ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರ ನಿಯಮ ಉಲ್ಲಂಘನೆ; ರಾಮನಗರದಲ್ಲಿ ಎಂಟೇ ದಿನದಲ್ಲಿ ವಸೂಲಾಯ್ತು 10 ಲಕ್ಷ ರೂ. ದಂಡ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್ 10: ದೇಶದಾದ್ಯಂತ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿದ್ದು, ರಾಮನಗರ ಪೊಲೀಸರು ಎಂಟೇ ದಿನದಲ್ಲಿ ವಾಹನ ಸವಾರರಿಂದ ಸುಮಾರು ಹತ್ತು ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ರಾಮನಗರದಲ್ಲಿ ವಾರಕ್ಕೆ ಸರಿ ಸುಮಾರು 1700 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದುವರೆಗೂ 9.97.300 ಲಕ್ಷ ರೂ ದಂಡ ವಸೂಲಾಗಿದೆ.

ಟ್ರಾಫಿಕ್ ಪೊಲೀಸರ ಕಣ್ಣು ಲುಂಗಿ ಮೇಲೆ: ಜಡಾಯಿಸಿದ್ರು ನೋಡಿ ಅದಕ್ಕೂ ಫೈನು!ಟ್ರಾಫಿಕ್ ಪೊಲೀಸರ ಕಣ್ಣು ಲುಂಗಿ ಮೇಲೆ: ಜಡಾಯಿಸಿದ್ರು ನೋಡಿ ಅದಕ್ಕೂ ಫೈನು!

ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಯಾಗುವ ಮೊದಲೇ ಜಿಲ್ಲೆಗೆ ನೂತನ ಎಸ್ಪಿಯಾಗಿ ಅನೂಪ್ ಶೆಟ್ಟಿ ಅಧಿಕಾರ ವಹಿಸಿಕೊಂಡಿದ್ದರು. ಮೊದಲು ಹೆಲ್ಮೆಟ್ ಕಡ್ಡಾಯ ಜಾರಿ ಮಾಡಿದರು. ಇದರಿಂದ ಆಗಸ್ಟ್ ತಿಂಗಳಿನಲ್ಲಿ ಸುಮಾರು 16.262 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ 22.02150 ರೂಪಾಯಿ ದಂಡ ವಸೂಲಾಗಿತ್ತು.

10 Lakhs Rupees Collected As Traffic Fine In One Week In Ramanagar

ಜನವರಿ ತಿಂಗಳಲ್ಲಿ 4542 ಪ್ರಕರಣಕ್ಕೆ 6.47.900 ರೂ. ದಂಡ, ಫೆಬ್ರುವರಿ ತಿಂಗಳಲ್ಲಿ 3185 ಪ್ರಕರಣಕ್ಕೆ 4.40.400 ರೂ, ಮಾರ್ಚ್ ತಿಂಗಳಲ್ಲಿ- 6222 ಪ್ರಕರಣಕ್ಕೆ 7.70.700 ರೂ ದಂಡ, ಏಪ್ರಿಲ್ ತಿಂಗಳಲ್ಲಿ 3414 ಪ್ರಕರಣಕ್ಕೆ 4.95.900 ರೂ ದಂಡ, ಮೇ ತಿಂಗಳಲ್ಲಿ 4418 ಪ್ರಕರಣಕ್ಕೆ 6.34.050 ರೂ, ಜೂನ್ ತಿಂಗಳಲ್ಲಿ 4898 ಪ್ರಕರಣಕ್ಕೆ 7.57.000ರೂ ದಂಡ ವಿಧಿಸಲಾಗಿದೆ. ಜುಲೈ ತಿಂಗಳಲ್ಲಿ 5008 ಪ್ರಕರಣಕ್ಕೆ 8.03.400 ರೂ ದಂಡವನ್ನು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಂದ ವಸೂಲು ಮಾಡಿಕೊಳ್ಳಲಾಗಿದೆ.

ತಪ್ಪು ಮಾಡಿದರೆ ದಂಡ ತಪ್ಪಲ್ಲ; ಸರ್ಕಾರಿ ವಾಹನಕ್ಕೆ ದಂಡ ಹಾಕಿದ ಪೊಲೀಸರುತಪ್ಪು ಮಾಡಿದರೆ ದಂಡ ತಪ್ಪಲ್ಲ; ಸರ್ಕಾರಿ ವಾಹನಕ್ಕೆ ದಂಡ ಹಾಕಿದ ಪೊಲೀಸರು

ಹಳೆ ಮೋಟಾರು ಕಾಯ್ದೆ ಅನ್ವಯ ಫೆಬ್ರುವರಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪ್ರಕರಣದಿಂದ ಮೂರು ಲಕ್ಷ ರೂಪಾಯಿ ದಂಡ ವಸೂಲಿಯಾಗಿದೆ. ಆದರೆ ಬದಲಾದ ಕಾಯ್ದೆಯಿಂದ ಕೇವಲ 1700 ಪ್ರಕರಣಕ್ಕೆ 9.97.300 ರೂಪಾಯಿ ದಂಡ ವಸೂಲಾಗಿದೆ.

English summary
The Motor Vehicle Amendment Act has been implemented Across the country and Ramanagar police have fined around Rs 10 lakhs from motorists in eight days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X