ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂಬದಿ ಸವಾರರಿಗೆ ನಿಷೇಧ ನಿಯಮ ಜಾರಿಯಾಗಲ್ಲ: ರೇವಣ್ಣ

By Mahesh
|
Google Oneindia Kannada News

ರಾಯಚೂರು, ನವೆಂಬರ್ 02: 100 ಸಿ.ಸಿ. ಸಾಮರ್ಥ್ಯದ ಒಳಗಿನ ದ್ವಿಚಕ್ರವಾಹನಗಳಲ್ಲಿ ಹಿಂಬದಿ ಸವಾರರಿಗೆ ನಿಷೇಧವನ್ನು ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಸಾರಿಗೆ ಸಚಿವ ಎಚ್ ಎಂ ರೇವಣ್ಣ ಅವರು ಹೇಳಿದ್ದಾರೆ.

100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್ ಗಳಲ್ಲಿ ಡಬಲ್ ರೈಡ್ ನಿಷೇಧ?100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್ ಗಳಲ್ಲಿ ಡಬಲ್ ರೈಡ್ ನಿಷೇಧ?

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ, 100 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರವಾಹನಗಳ ನೋಂದಣಿಗೆ ಹಿಂದಿನಂತೆಯೇ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

No Ban on Pillion riders on under 100cc bikes : HM Revanna

ಹಿಂಬದಿ ಸೀಟ್ ಇರುವ ಹೊಸ ವಾಹನಗಳ ನೋಂದಣಿ ಮಾಡದಂತೆ ಸೂಚನೆ ನೀಡಿದ್ದಕ್ಕೆ ಸಾರಿಗೆ ಇಲಾಖೆ ವಿರುದ್ಧ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.ಹೀಗಾಗಿ, 100 ಸಿ.ಸಿ. ಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳ ನೋಂದಣಿ ನಿಯಮಕ್ಕೆ ತಿದ್ದುಪಡಿ( ಕರ್ನಾಟಕ ಮೋಟಾರು ವಾಹನ ಕಾಯ್ದೆ 1989ರ ಸೆಕ್ಷನ್ 143/3) ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಮೈಸೂರಿನಲ್ಲಿ ಬೈಕ್ ವಿದ್ಯಾರ್ಥಿಗಳ ಸಾವು ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿತ್ತು. ಹೈಕೋರ್ಟಿನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. 100 ಸಿಸಿ ಬೈಕ್ ಗಳ ಮೇಲೆ ಹಿಂಬದಿ ಸವಾರಿ ರದ್ದು ವಿಚಾರ ಮರುಪರಿಶೀಲಿಸಲು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

100ಸಿಸಿ: ಹಳೆಯ ಬೈಕ್ ಗಳ ಮೇಲೂ ಡಬಲ್ ರೈಡ್ ನಿಷೇಧದ ತೂಗುಗತ್ತಿ 100ಸಿಸಿ: ಹಳೆಯ ಬೈಕ್ ಗಳ ಮೇಲೂ ಡಬಲ್ ರೈಡ್ ನಿಷೇಧದ ತೂಗುಗತ್ತಿ

ಇಂದಿರಾ ಗಾಂಧಿ ಬಸ್ : ಬಸ್ ನಿಲ್ದಾಣಗಳಲ್ಲಿ ಆದ್ಯತೆ ಮೇರೆಗೆ ಇಂದಿರಾ ಕ್ಯಾಂಟಿನ್ ಆರಂಭಿಸಲಾಗುವುದು. ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗಾಗಿ ಇಂದಿರಾ ಗಾಂಧಿ ಹೆಸರಿನಲ್ಲಿ ಬಸ್ ಆರಂಭಿಸಲಾಗುವುದು ಎಂದರು.

ಅಂತರ ನಿಗಮ ವರ್ಗಾವಣೆಯಲ್ಲಿ ಬೆಂಗಳೂರಿನಿಂದ ಅಧಿಕ ನೌಕರರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ . ಸದ್ಯ ಬಿಎಂಟಿಸಿಗೆ ನೇಮಕಾತಿ ಪ್ರಕ್ರಿಯೆ ನಡೆದಿದೆ. ನೇಮಕಾತಿ ಪೂರ್ಣಗೊಂಡ ನಂತರ ಆದ್ಯತೆ ಮೇರೆಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು.

English summary
Transport Minister H M Revanna promised necessary action allowing registration of below 100cc bikes and pillion riding.The relevant rule would be amended as a relief to bikers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X