ ಶನಿವಾರ 14 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಚನ್ನಪಟ್ಟಣ- 3, ಮಾಗಡಿ- 5, ಕನಕಪುರ-5 ಹಾಗೂ ರಾಮನಗರ -1 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರನ್ನು ಚಿಕಿತ್ಸೆಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಉಡುಪಿಯಲ್ಲಿ 1 ಸಾವು, ರಾಮನಗರದಲ್ಲಿ ಇಬ್ಬರು ವೈದ್ಯರಿಗೆ ಕೊರೊನಾ ಸೋಂಕುಉಡುಪಿಯಲ್ಲಿ 1 ಸಾವು, ರಾಮನಗರದಲ್ಲಿ ಇಬ್ಬರು ವೈದ್ಯರಿಗೆ ಕೊರೊನಾ ಸೋಂಕು

ಜಿಲ್ಲೆಯಲ್ಲಿ ಶನಿವಾರ 30 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 428 ಕ್ಕೆ ಏರಿಕೆಯಾಗಿದೆ.

English summary
One Doctor And Three Staff of the Channapatna Taluk Government Hospital in Ramanagar district have been diagnosed with coronavirus infection and the government hospital has been sealed down for 2 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X