ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಷ್ಣ ವಿದ್ಯುತ್ ಉತ್ಪಾದನೆ ಹೆಚ್ಚಳ, ಬೇಸಿಗೆಯಲ್ಲೂ ರಾಜ್ಯ ನಿರಾಳ

|
Google Oneindia Kannada News

ಬೆಂಗಳೂರು, ಏಪ್ರಿಲ್ 26: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎಲ್ಲ ಎಂಟು ಘಟಕಗಳು ಉತ್ಪಾದನೆಯಲ್ಲಿ ತೊಗಡಿದ್ದು, ಬೇಸಿಗೆ ಬವಣೆ ತಪ್ಪಿಸಲು ಹರಸಾಹಸ ಪಡುತ್ತಿದೆ.

ಕಳೆದ ಆರು ತಿಂಗಳಲ್ಲಿ ಆರ್‌ಟಿಪಿಎಸ್ ನ ಎಲ್ಲ ಘಟಕಗಳು ವಿದ್ಯುತ್ ಉತ್ಪಾದಿಸುತ್ತಿರುವುದು ಇದೇ ಮೊದಲು, ಬಿರುಬಿಸಿಲ ಬೇಸಿಗೆಯ ದಿನಗಳಲ್ಲಿ ರಾಜ್ಯದ ಬೇಡಿಕೆಯ ವಿದ್ಯುತ್ ಒದಗಿಸಲು ಹೆಣಗಾಡುತ್ತಿದ್ದ ಕರ್ನಾಟಕ ವಿದ್ಯುತ್ ನಿಗಮ ಸದ್ಯ ನಿಟ್ಟುಸಿರು ಬಿಟ್ಟಿದೆ.

ಬೆಂಗಳೂರಲ್ಲಿ ಒಂದು ವಾರ ಯಾವ್ಯಾವ ಬಡಾವಣೆಯಲ್ಲಿ ಕರೆಂಟ್ ಇರಲ್ಲ! ಬೆಂಗಳೂರಲ್ಲಿ ಒಂದು ವಾರ ಯಾವ್ಯಾವ ಬಡಾವಣೆಯಲ್ಲಿ ಕರೆಂಟ್ ಇರಲ್ಲ!

ರಾಜ್ಯದಲ್ಲಿ ಗರಿಷ್ಠ ತಾಪಮಾನ 40ರ ಗಡಿ ದಾಟಿ ಆಗಲೇ ಒಂದು ತಿಂಗಳು ಕಳೆದಿದೆ. ವಿದ್ಯುತ್ ಉತ್ಪಾದನೆ ಕೊರತೆ ಹಿನ್ನೆಲೆಯಲ್ಲಿ ಈಗಾಗಲೇ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ. ವಿದ್ಯುತ್ ಕಾಮಗಾರಿ ದುರಸ್ತಿ ನೆಪದಲ್ಲಿ ಎಸ್ಕಾಂಗಳು ರಾಜ್ಯದ ನಾನಾ ಕಡೆ ದಿನವಿಡೀ ವಿದ್ಯುತ್ ಕಡಿತಗೊಳಿಸಿ ಪೂರೈಸಿ ಸರಿದೂಗಿಸುತ್ತಿವೆ.

RTPS energy production in full swing in all 8 units

ಫೆಬ್ರವರಿಯಿಂದ ಹೆಚ್ಚಿದ ಬೇಡಿಕೆ: ಕಳೆದ ಫೆಬ್ರವರಿಯಿಂದಲೇ ರಾಜ್ಯದ ಒಟ್ಟು ವಿದ್ಯುತ್ ಬೇಡಿಕೆ ಪ್ರಮಾಣ 10,200 ಮೆಗಾ ವ್ಯಾಟ್ ತಲುಪಿದೆ. ಇದುವರೆಗಿನ ಅತೀ ಹೆಚ್ಚಿನ ವಿದ್ಯುತ್ ಬೇಡಿಕೆಯ ದಾಖಲೆ ಕೂಡ ಈ ವರ್ಷದ್ದೇ ಆಗಿದೆ.
ದಿನದ ಗರಿಷ್ಠ ಸಾರ್ವಕಾಲಿಕ ದಾಖಲೆ 10,881 ಮೆಗಾ ವ್ಯಾಟ್ ಕಳೆದ ತಿಂಗಳಾಂತ್ಯಕ್ಕೆ ದಾಖಲಾಗಿ ಕೆಪಿಸಿ ಅಧಿಕಾರಿಗಳ ನಿದ್ದೆಗೆಡಿಸಿತ್ತು. ಆದರೆ ಅನಂತರ ರಾಜ್ಯದ ನಾನಾ ಕಡೆ ಬಿದ್ದ ಮಳೆ ಪರಿಸ್ಥಿತಿಯನ್ನು ಹಿಡಿತಕ್ಕೆ ತಂದಿದೆ.

English summary
For the last six months, Raichur Thermal Power Station was working round the clock in all eight units as the state may capable to provide sufficient power supply even in summer against heavy demand, energy department sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X