ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು; ಶುಲ್ಕ ಪಾವತಿಸಿದರೂ ವಿದ್ಯಾರ್ಥಿಗಳಿಗೆ ಬಸ್‌ ಪಾಸ್ ಇಲ್ಲ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು ಜುಲೈ 7: ಸಾರಿಗೆ ಇಲಾಖೆ ಬಸ್ ಪಾಸ್‌ನ ಮಾನ್ಯತೆ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದರೂ ಶಿಕ್ಷಣ ಇಲಾಖೆಯ ಸಮನ್ವಯ ಕೊರತೆಯಿಂದ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಬಸ್ ಪಾಸ್‌ಗಾಗಿ ನಿತ್ಯ ಪರದಾಡುವಂತಾಗಿದೆ. ಶಾಲಾ ಕಾಲೇಜುಗಳು ಶುರುವಾಗಿದ್ದರೂ ಇವರೆಗೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ದೊರೆತಿಲ್ಲ. ಹೀಗಾಗಿ ಮಕ್ಕಳು ಶಾಲೆಗೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ.

ಶಾಲಾ-ಕಾಲೇಜುಗಳ ಮುಖ್ಯಸ್ಥರು , ಸಾರಿಗೆ ಇಲಾಖೆಗೆ ಮನವಿ ಮಾಡಿಕೊಂಡಿದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮ ಜೂನ್ ಅಂತ್ಯದವರೆಗೆ ವಿಸ್ತರಿಸಿತ್ತು. ಈ ಗಡುವು ಪೂರ್ಣಗೊಂಡಿದೆ. ಮಕ್ಕಳಿಗೆ ಅನುಕೂಲವಾಗಲಿ ಎಂದು ಜುಲೈ 10ರವರೆಗೆ ವಿಸ್ತರಿಸಿದೆ. ಅಲ್ಲದೇ ಕೆಲವು ನಿಯಮಗಳೊಂದಿಗೆ ಬಸ್‌ನಲ್ಲಿ ಸಂಚಾರಕ್ಕೆ ಅನುಕೂಲ ಮಾಡಿದರೂ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ.

ರಾಯಚೂರು; ಆಧಾರ್ ತಿದ್ದುಪಡಿಗಾಗಿ ಜನರ ಅಲೆದಾಟರಾಯಚೂರು; ಆಧಾರ್ ತಿದ್ದುಪಡಿಗಾಗಿ ಜನರ ಅಲೆದಾಟ

2021-22ನೇ ಸಾಲಿನಲ್ಲಿ ವಿತರಿಸಿರುವ ಪಾಸ್‌ ತೋರಿಸಿ ಜುಲೈ 10ರವರೆಗೆ ಪ್ರಯಾಣಿಸಲು ಸಾರಿಗೆ ನಿಗಮ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದೆ. ಅಲ್ಲದೇ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಬೋಧನಾ ಶುಲ್ಕದ ರಶೀದಿ ಅಥವಾ ಗುರುತಿನ ಚೀಟಿ ತೋರಿಸಿ ಬಸ್‌ನಲ್ಲಿ ಪ್ರಯಾಣಿಸಬಹುದು.

ಮಾಧ್ಯಮಿಕ ತರಗತಿಯಿಂದ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳು ಶಾಲೆ, ಕಾಲೇಜು ಬದಲಾವಣೆ ಹಾಗೂ ಕೆಲವು ವಿದ್ಯಾರ್ಥಿಗಳು ಹಿಂದಿನ ವರ್ಷ ಬಸ್‌ಪಾಸ್ ಪಡೆದಿಲ್ಲ. ಇಂತಹ ವಿದ್ಯಾರ್ಥಿಗಳು ಶಾಲೆ ಅಥವಾ ಕಾಲೇಜಿಗೆ ಸೇರಿದ ಬಗ್ಗೆ ಬೋಧನಾ ಶುಲ್ಕದ ರಸೀದಿ ಅಥವಾ ಗುರುತಿನ ಚೀಟಿ ತೋರಿಸಿ ಬಸ್‌ಗಳಲ್ಲಿ ಪ್ರಯಾಣಿಸಬಹುದೆಂದು ಸುತ್ತೋಲೆ ಹೊರಡಿಸಿದೆ.

 ವಿದ್ಯಾರ್ಥಿಗಳ ಪರದಾಟ

ವಿದ್ಯಾರ್ಥಿಗಳ ಪರದಾಟ

ಗ್ರಾಮೀಣ ಪ್ರದೇಶದಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಬಸ್ ಮೂಲಕ ಶಾಲೆ, ಕಾಲೇಜುಗಳಲ್ಲಿ ಅಭ್ಯಾಸ ಮಾಡಲು ರಾಯಚೂರು ನಗರಕ್ಕೆ ಬರುತ್ತಾರೆ. ಆದರೆ ಬಸ್‌ಪಾಸ್ ಅವಧಿ ಪೂರ್ಣಗೊಂಡಿದ್ದರಿಂದ ಬಸ್‌ನಲ್ಲಿ ಅವಕಾಶ ನೀಡುತ್ತಿಲ್ಲ. ಹೀಗಾಗಿ ಪ್ರತಿನಿತ್ಯ 150 ರೂಪಾಯಿ ಪ್ರಯಾಣಕ್ಕೆ ಖರ್ಚು ಮಾಡುವಂತಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಬಸ್‌ಪಾಸ್ ವಿಸ್ತರಣೆ ಅವಧಿ ವಿಸ್ತರಿಸಲಾಗಿದೆ. ಈ ಬಗ್ಗೆ ಬಸ್ ನಿಲ್ದಾಣಕ್ಕೆ ತೆರಳಿ ನೀವೇ ಮಾತಾಡಿಕೊಳ್ಳಬೇಕು ಎಂದು ಶಾಲಾ ಹಾಗೂ ಕಾಲೇಜು ಸಿಬ್ಬಂದಿ ಹೇಳುತ್ತಿದ್ದಾರೆ. ಹೀಗಾಗಿ ಮಕ್ಕಳು ತೊಂದರೆ ಪಡುತ್ತಿದ್ದಾರೆ.

ದ್ವಿತೀಯ ಪಿಯುಸಿ: ಉತ್ತರ ಪತ್ರಿಕೆ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನದ್ವಿತೀಯ ಪಿಯುಸಿ: ಉತ್ತರ ಪತ್ರಿಕೆ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನ

 ಸಾರಿಗೆ ನಿಗಮಕ್ಕೆ ಕಳುಹಿಸಿದ್ದರಿಂದ ಮಕ್ಕಳಿಗೆ ಸಮಸ್ಯೆ

ಸಾರಿಗೆ ನಿಗಮಕ್ಕೆ ಕಳುಹಿಸಿದ್ದರಿಂದ ಮಕ್ಕಳಿಗೆ ಸಮಸ್ಯೆ

ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳು ನಿಗಮದ ಆದೇಶ ಪ್ರತಿ ಹಾಗೂ ಕಾಲೇಜಿನ ಬೋಧನಾ ಶುಲ್ಕದ ರಸೀದಿಯೊಂದಿಗೆ ಶಾಲೆ ಅಥವಾ ಕಾಲೇಜು ಸಿಬ್ಬಂದಿ ಸ್ಥಳೀಯ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಬಸ್ ಪಾಸ್ ಪಡೆಯಬೇಕಿದೆ. ಆದರೆ ಈ ಕುರಿತು ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ವಿದ್ಯಾರ್ಥಿಗಳನ್ನು ಸಾರಿಗೆ ನಿಗಮಕ್ಕೆ ಕಳುಹಿಸಲಾಗಿದೆ. ಹೀಗಾಗಿ ಬಸ್‌ಪಾಸ್ ಸಮಸ್ಯೆ ಎದುರಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

 ಕಾಲೇಜು ಬಿಡಿಸಲು ಮುಂದಾಗುತ್ತಿರುವ ಪಾಲಕರು

ಕಾಲೇಜು ಬಿಡಿಸಲು ಮುಂದಾಗುತ್ತಿರುವ ಪಾಲಕರು

ವಿದ್ಯಾರ್ಥಿಗಳ ಅಧ್ಯಯನದ ಹಿತದೃಷ್ಟಿಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್‌ಪಾಸ್‌ನ್ನು ಜೂನ್ ಅಂತ್ಯದವರೆಗೆ ವಿಸ್ತರಿಸಿತ್ತು. ಜೂನ್ 30ಕ್ಕೆ ಬಸ್‌ಪಾಸ್ ವಿಸ್ತರಣೆ ಅವಧಿಯ ಕೊನೆಯ ದಿನವಾಗಿತ್ತು. ಆದರೆ ಗ್ರಾಮೀಣ ಪ್ರದೇಶದ ಬಡ ಹಾಗೂ ಮಾಧ್ಯಮ ವರ್ಗದ ಮಕ್ಕಳಿಗೆ ಹಣದ ಸಮಸ್ಯೆಯಿಂದ ಬಸ್‌ಪಾಸ್ ನವೀಕರಣಗೊಳಿಸಲು ಸಮಸ್ಯೆ ಉಂಟಾಗಿದೆ. ಶುಲ್ಕ ಪಾವತಿಸದ ಪರಿಣಾಮ ಬಸ್‌ನಲ್ಲಿ ಸಂಚಾರಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಮಸ್ಯೆಯಾಗಿದೆ. ಜುಲೈ 10 ರವರೆಗೆ ಅವಧಿ ವಿಸ್ತರಿಸಿದ್ದು, ಈಗ ಶುಲ್ಕ ಪಾವತಿಸಿದರೂ ಪಾಸ್ ನೀಡದ ಪರಿಣಾಮ ಕಾಲೇಜಿಗೆ ತೆರಳಲು ಕಷ್ಟವಾಗಿದೆ. ಕಾಲೇಜು ಬಿಡಿಸಲು ಪಾಲಕರು ಮುಂದಾಗಿದ್ದು ಕಾಲೇಜು ಬಿಟ್ಟರೆ ಮದುವೆ ಮಾಡುವ ಸಾಧ್ಯತೆ ಇದೆ. ಬಸ್ ಪಾಸ್ ನೀಡುವ ಮೂಲಕ ವಿದ್ಯಾರ್ಥಿನಿಯರ ಅಭ್ಯಾಸಕ್ಕೆ ಸರ್ಕಾರ ಮುಂದಾಗಲಿ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

 ಬಸ್‌ ಪಾಸ್ ದೊರೆಯದ್ದಕ್ಕೆ ಕಾರಣ

ಬಸ್‌ ಪಾಸ್ ದೊರೆಯದ್ದಕ್ಕೆ ಕಾರಣ

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಸೇವಾ ಸಿಂಧು ಪೋರ್ಟಲ್ ಮೂಲಕ ಬಸ್‌ಪಾಸ್ ಪಡೆಯಬೇಕಿದ್ದು ವಿದ್ಯಾರ್ಥಿಗಳು ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಸಲ್ಲಿಸಿದ ಮುದ್ರಿತ ಅರ್ಜಿಗಳನ್ನು ಸಂಬಂಧಿಸಿದ ಶಾಲಾ ಕಾಲೇಜುಗಳು ಹಾಗೂ ವಿದ್ಯಾರ್ಥಿಗಳು ಪಾಸ್ ವಿತರಣೆ ಕೌಂಟರ್‌ಗಳಲ್ಲಿ ಸಲ್ಲಿಸಲು ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ಸರಿಯಾದ ಸಮಯಕ್ಕೆ ಪಾಸ್ ದೊರೆಯುತ್ತಿಲ್ಲ ಎಂದು ರಾಯಚೂರು ರಾಜ್ಯ ರಸ್ತೆ ಸಾರಿಗೆ ನಿಗಮದ ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಿಂದ ಸಾವಿರಾರು ವಿದ್ಯಾರ್ಥಿಗಳು ರಾಯಚೂರು ನಗರಕ್ಕೆ ವಿದ್ಯಾಭ್ಯಾಸಕ್ಕೆ ಬಸ್ ಮೂಲಕ ಆಗಮಿಸುತ್ತಿದ್ದು ಸರ್ಕಾರ ಬಸ್‌ಪಾಸ್ ಅವಧಿಯನ್ನು ಜುಲೈ 10 ರ ವರಗೆ ವಿಸ್ತರಿಸಿದೆ. ಆದರೆ ಶಿಕ್ಷಣ ಇಲಾಖೆ ಬಸ್ ಪಾಸ್ ಕೊಡಿಸಲು ಮುಂದಾಗುತ್ತಿಲ್ಲ. ಹೀಗಾಗಿ ನಿತ್ಯ ಹಣ ಕೊಟ್ಟು ಬಸ್‌ನಲ್ಲಿ ಸಂಚಾರಿಸುವಂತಾಗಿದೆ ಎಂದು ವಿದ್ಯಾರ್ಥಿಗಳಾದ ಭೂಮಿಕಾ, ಖಮರ್‌ಬೇಗಂ, ಶಶಿಕಲಾ ಅವರು ತಮ್ಯ ಸಮಸ್ಯೆಗಳನ್ನು ಹೇಳಿದರು.

Recommended Video

ಹರ್ಷ ಅಕ್ಕನ ಜೊತೆ ಗೃಹ ಸಚಿವ ಅರಗ ಜ್ಞಾನೇಂದ್ರ ಹೀಗೆ ನಡೆದುಕೊಂಡಿದ್ದು ಸರಿನಾ? | OneIndia Kannada

English summary
Students face problems in Raichuru for getting KSRTC bus Pass. Even the schools and colleges have started, the students have not received the bus pass yet.Rural children are facing difficulty in going to school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X