• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫೋಟೋ ವೈರಲ್: ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿಯೇ ಮುತ್ತಿನ ಸುರಿಮಳೆಗೈದ ಯುವ ಜೋಡಿ

|

ರಾಯಚೂರು, ಫೆಬ್ರವರಿ 25: ಇತ್ತೀಚಿಗೆ ಯುವ ಜೋಡಿಗಳ ಹುಚ್ಚಾಟ ಮಿತಿಮೀರಿದೆ. ಪ್ರೇಮಿಗಳ ದಿನಕ್ಕೂ ಮುನ್ನ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಬಸ್ ನಿಲ್ದಾಣದಲ್ಲಿ ಪ್ರೇಮಿಗಳಿಬ್ಬರೂ ಹಾಡಹಗಲೇ ಚುಂಬಿಸಿದ್ದನ್ನು ಕೇಳಿದ್ದೀರಿ.

ಅದೇ ರೀತಿಯಲ್ಲಿ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಮತ್ತೊಂದು ಯುವಜೋಡಿಯೊಂದು ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿಯೇ ಪರಸ್ಪರ ಚುಂಬಿಸಿದ್ದಾರೆ. ಇದು ನೋಡುಗರಿಗೆ ಮುಜುಗರವನ್ನುಂಟು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.

ಫೋಟೋ ವೈರಲ್: ಪ್ರೇಮಿಗಳ ದಿನಕ್ಕೂ ಮುನ್ನ ಬಸ್ ನಿಲ್ದಾಣದಲ್ಲಿ 'ಒಂದು ಮುತ್ತಿನ ಕಥೆ'ಫೋಟೋ ವೈರಲ್: ಪ್ರೇಮಿಗಳ ದಿನಕ್ಕೂ ಮುನ್ನ ಬಸ್ ನಿಲ್ದಾಣದಲ್ಲಿ 'ಒಂದು ಮುತ್ತಿನ ಕಥೆ'

ಸಿಂಧನೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಯುವಕ ಹಾಗೂ ಯುವತಿ ನಿಂತಿದ್ದರು. ಇಬ್ಬರೂ ಒಬ್ಬರನೊಬ್ಬರು ಅಪ್ಪಿಕೊಂಡು ನಿಂತಿದ್ದರು. ಅಷ್ಟೇ ಆಗಿದ್ದರೆ ಯಾರಿಗೂ ತೊಂದರೆ ಇದ್ದಿಲ್ಲ. ಆದರೆ, ಈ ಯುವಜೋಡಿ ಒಂದು ಹಜ್ಜೆ ಮುಂದೆ ಹೋಗಿ ಪರಸ್ಪರ ಚುಂಬಿಸತೊಡಗಿದ್ದಾರೆ.

ಬಸ್ ನಿಲ್ದಾಣದಲ್ಲಿ ಸಾರ್ವಜನಿಕರೆದುರೇ ಈ ಯುವ ಜೋಡಿ ಚುಂಬಿಸುತ್ತಾ ಮೈಮರೆತಿದ್ದು, ಹಿರಿಯ ನಾಗರಿಕರು, ಚಿಕ್ಕ ಮಕ್ಕಳು ಇದ್ದಾರೆ ಎಂಬುದನ್ನು ಗಮನಿಸದೇ ವರ್ತಿಸಿದ್ದಾರೆ. ಈ ಘಟನೆಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬಸ್ ನಿಲ್ದಾಣದ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

   ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಬೇಕೆಂಬ ರಾಹುಲ್ ಹೇಳಿಕೆ - ರಾಹುಲ್ ಗಾಂಧಿ ಪರ ಬ್ಯಾಟ್ ಬೀಸಿದ ಮಲ್ಲಿಕಾರ್ಜುನ ಖರ್ಗೆ | Oneindia Kannada

   ಇದೇ ರೀತಿಯ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಂತಿದ ಬಸ್ ಹಿಂಭಾಗಕ್ಕೆ ಹೋಗಿ ಮುತ್ತು ನೀಡುತ್ತಿದ್ದರು. ಸಾರ್ವಜನಿಕರ ನೋಡುತ್ತಿದ್ದರೂ ಮುತ್ತಿನ ಮಳೆ ಸುರಿಸುತ್ತಿದ್ದರು. ಇದೂ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿ, ಆಕ್ರೋಶಕ್ಕೆ ಗುರಿಯಾಗಿತ್ತು.

   English summary
   Another young couple kissed each other in public at a bus stop in Sindhanur, Raichur district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X