• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

15 ದಿನಗಳ ಅವಧಿಯಲ್ಲಿ 100 ಕೆ.ಜಿ ಗಾಂಜಾ ವಶ: ರಾಮನಗರ ಎಸ್‌ಪಿ

By ರಾಮನಗರ ಪ್ರತಿನಿಧಿ
|

ರಾಮನಗರ, ಸೆಪ್ಟೆಂಬರ್ 15: ಡ್ರಗ್ಸ್ ದಂಧೆಯ ವಿರುದ್ಧ ರಾಮನಗರ ಪೊಲೀಸರು ಸಮರ ಸಾರಿದ್ದು, ಕಳೆದ 15 ದಿನಗಳಲ್ಲಿ ಅಕ್ರಮ ಗಾಂಜಾ ದಂಧೆಗಳ ಮೇಲೆ ದಾಳಿ ಮಾಡಿ ಸುಮಾರು 100 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದೇವೆ ಎಂದು ರಾಮನಗರ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ತಿಳಿಸಿದರು.

ಕಳೆದ 10 ದಿನಗಳ ಹಿಂದೆ ಜಿಲ್ಲೆಗೆ ನೂತನ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಎಸ್.ಗಿರೀಶ್ ರವರು, ಇಂದು ತಮ್ಮ ಕಚೇರಿಯಲ್ಲಿ ಪ್ರಥಮ ಸುದ್ದಿಗೋಷ್ಠಿ ನಡೆಸಿ, ಈಗಾಗಲೇ ಜಿಲ್ಲೆಯಲ್ಲಿ ಯಾವುದೇ ಅಪರಾಧ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ನಡೆಯದಂತೆ ಕಡಿವಾಣ ಹಾಕಲು ಈಗಾಗಲೇ ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಧಾರವಾಡ: ಇಲಾಖೆಯಿಂದ ವಜಾಗೊಂಡಿದ್ದ ಪೊಲೀಸ್ ಕಾನ್‍ಸ್ಟೆಬಲ್ ಮನೆಯಲ್ಲಿ ಗಾಂಜಾ ಪತ್ತೆ

ರಾಜ್ಯ ಸರಕಾರ ಡ್ರಗ್ಸ್ ವಿರುದ್ಧ ಸಮರ ಸಾರಿದೆ, ನಮ್ಮಲ್ಲೂ ಕೂಡಾ ಗಾಂಜಾ ಹಾಗೂ ಡ್ರಗ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಕಳೆದ 5 ವರ್ಷದಲ್ಲಿ ಜಿಲ್ಲೆಯಲ್ಲಿ ಸುಮಾರು 91 ಕೆ.ಜಿ ಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿದೆ. ಆದರೆ ಕಳೆದ 15 ದಿನಗಳಲ್ಲಿ ಸರಣಿ ದಾಳಿಗಳನ್ನು ನಡೆಸಿ ಸುಮಾರು 100 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ಕಾರ್ಯಾಚರಣೆ ಕೇವಲ ರಾಮನಗರ ಜಿಲ್ಲೆಗೆ ಸೀಮಿತವಾಗಿರದೆ, ಪಕ್ಕದ ಜಿಲ್ಲೆಗಳಲ್ಲೂ ಕೂಡ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ಅವರಿಂದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಗಾಂಜಾ ಹಾಗೂ ಡ್ರಗ್ಸ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

   DK Shivakumar ಹಾಗು Randeep Surjewala ಅವರಿಂದ ಬದಲಾಗಿದೆಯೇ ಕಾಂಗ್ರೆಸ್ ಹವಾ | Oneindia Kannada

   ಚಿತ್ರದುರ್ಗ: 4 ಕೋಟಿ ರೂ. ಮೌಲ್ಯದ ಗಾಂಜಾ ಬೆಳೆದಿದ್ದ ಆರೋಪಿ ಅಂದರ್

   ಜಿಲ್ಲೆಯಲ್ಲಿ ಪೊಲೀಸರ ಮೇಲೆ ರಾಜಕಾರಣಿಗಳ ಒತ್ತಡಕ್ಕೆ ಆಸ್ಪದ ಇಲ್ಲ ಎಂದು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಇದೇ ಸಂದರ್ಭದಲ್ಲಿ ಖಡಕ್ ಸಂದೇಶ ರವಾನಿಸಿದರು.

   ಇದೇ ವೇಳೆ ತಮ್ಮ ಮನದಾಳದ ಮಾತುಗಳನ್ನಾಡಿದ ಎಸ್ಪಿ, ನಾನು ಭ್ರಷ್ಟಾಚಾರ ಸಹಿಸುವುದಿಲ್ಲ, ನನ್ನ ಸೇವಾ ದಿನಗಳಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲಾ, ನನ್ನ ನೀಷ್ಠುರ ನಡೆಯಿಂದಾಗಿ ಕೆಲವರಿಗೆ ನನ್ನನ್ನ ಕಂಡ್ರೆ ಇಷ್ಟವಾಗುವುದಿಲ್ಲ ಅಂತಾ ಬೇಸರ ವ್ಯಕ್ತಪಡಿಸಿದರು.

   English summary
   We have seized about 100 kg of marijuana in the last 15 days, said Ramanagara SP S.Girish.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X