ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉದ್ಭವ ಮಹಾಲಕ್ಷ್ಮಿಯ ಪುಣ್ಯಕ್ಷೇತ್ರ ರಾಯಚೂರಿಗೆ ಹರಿದು ಬಂದ ಭಕ್ತಸಾಗರ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಆಗಸ್ಟ್.24: ರಾಯಚೂರು ಉದ್ಬವ ಮಹಾಲಕ್ಷ್ಮಿಯ ಪುಣ್ಯಕ್ಷೇತ್ರ. ಇಲ್ಲಿ ಅಪರೂಪದ ಮಹಾಲಕ್ಷ್ಮಿ ಮೂರ್ತಿ ಇದೆ. ಭಕ್ತರ‌ ದರ್ಶನಕ್ಕಾಗಿ ಸಾಣಿಕಲ್ಲಿನಲ್ಲಿ ದೇವಿ ಪ್ರತ್ಯಕ್ಷಳಾದಳು ಎಂಬ ಪ್ರತೀತಿ ಇದೆ. ಈ ಕ್ಷೇತ್ರಕ್ಕೆ ಬಂದು 'ತಾಯಿ ನೀ ಕಾಯಿ...' ಎಂದು ಎರಡು ಕಾಯಿ ಕಟ್ಟಿದರೆ ಕರುಣಿಸುತ್ತಾಳೆ ವರ.

ಅಂದಹಾಗೆ ವರಮಹಾಲಕ್ಷ್ಮಿ ಹಬ್ಬದಂದು ಭಕ್ತಸಾಗರವೇ ಇಲ್ಲಿಗೆ ಹರಿದು ಬರುತ್ತದೆ. ಎಲ್ಲಿದೆಯಪ್ಪಾ ಈ ದೇವಸ್ಥಾನ ಅಂತೀರಾ? ಬನ್ನಿ ನಾವು ಆ ತಾಯಿಯ ದರ್ಶನ ಪಡೆಯೋಣ.

ಇಂದು ವರಮಹಾಲಕ್ಷ್ಮಿ ವ್ರತ: ಆಚರಣೆ ಹೇಗೆ, ಏಕೆ? ವೈಶಿಷ್ಟ್ಯವೇನು?ಇಂದು ವರಮಹಾಲಕ್ಷ್ಮಿ ವ್ರತ: ಆಚರಣೆ ಹೇಗೆ, ಏಕೆ? ವೈಶಿಷ್ಟ್ಯವೇನು?

ಇಂದು ಶುಕ್ರವಾರ ವರಮಹಾ ಲಕ್ಷ್ಮಿ ಹಬ್ಬ. ಮಹಿಳೆಯರು ಸಂಭ್ರಮ, ಸಡಗರದಿಂದ ತಾಯಿಯ ಆರಾಧನೆ ಮಾಡುತ್ತಾ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ. ಹಬ್ಬದ ಹಿನ್ನೆಲೆಯಲ್ಲಿ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಉದ್ಭವ ಮೂರ್ತಿ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

Special worship will be performed to Mahalakshmi in Raichur

450 ವರ್ಷಗಳ ಇತಿಹಾಸ ಹೊಂದಿರುವ ಕಲ್ಲೂರಿನ ಉದ್ಭವ ಮೂರ್ತಿ ಮಹಾಲಕ್ಷ್ಮಿ ದರ್ಶನಕ್ಕೆ ಸಾಕಷ್ಟು ಭಕ್ತರು ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುತ್ತಾರೆ. ಪುಟ್ಟ ಸ್ಥಳದಲ್ಲಿ ದೇವಸ್ಥಾನ ಹೊಂದಿರುವ ಈ ತಾಯಿಯ ಶಕ್ತಿ ಅಗಾಧ.

ವರಮಹಾಲಕ್ಷ್ಮೀ ವ್ರತ: ಉಡುಪಿಯಲ್ಲಿ ಮುಗಿಲು ಮುಟ್ಟಿದ ಭಕ್ತಿ ವರಮಹಾಲಕ್ಷ್ಮೀ ವ್ರತ: ಉಡುಪಿಯಲ್ಲಿ ಮುಗಿಲು ಮುಟ್ಟಿದ ಭಕ್ತಿ

ವರಮಹಾಲಕ್ಷ್ಮಿ ಹಬ್ಬದ ನಿಮಿತ್ಯ ಬೆಳಗ್ಗೆಯಿಂದ ದೇವಿಗೆ ತುಪ್ಪದ ಅಭಿಷೇಕ, ಹಾಲಿನ ಅಭಿಷೇಕ, ವಿವಿಧ ಪುಷ್ಪ ಹಣ್ಣುಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಈ ದೇವಸ್ಥಾನ ಒಂದು ವಿಶೇಷತೆಯಿಂದ ಕೂಡಿದೆ. ಭಕ್ತರು ತಮ್ಮ ಬೇಡಿಕೆ ಈಡೇರಿಕೆಗೆಗಾಗಿ ಕಲ್ಲೂರು ಮಹಾಲಕ್ಷ್ಮಿ ದರ್ಶನ ಮಾಡಿ ಹರಕೆ ಹೊತ್ತು ತೆಂಗಿನಕಾಯಿ ಕಟ್ಟಿ ಹೋಗುತ್ತಾರೆ.

ಇದರಿಂದ ತಾಯಿ ತಮ್ಮ ಇಷ್ಟರ್ಥ ನೆರವೇರಿಸುತ್ತಾಳೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ. ಇಷ್ಟಾರ್ಥ ಸಿದ್ದಿ ನಂತರ ಬಳಿಕ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಹರಕೆ ತೀರಿಸುತ್ತಾರೆ. ಪೂಜೆ ಸಲ್ಲಿಸಿದ ನಂತರ ಇಲ್ಲಿ ಬಂದ ಮಹಿಳೆಯರಿಗೆ ಉಡಿ ತುಂಬುವುದು ವಿಶೇಷ ಆಚರಣೆ.

English summary
Today special worship will be performed to Mahalakshmi, the ardent goddess in Kallur village in Sirwara taluk. Devotees decorated with various flower berries and offered special worship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X