ಸ್ನೇಹಿತನ ಕಾಪಾಡಲು ಹೋಗಿ ಅಮೆರಿಕದಲ್ಲಿ ಸಾವನ್ನಪ್ಪಿದ ಸಿಂಧನೂರು ಯುವಕ
ರಾಯಚೂರು, ಸೆಪ್ಟೆಂಬರ್ 5: ಸಿಂಧನೂರು ಮೂಲದ ಯುವಕನೊಬ್ಬ ಅಮೆರಿಕಾದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ನೀರಿಗೆ ಬಿದ್ದ ತನ್ನ ಸ್ನೇಹಿತನನ್ನು ಕಾಪಾಡಲು ಹೋಗಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಶ್ರೀಪುರಂ ಜಂಕ್ಷನ್ ನಿವಾಸಿ ಅಜಯ್ ಕುಮಾರ್ (23) ಪ್ರಾಣ ಕಳೆದುಕೊಂಡಿದ್ದಾನೆ.
ಉಡುಪಿಯಲ್ಲಿ ಟೆಂಪೋ ಪಲ್ಟಿ: ಹುಲಿವೇಷಧಾರಿ ಸಾವು
ಅಜಯಕುಮಾರ ಕಳೆದ 8 ತಿಂಗಳಿನಿಂದ ಅಮೆರಿಕಾದ ಟೆಕ್ಸಾಸ್ ನಲ್ಲಿದ್ದರು. ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಲು ತೆರಳಿದ್ದ ಅಜಯ್ ಸ್ನೇಹಿತರೊಂದಿಗೆ ಮಂಗಳವಾರ ಪ್ರವಾಸಕ್ಕೆ ತೆರಳಿದ್ದರು. ಆಗ ಈ ದುರ್ಘಟನೆ ನಡೆದಿದೆ.
ಅಮೆರಿಕಾದ ಟರ್ನರ್ ಫಾಲ್ಸ್ ಗೆ ತೆರಳಿದ್ದ ಸಂದರ್ಭ ಅಜಯ್ ಸ್ನೇಹಿತ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋಗಿ, ತಾನೂ ನೀರಿನಲ್ಲಿ ಸಿಲುಕಿದ್ದಾನೆ. ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಜಯ್ ಕುಮಾರ್ ಮೃತದೇಹವನ್ನು ಇಂದು ಸಿಂಧನೂರಿಗೆ ತರಲಾಗುವುದು.