• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಯಚೂರು; ಆರ್‌ಟಿಪಿಎಸ್‌ನಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ

|

ರಾಯಚೂರು, ಸೆಪ್ಟೆಂಬರ್ 11: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಕಳೆದ ಎರಡು ತಿಂಗಳಿನಿಂದ ಎಲ್ಲಾ ಘಟಕಗಳು ಬಂದ್ ಆಗಿವೆ. ಇದರಿಂದಾಗಿ ಸುಮಾರು 500 ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.

ಪ್ರತಿನಿತ್ಯ 1,720 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಘಟಕದಲ್ಲಿ ಈಗ ಮುಚ್ಚಿದೆ. ಇದೇ ಮೊದಲ ಬಾರಿಗೆ ಇಷ್ಟು ದಿನಗಳ ಕಾಲ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಹಿರಿಯ ನೌಕರರು ಮತ್ತು ಇಂಜಿನಿಯರ್‌ಗಳನ್ನು ಬೇರೆ ವಿದ್ಯುತ್ ಉತ್ಪದನಾ ಕೇಂದ್ರಗಳಿಗೆ ನಿಯೋಜನೆ ಮಾಡಲಾಗಿದೆ.

ಗರಿಷ್ಠ ವಿದ್ಯುತ್ ಬೇಡಿಕೆಯಲ್ಲಿ ಶೇ. 5.6ರಷ್ಟು ತೀವ್ರ ಕುಸಿತ, ಆಗಸ್ಟ್‌ನಲ್ಲಿ ಚೇತರಿಕೆ

ಕಲ್ಲಿದ್ದಲು ಮತ್ತು ನೀರಿನ ಕೊರತೆ ಉಂಟಾದಾಗ ಮಾತ್ರ ಘಟಕಗಳನ್ನು ಮುಚ್ಚಲಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ಎಲ್ಲಾ ಘಟಕಗಳನ್ನು ಮುಚ್ಚಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ವಿದ್ಯುತ್‌ಗೆ ಬೇಡಿಕೆ ಕಡಿಮೆ ಇದೆ ಎಂಬ ನೆಪ ಹೇಳಿ ಘಟಕ ಸ್ಥಗಿತಗೊಳಿಸಲಾಗಿತ್ತು.

ವಿದ್ಯುತ್ ತಂತಿಗೆ ಬಲಿಯಾದ ನವಿಲು; ಅಂತಿಮ ನಮನ ಸಲ್ಲಿಸಿದ ಸ್ಥಳೀಯರು

ರಾಯಚೂರಿನ ಆರ್‌ಟಿಪಿಎಸ್ ಜೊತೆಗೆ ಬಳ್ಳಾರಿಯ ಬಿಟಿಪಿಎಸ್ ಕೇಂದ್ರದಲ್ಲಿ ಸಹ ಉತ್ಪಾದನೆ ಸ್ಥಗಿತವಾಗಿದೆ. ಜಲ ಮತ್ತು ಸೌರ ವಿದ್ಯುತ್ ಉತ್ಪಾದನೆ ಕಡಿಮೆ ಖರ್ಚಿನಲ್ಲಿ ಆಗುತ್ತದೆ. ಶಾಖೋತ್ಪನ್ನ ಕೇಂದ್ರದಲ್ಲಿ ಉತ್ಪಾದನಾ ವೆಚ್ಚ ಅಧಿಕ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ವಿದ್ಯುತ್ ಬಿಲ್ ಕಂಡು ಹೈದ್ರಾಬಾದ್‌ನ ವ್ಯಕ್ತಿಗೆ ಶಾಕ್: 6.67 ಲಕ್ಷ ರೂಪಾಯಿ

ಕರ್ನಾಟಕದಲ್ಲಿ ಪ್ರಸ್ತುತ 6,354 ಮೆಗಾವ್ಯಾಟ್ ವಿದ್ಯುತ್‌ಗಾಗಿ ಬೇಡಿಕೆ ಇದೆ. ಉತ್ತಮ ಮಳೆಯಾಗಿರುವ ಹಿನ್ನಲೆಯಲ್ಲಿ ಜಲವಿದ್ಯುತ್ ಕೇಂದ್ರದಲ್ಲಿ ಉತ್ಪಾದನೆ ಹೆಚ್ಚಿಸೆ. ಸೌರವಿದ್ಯುತ್ ಉತ್ಪಾದನೆ ಸಹ ಆಗುತ್ತಿದ್ದು, ಆದ್ದರಿಂದ, ಶಾಖೋತ್ಪನ್ನ ಕೇಂದ್ರದಲ್ಲಿ ಉತ್ಪಾದನೆ ಸ್ಥಗಿತವಾಗಿದೆ.

   China ವಿರುದ್ಧ Siachen ನಲ್ಲಿ ನಮ್ಮ ಯೋಧರಿಗೆ ಎದುರಾಯ್ತು ದೊಡ್ಡ ಸಂಕಷ್ಟ. | Oneindia Kannada

   ರಾಯಚೂರಿನ ಶಕ್ತಿ ನಗರದಲ್ಲಿರುವ ಶಾಖೋತ್ಪನ್ನ ಕೇಂದ್ರವನ್ನು ಹೀಗೆ ಮುಚ್ಚುವ ಮೂಲಕ ಶಾಶ್ವತವಾಗಿ ಮುಚ್ಚುವ ಆಲೋಚನೆ ಇದೆಯೇ? ಎಂದು ಕಾರ್ಮಿಕರು ಪ್ರಶ್ನೆ ಮಾಡಿದ್ದಾರೆ.

   English summary
   Raichur Thermal Power Station (RTPS) stopped power production from past two months. More than 500 temporary workers lost jobs.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X