ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

80 ಕೋಟಿ ವೆಚ್ಚದಲ್ಲಿ ಶಿವಕುಮಾರ ಶ್ರೀಗಳ ಹುಟ್ಟೂರು ಅಭಿವೃದ್ಧಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಏಪ್ರಿಲ್ 2; ತ್ರಿವಿಧ ದಾಸೋಹಿ, ಲಿಂಗೈಕ್ಯ ಡಾ. ಶಿವಕುಮಾರ ಮಹಾಸ್ವಾಮಿಗಳ ಹುಟ್ಟೂರು ಅಭಿವೃದ್ಧಿಗೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕರ್ನಾಟಕ ಸರ್ಕಾರ ಗ್ರಾಮದ ಅಭಿವೃದ್ಧಿಗೆ 80 ಕೋಟಿ ರೂ. ಬಿಡುಗಡೆ ಮಾಡಿದೆ.

ರಾಮನಗರ ಜಿಲ್ಲೆಯಲ್ಲಿರುವ ವೀರಾಪುರ ಗ್ರಾಮದಲ್ಲಿ ಶ್ರೀಗಳ 111 ಅಡಿ ಎತ್ತರದ ಪುತ್ಥಳಿ ಹಾಗೂ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿದೆ. ಶುಕ್ರವಾರ ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ.

ಮಂದಾರಗಿರಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಜೀವವೈವಿಧ್ಯ ವನಮಂದಾರಗಿರಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಜೀವವೈವಿಧ್ಯ ವನ

ವೀರಾಪುರ ಗ್ರಾಮದ ಸಮುದಾಯ ಭವನ, ದೇವಾಲಯ, ಶ್ರೀ ಗಳ‌ ಹಳೆಯ ಮನೆ ಅಭಿವೃದ್ಧಿ ಸೇರಿದಂತೆ ಸುಮಾರು 80 ಕೋಟಿ ವೆಚ್ಚದ ಅಭಿವೃದ್ಧಿ ಕಾಮಾಗಾರಿಗೆ ರಾಮನಗರ ಜಿಲ್ಲಾಡಳಿತ ಚಾಲನೆಯನ್ನು ನೀಡಿದೆ.

 ಶಿವಕುಮಾರ ಶ್ರೀಗಳ 111 ಅಡಿ ಪುತ್ಥಳಿ ಶಂಕುಸ್ಥಾಪನೆಗೆ ಸಜ್ಜಾಗಿದೆ ವೀರಾಪುರ ಶಿವಕುಮಾರ ಶ್ರೀಗಳ 111 ಅಡಿ ಪುತ್ಥಳಿ ಶಂಕುಸ್ಥಾಪನೆಗೆ ಸಜ್ಜಾಗಿದೆ ವೀರಾಪುರ

Ramanagara news

ರಾಮನಗರ ಜಿಲ್ಲಾಡಳಿತ ಮತ್ತು ಮಾಗಡಿ ತಾಲೂಕು ಅಧಿಕಾರಿಗಳ ತಂಡ ಉದ್ದೇಶಿತ ಅಭಿವೃದ್ಧಿ ಕಾಮಾಗಾರಿಗಳ ವೀಕ್ಷಣೆ ನಡೆಸಿತು. ವೀರಾಪುರ ಗ್ರಾಮದ ಪೂರ್ವದಲ್ಲಿರುವ ಬೆಟ್ಟದ ಮೇಲೆ ಶ್ರೀ ಗಳ 111 ಅಡಿ ಪುತ್ಥಳಿ ಹಾಗೂ ವಸ್ತು ಸಂಗ್ರಾಹಲಾಯ ನಿರ್ಮಾಣವಾಗಲಿದೆ.

ಗೊರಗುಂಟೆ ಪಾಳ್ಯ ಮೇಲ್ಸೇತುವೆಗೆ ಶಿವಕುಮಾರ ಸ್ವಾಮೀಜಿ ಹೆಸರುಗೊರಗುಂಟೆ ಪಾಳ್ಯ ಮೇಲ್ಸೇತುವೆಗೆ ಶಿವಕುಮಾರ ಸ್ವಾಮೀಜಿ ಹೆಸರು

Recommended Video

ವಾರದಿಂದ ಕ್ಷೇತ್ರ ಪರ್ಯಟನೆ, ಮಕ್ಕಳಿಗೆ ಪಾಠ; ವಾರಾಂತ್ಯದಲ್ಲಿ ಸಿನಿಮಾ ವೀಕ್ಷಿಸಿದ ಹಿರಿಯೂರು ಶಾಸಕಿ | Oneindia Kannada

ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, "ವೀರಾಪುರದ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಶ್ರೀ ಬಾಲಗಂಗಾಧರನಾಥ ಸ್ವಾಮಿಜಿ ಹುಟ್ಟೂರು, ರಾಮನಗರ ತಾಲ್ಲೂಕಿನ ಬಾನಂದೂರು ಸಹ ಅಭಿವೃದ್ಧಿಯಾಗಲಿ, ಅದಷ್ಟೂ ಬೇಗ ಜಿಲ್ಲೆಯ ಇಬ್ಬರು ಸಂತರ ಗ್ರಾಮಗಳು ಮಾದರಿ ಗ್ರಾಮವಾಗಲಿ" ಎಂದು ಆಶಿಸಿದರು.

"ಸ್ವಾಮೀಜಿಗಳ 111 ಅಡಿ ಎತ್ತರದ ಪುತ್ಥಳಿ ಕಾಮಗಾರಿ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಎಲ್ಲಾ ಸುಸೂತ್ರವಾಗಿ ಕಾರ್ಯಕಲಾಪ ನಡೆದರೇ, ಇನ್ನೂ ಎರಡು-ಮೂರು ವರ್ಷಗಳಲ್ಲಿ ಕಾಯಕ ಯೋಗಿಯ ಮೂರ್ತಿ ಜನರ ದರ್ಶನಕ್ಕೆ ಲಭ್ಯವಾಗಲಿದೆ" ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಹೇಳಿದರು.

English summary
Karnataka government will build a 111-ft statue of Shivakumar Swamiji at Veerapura village of the birthplace in Ramanagar district. It may be ready in two years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X