ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಹಿನ್ನೆಲೆ ರಾಮನಗರದಲ್ಲಿ 133 ಸೆಕ್ಷನ್ ಜಾರಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 17: ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಮನಗರದಲ್ಲಿ ಒಂದು ವಾರಗಳ ಕಾಲ ಸೆಕ್ಷನ್ 133 ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅದೇಶ ಹೊರಡಿಸಿದ್ದಾರೆ.

Recommended Video

No need to panic about Corona says this MBBS student | Oneindia kannada

ಮಾರಕ ಕೊವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿ‌ ಎಂ.ಎಸ್.ಅರ್ಚನಾ ಸಿಆರ್ ಪಿಸಿ ಸೆಕ್ಷನ್ 133ರ ಅನ್ವಯ ತಮ್ಮ ಅಧಿಕಾರ ಚಲಾಯಿಸಿ ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚು ಜನ ದಟ್ಟಣೆ ಸೇರುವುದನ್ನು ನಿಷೇಧಿಸಿದ್ದಾರೆ.

ಬಿಗ್ ಬ್ರೇಕಿಂಗ್: ಕರ್ನಾಟಕದಲ್ಲಿ ಒಟ್ಟು 10 ಮಂದಿಗೆ ಕೋವಿಡ್-19 ಪಾಸಿಟಿವ್ಬಿಗ್ ಬ್ರೇಕಿಂಗ್: ಕರ್ನಾಟಕದಲ್ಲಿ ಒಟ್ಟು 10 ಮಂದಿಗೆ ಕೋವಿಡ್-19 ಪಾಸಿಟಿವ್

ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳಾದ ಸಂತೆ, ರಥೋತ್ಸವ, ಉತ್ಸವ, ಜಾತ್ರೆ ಸೇರಿದಂತೆ ಹೆಚ್ಚು ಜನ ಸೇರಿ ಹಮ್ಮಿಕೊಳ್ಳುವ ಆಚರಣೆಗಳನ್ನು ಮುಂದಿನ ಒಂದು ವಾರದವರೆಗೆ ನಿಷೇಧಿಸಲಾಗಿದೆ.

133 Section Imposed In Ramanagar Due To Coronavirus Fear

ತಮ್ಮ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಪಂಚಾಯ್ತಿ ಕಾರ್ಯ ನಿರ್ಹಣಾಧಿಕಾರಿಗಳು, ಜಿಲ್ಲಾ ಪೋಲೀಸ್ ಅಧೀಕ್ಷಕರು, ಜಿಲ್ಲಾ ಯೋಜನಾ ನಿರ್ದೇಶಕರು, ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಖ್ಯಸ್ಥರಿಗೆ ತಮ್ಮ ಆದೇಶದ ಪ್ರತಿಯನ್ನು ರವಾನಿಸಿದ್ದಾರೆ.

English summary
DC Archana has imposed CRPC Section 133 in ramanagara district due to coronavirus precautions. Just to avoid spreading corona, the district administration decided to impose 133 section for one week in ramanagar,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X