• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ: ದೇವೇಗೌಡ

|
   ಬಹುಮತ ಸಿಕ್ಕಿದ್ದರೂ ಹಾಳುಮಾಡಿಕೊಂಡ ಮೋದಿ : Lok Sabha Elections

   ರಾಯಚೂರು, ಏಪ್ರಿಲ್ 19: ಪ್ರಧಾನಿ ಮೋದಿ ಅವರ ಪ್ರಭಾವ ಕಡಿಮೆ ಆಗಿದ್ದು ಅರಿವಿಗೆ ಬಂದಿದ್ದು ಸ್ಥಿಮಿತ ತಪ್ಪಿ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಟ ದೇವೇಗೌಡ ಅವರು ಹೇಳಿದರು.

   'ಎಚ್‌ಡಿಡಿ ಮನಸ್ಸು ಮಾಡಿದ್ದರೆ ಚೆನ್ನಮ್ಮರನ್ನು ಎಂದೋ ರಾಜ್ಯಸಭೆಗೆ ಕಳುಹಿಸುತ್ತಿದ್ದರು'

   ರಾಯಚೂರಿನಲ್ಲಿ ನಡೆದ ಜಂಟಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಅವರು ರಾಜ್ಯದ ಮೈತ್ರಿ ಸರ್ಕಾರವನ್ನು ಕಲಬೆರಕೆ ಸರ್ಕಾರ ಎಂದಿದ್ದಾರೆ, ಒಬ್ಬ ಪ್ರಧಾನಿ ಸಂವಿಧಾನಬದ್ಧ ಸರ್ಕಾರವನ್ನು ಇಷ್ಟು ಹೀನಾಯವಾಗಿ ಟೀಕಿಸಿದ್ದು ನಾನು ನೊಡಿಲ್ಲ ಎಂದು ಅವರು ಹೇಳಿದರು.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಕಲಬೆರಕೆ ಸರ್ಕಾರ ಎನ್ನುವ ಅವರ ಬಿಜೆಪಿ ಪಕ್ಷವು 15 ರಾಜ್ಯಗಳಲ್ಲಿ ಮೈತ್ರಿ ಸರ್ಕಾರವನ್ನೇ ನಡೆಸುತ್ತಿದೆ, ಅದನ್ನು ಮರೆತು ಅವರು ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.

   ಇತ್ತೀಚಿನ ದಿನಗಳಲ್ಲಿ ಬಿಜೆಪಿಯು ಮೂರು ವಿಧಾನಸಭೆ ಮತ್ತು 12 ಲೋಕಸಭೆ ಉಪಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ ಹಾಗಾಗಿ ಅವರಿಗೆ ಅರಿವಾಗಿದೆ ಬಿಜೆಪಿಯ ಪ್ರಭಾವ ತಗ್ಗಿದೆ ಎಂಬುದು ಹಾಗಾಗಿ ಅವರು ಹೊಸ ನಾಟಕ ಪ್ರಾರಂಭಿಸಿದ್ದು 'ಹಿಂದುಳಿದ ಜಾತಿಯವನು ಎಂದು ಮತಕೇಳಲು ತೊಡಗಿದ್ದಾರೆ ಎಂದು ಅವರು ಹೇಳಿದರು.

   ನಿವೃತ್ತಿಯ ಮಾತೇ ಇಲ್ಲ, ರಾಹುಲ್ ಜೊತೆ ನಿಲ್ಲುತ್ತೇನೆ ಎಂದ ದೇವೇಗೌಡ್ರು

   ಇಷ್ಟು ವರ್ಷ ಆಡಳಿತ ಆದಮೇಲೆ ದೇಶಕ್ಕೆ ಬಲಿಷ್ಠ ಸರ್ಕಾರ ಬೇಕು ಎಂದು ಹೇಳುತ್ತಿರುವ ಇವರು, ಎಐಡಿಎಂಕೆ, ಶಿವಸೇನಾ, ಅಕಾಲಿದಳ, ಬಿಹಾರದ ಜನತಾ ದಳಗಳ ಬಳಿ ಹೋಗಿ ಮೈತ್ರಿಗೆ ಕೈ ಚಾಚಿದ್ದಾರೆ. ಸಣ್ಣ ಪಕ್ಷಗಳನ್ನು ಸೇರಿಸಿಕೊಂಡು ಚುನಾವಣೆಗೆ ಹೋಗುತ್ತಿರುವ ಅವರು ಮಹಾಘಟಭಂದನ್ ಅನ್ನು ಟೀಕಿಸುತ್ತಿದ್ದಾರೆ ಎಂದು ದೇವೇಗೌಡ ಅವರು ಹೇಳಿದ್ದಾರೆ.

   ಮೋದಿ ಆಡಳಿತದಲ್ಲಿ ರೈತರು ಹೈರಾಣಾಗಿದ್ದಾರೆ. ನಾನು ಪ್ರಧಾನಿ ಆಗಿದ್ದ ಕೇವಲ 10.5 ತಿಂಗಳಲ್ಲಿ ಕೃಷಿ ಅಭಿವೃದ್ಧಿ 7.5% ಆಗಿತ್ತು. ಆದರೆ ಮೋದಿಗೆ ರೈತರ ಬಗ್ಗೆ ಕಾಳಜಿ ಇಲ್ಲ, ಈಗ ಖಾತೆಗೆ ವರ್ಷಕ್ಕೆ 6000 ಹಾಕುತ್ತೇನೆ ಎನ್ನುತ್ತಿದ್ದಾರೆ ಆದರೆ ಅದು ಬಹಳ ಕಡಿಮೆ ಎಂದು ದೇವೇಗೌಡ ಹೇಳಿದರು.

   ದಶಕಗಳ ನಂತರ ಮೋದಿಗೆ ಬಹುಮತ ದೊರೆತಿತ್ತು, ಆದರೆ ಅದನ್ನು ಅವರು ಹಾಳುಮಾಡಿಕೊಂಡರು, ಅವರು ಕೆಟ್ಟ ಆಡಳಿತ ನೀಡಿದರು. ಇವರ ಆಡಳಿತದಲ್ಲಿ ದಲಿತ ಜನರು, ಮುಸ್ಲಿಂ ಭಾಂದವರಿಗೆ ಕೆಟ್ಟ ಅನುಭವವಾಗಿದೆ ಹಾಗಾಗಿ ಈ ಬಾರಿ ಅವರನ್ನು ಬದಲಾಯಿಸಬೇಕು ಎಂದು ದೇವೇಗೌಡ ಕರೆ ನೀಡಿದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   JDS president Deve Gowda said Narendra Modi said Karnataka has mash government, But BJP is in coalition government in 15 states. He must think before talk about a constitutional government.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more