ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರಿನಲ್ಲಿ 30 ರೈತರಿಗೆ ಮಕ್ಮಲ್ ಟೋಪಿ ಹಾಕಿದ ಭತ್ತದ ವ್ಯಾಪಾರಿ!

|
Google Oneindia Kannada News

ರಾಯಚೂರು, ಜುಲೈ.13: ರೈತರು ತಿಂಗಳುಗಟ್ಟಲೇ ಶ್ರಮಪಟ್ಟು ಬೆಳೆದ ಭತ್ತವನ್ನು ಖರೀದಿಸಿದ ವ್ಯಾಪಾರಿಯೊಬ್ಬರು ಅನ್ನದಾತರಿಗೆ ಪಂಗನಾಮ ಹಾಕಿ ಓಡಿ ಹೋಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ.

Recommended Video

Rashid Khan : ಅಫ್ಘಾನಿಸ್ತಾನ ವಿಶ್ವಕಪ್ ಗೆದ್ದ ನಂತರವೇ ಮದುವೆಯಾಗುತ್ತೇನೆ | Oneindia Kannada

ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮಕ್ಕೆ ಆಗಮಿಸಿದ ಭತ್ತದ ವ್ಯಾಪಾರಿ ಶ್ರೀಧರ್ ರೆಡ್ಡಿ ಎಂಬುವವರು ರೈತರಿಗೆ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.

MSP ಹೆಸರಿನಲ್ಲಿ ರೈತರಿಗೆ ದ್ರೋಹವೆಸಗಿದ ಬಿಜೆಪಿ: ರೈತ ಸಂಘMSP ಹೆಸರಿನಲ್ಲಿ ರೈತರಿಗೆ ದ್ರೋಹವೆಸಗಿದ ಬಿಜೆಪಿ: ರೈತ ಸಂಘ

ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಶ್ರೀಧರ್ ರೆಡ್ಡಿ ಮೂಲತಃ ಆಂಧ್ರಪ್ರದೇಶದವರು ಎಂದು ತಿಳಿದು ಬಂದಿದೆ. 10 ದಿನಗಳಲ್ಲೇ ಭತ್ತದ ಹಣವನ್ನು ನೀಡುವುದಾಗಿ ನಂಬಿಸಿ ರೈತರಿಗೆ ಭತ್ತವನ್ನು ಖರೀದಿಸಿದ ವ್ಯಾಪಾರಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.

Raichuru: A Trader Who Cheated Farmers By Buying Paddy Worth 1.50 Crores Of Rupees

30 ರೈತರಿಗೆ ಮಕ್ಮಲ್ ಟೋಪಿ:

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಸುಮಾರು 30 ರೈತರಿಂದ ಭತ್ತವನ್ನು ಖರೀದಿಸಿ ವಂಚಿಸಲಾಗಿದೆ. ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಭತ್ತವನ್ನು ಖರೀದಿಸಿದ ವ್ಯಾಪಾರಿ ವಂಚನೆ ಮಾಡಿರುವ ಬಗ್ಗೆ ರೈತರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಭತ್ತದ ಹಣವನ್ನು ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

English summary
Raichuru: A Trader Who Cheated Farmers By Buying Paddy Worth 1.50 Crores Of Rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X