• search
  • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು ಜಿಲ್ಲೆಯ ಐತಿಹಾಸಿಕ ಕರಡಕಲ್ಲ ಕೆರೆಗೆ ಹೊಸ ಸ್ಪರ್ಶ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಸೆಪ್ಟೆಂಬರ್‌, 29; ಜಿಲ್ಲೆಯ ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕರಡಕಲ್ಲ, ಲಿಂಗಸುಗೂರು, ಹುಲಿಗುಡ್ಡ ವಾರ್ಡ್‌ಗಳ ಭಾಗದಲ್ಲಿರುವ ಐತಿಹಾಸಿಕ ಕರಡಕಲ್ಲ ಕೆರೆಯ ಅಭಿವೃದ್ಧಿ ಕಾರ್ಯವು ಭರದಿಂದ ಸಾಗಿದೆ. ಈ ಅಭಿವೃದ್ಧಿ ಕಾರ್ಯಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಕರಡಿಕಲ್‍ ಸಂಸ್ಥಾನದ 800ರ ಮೂರನೇ ಬಿಲ್ಲವ ಮಹಾರಾಜ ಕೆರೆ ನಿರ್ಮಿಸಿದ್ದಾರೆ ಎಂಬುದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ನಂತರದಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ ಈ ಕೆರೆಯ ಸ್ಥಳವನ್ನೇ ಕಂಟೋನ್ಮೆಂಟ್‌ ಪ್ರದೇಶವಾಗಿ ಬಳಸಲಾಗಿತ್ತು. ಅಧಿಕಾರಿಗಳ ವಾಸ್ತವ್ಯಕ್ಕೆ, ಡಿವೈಎಸ್ಪಿ ಬಂಗಲೆ, ವಾಯು ವಿಹಾರಕ್ಕೆಂದು ಕೆರೆ ದಂಡೆಯ ಮೇಲೆ ಕ್ಲಬ್‍ ನಿರ್ಮಿಸಿದ್ದು, ಇವು ಕೆರೆಯ ಮಹತ್ವಕ್ಕೆ ಮೈಲುಗಲ್ಲುಗಳಾಗಿವೆ.

ಬೆಲೆ ಕುಸಿತ; ಲಿಂಗಸೂಗೂರು ರೈತರ ಮುಖದಲ್ಲಿ ಕಾಂತಿ ತರದ ಸೂರ್ಯಕಾಂತಿಬೆಲೆ ಕುಸಿತ; ಲಿಂಗಸೂಗೂರು ರೈತರ ಮುಖದಲ್ಲಿ ಕಾಂತಿ ತರದ ಸೂರ್ಯಕಾಂತಿ

ಕೆಲ ದಶಕಗಳಿಂದ ಕೆರೆ ಅಭಿವೃದ್ಧಿ ಮತ್ತು ಕೆರೆಯಲ್ಲಿ ಸಂಗ್ರಹಗೊಳ್ಳುವ ಕಲುಷಿತ ನೀರನ್ನು ಸ್ಥಗಿತಗೊಳಿಸುವಂತೆ ಅಲ್ಲಿನ ಸ್ಥಳೀಯರು ಹೋರಾಟ ನಡೆಸಿಕೊಂಡು ಬಂದಿದ್ದರು. ಕಲುಷಿತ ನೀರು ಕೆರೆಗೆ ಸೇರದಂತೆ ಚರಂಡಿ ನಿರ್ಮಾಣ ಸೇರಿದಂತೆ ಕೆರೆಯ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ 6.43 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಕೆರೆಯ ಪೂರ್ವ ಭಾಗದಲ್ಲಿ ಉದ್ಯಾನ ನಿರ್ಮಾಣ, ಕೆರೆ ತಡೆಗೋಡೆ, ಗ್ರಿಲ್‌ ಅಳವಡಿಕೆ, 960 ಮೀಟರ್‌ ಉದ್ದದ ಪಾದಚಾರಿ ಮಾರ್ಗ, ಲೈಟಿಂಗ್‍, ಸೌಂದರ್ಯ ಹೆಚ್ಚಿಸುವ ಗಿಡಗಳ ನಾಟಿ, ಉದ್ಯಾನದಲ್ಲಿ ಬಯಲು ರಂಗಮಂದಿರ, ವಿಶ್ರಾಂತಿ ಶೆಡ್‌ಗಳು, ಆಸನಗಳ ಅಳವಡಿಕೆ ಸೇರಿದಂತೆ ಬೋಟಿಂಗ್‍ ವ್ಯವಸ್ಥೆಯ ಕಾಮಗಾರಿ ಭರದಿಂದ ಸಾಗಿದೆ.

ಕೆರೆಯ ಸೌಂದರ್ಯಕ್ಕೆ ಮಾರುಹೋದ ಜನರು

ಕೆರೆಯ ಸೌಂದರ್ಯಕ್ಕೆ ಮಾರುಹೋದ ಜನರು

ಕಾರಂಜಿ ಅಳವಡಿಕೆ, ಶೌಚಾಲಯ, ಶುದ್ಧ ಕುಡಿಯುವ ನೀರು, ಮಕ್ಕಳಿಗಾಗಿ ಆಟಿಗೆ ಸಾಮಗ್ರಿ ಸೇರಿದಂತೆ ಹೈಟೆಕ್‍ ಸ್ಪರ್ಶ ನೀಡುವ ಕಾರ್ಯ ನಡೆಯುತ್ತಿದೆ. ಬೋಟಿಂಗ್‍ ವ್ಯವಸ್ಥೆಗೆ ಪ್ಲಾಟ್‌ಪಾರ್ಮ್‌ ಕಾಮಗಾರಿ ಪ್ರಚಲಿತದಲ್ಲಿದೆ. ಉದ್ಯಾನದಲ್ಲಿ ಲಾನ್‍ ಜೋಡಣೆ, ಸೌಂದರ್ಯ ಹೆಚ್ಚಿಸುವ ವೈವಿಧ್ಯಮಯ ಸಸಿಗಳ ನಾಟಿ ಮಾಡಲಾಗಿದ್ದು, ಇದು ಶೀಘ್ರದಲ್ಲಿ ನಾಗರಿಕರ ಬಳಕೆಗೆ ಬರಲಿದೆ ಎನ್ನುವ ಆಶಯ ನಾಗರಿಕದ್ದಾಗಿದೆ. 'ಐತಿಹಾಸಿಕ ಕೆರೆ ಸೌಂದರ್ಯ, ಸಾರ್ವಜನಿಕರಿಗೆ ಉಪಯುಕ್ತ ಆಗುವ ರೀತಿಯಲ್ಲಿ ಅಭಿವೃದ್ಧಿಗೆ ಮುಂದಾಗಿದ್ದು ಗಮನಾರ್ಹವಾಗಿದೆ. ಕೆರೆ ಒತ್ತುವರಿ ಆಗಿರುವ ಬಗ್ಗೆ ದೂರುಗಳಿದ್ದು, ರಕ್ಷಣೆಗೆ ಕಂದಾಯ ಇಲಾಖೆ ಮುಂದಾಗಬೇಕು. ಅದೇ ರೀತಿಯಲ್ಲಿ ವಾರ್ಡ್‌ ಬಡಾವಣೆಗಳಿಗೆ ಅಗತ್ಯ ಸೌಲಭ್ಯಗಳ ಚಿಂತನೆಗೆ ಜನಪ್ರತಿನಿಧಿಗಳು ಮುಂದಾಗಬೇಕು' ಎಂದು ಸಮಾಜ ಸೇವಕ ಅಕ್ರಂಪಾಷ ಮನವಿ ಮಾಡಿದ್ದಾರೆ.

ತುಂಗಭದ್ರಾ ಎಡದಂಡೆ ಕಾಲುವೆ ನೀರು ಸ್ಥಗಿತ; ರಾಯಚೂರಿನ ರೈತರು ಕಂಗಾಲುತುಂಗಭದ್ರಾ ಎಡದಂಡೆ ಕಾಲುವೆ ನೀರು ಸ್ಥಗಿತ; ರಾಯಚೂರಿನ ರೈತರು ಕಂಗಾಲು

ಕರಡಕಲ್ಲ ಕೆರೆ ಬಳಿ ಕಾಮಗಾರಿಗಳ ಪ್ರಗತಿ

ಕರಡಕಲ್ಲ ಕೆರೆ ಬಳಿ ಕಾಮಗಾರಿಗಳ ಪ್ರಗತಿ

'ಕರಡಕಲ್ಲ ಕೆರೆ ಅಭಿವೃದ್ಧಿ ಜೊತೆಗೆ ಬೋಟಿಂಗ್‍, ವಾಯು ವಿಹಾರದ ಪಾದಚಾರಿ ಮಾರ್ಗ, ವಿಶ್ರಾಂತಿಗಾಗಿ ಆಸನಗಳು, ಉದ್ಯಾನ, ಬಯಲು ರಂಗಮಂಟಪ ಸೇರಿದಂತೆ ಇತರೆ ಸೌಲಭ್ಯಕ್ಕೆ ಅನುದಾನ ನೀಡಿದ್ದಾರೆ. ಶಾಸಕ ಡಿ.ಎಸ್‍ ಹೂಲಗೇರಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 6.43 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ' ಎಂದು ಜಿಲ್ಲಾ ಪಂಚಾಯತ್‍ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ ಶಿವಕುಮಾರ್‌ ತಿಳಿಸಿದ್ದಾರೆ.
ಜನರಲ್ಲಿ ಅಚ್ಚಳಿಯದೆ ಉಳಿಯುವ ಕೆಲಸ ಮಾಡುವ ಕನಸು ಕಂಡಿದ್ದೆ. ಕರಡಕಲ್ಲ ಕೆರೆ ಅಭಿವೃದ್ಧಿ, ಕ್ರೀಡಾಂಗಣ, ಗ್ರಂಥಾಲಯ ಡಿಜಿಟಲೀಕರಣ, ಬಸವೇಶ್ವರ ಪುತ್ಥಳಿ ನಿರ್ಮಾಣ ತೃಪ್ತಿ ತಂದಿದೆ ಎಂದು ಲಿಂಗಸುಗೂರು ಶಾಸಕ ಡಿ.ಎಸ್‍ ಹೂಲಗೇರಿ ಹೇಳಿದರು.

ರೈತರ ಮುಖದಲ್ಲಿ ಹರ್ಷ ತರಿಸಿದ ಮಳೆ

ರೈತರ ಮುಖದಲ್ಲಿ ಹರ್ಷ ತರಿಸಿದ ಮಳೆ

ಇನ್ನು ಇತ್ತೀಚೆಗೆ ಸುರಿದ ಮಳೆಯಿಂದ ಜಿಲ್ಲಾದ್ಯಂತ ಇರುವ ಕೃಷಿ ಹೊಂಡ, ತೆರೆದ ಬಾವಿ ಹಾಗೂ ಕೆರೆಕಟ್ಟೆಗಳಲ್ಲಿ ನೀರು ತುಂಬಿದ್ದರಿಂದ ರೈತರಿಗೆ ಸಂತಸ ತಂದಿದೆ. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಹಾಗೂ ಜನುವಾರುಗಳಿಗೆ ನೀರಿನ ಸಮಸ್ಯೆ ಕೊಂಚ ದೂರ ಮಾಡಿದಂತಾಗಿದೆ. ಜಿಲ್ಲಾಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿ ಅಂತರ್ಜಲ ಅಭಿವೃದ್ಧಿ ಕೃಷಿ ಹೊಂಡ, ಬದು ನಿರ್ಮಾಣ, ತೆರೆದ ಬಾವಿ ಹಾಗೂ ಗೋಕಟ್ಟೆಯನ್ನು ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿರುವ ಕೆರೆಗಳಲ್ಲಿ ನೀರು ತುಂಬಿಸಲು ಹಾಗೂ ಅಂತರ್ಜಲ ಮಟ್ಟ ಸುಧಾರಣೆಯಾಗಿದ್ದು, ಪ್ರಾಣಿ-ಪಕ್ಷಿಗಳಿಗೆ ದಾಹ ತಣಿಸಿದೆ. ಕೆರೆಗಳ ಭರ್ತಿಗೆ ಅಮೃತ ಸರೋವರ ಕಾರ್ಯಕ್ರಮ ರೂಪಿಸಲಾಗಿದೆ.

ಉತ್ತಮ ಪ್ರತಿಫಲದ ಭರವಸೆಯಲ್ಲಿ ರೈತರು

ಉತ್ತಮ ಪ್ರತಿಫಲದ ಭರವಸೆಯಲ್ಲಿ ರೈತರು

ಕೆರೆ, ಕೃಷಿ ಹೊಂಡಗಳು ತುಂಬಿದ್ದು, ಬೇಸಿಗೆಯ ಅಂತ್ಯದವರೆಗೂ ನೀರಿನ ಆಸರೆ ಆಗಲಿದೆ. ರೈತರಲ್ಲಿ ಸಂತಸ ಹೆಚ್ಚಾಗಿದ್ದು, ಕೃಷಿ ಪೂರಕ ನರೇಗಾ ಯೋಜನೆ ಕೃಷಿ ಕ್ಷೇತ್ರಕ್ಕೂ ಉತ್ತಮ ಮಳೆ ಬಂದಿರುವ ಕಾರಣ ಜಲಮೂಲಗಳೆಲ್ಲ ನೀರು ಸಂಗ್ರಹವಾಗಿದ್ದರಿಂದ ರೈತರಿಗೆ ಉತ್ತಮ ಪ್ರತಿಫಲ ಸಿಗುತ್ತದೆ. ಜೊತೆಗೆ ನೀರಿನ ಸಮಸ್ಯೆ ನಿವಾರಣೆಗೆ ಸಹಕಾರಿ ಆಗಲಿದೆ.

English summary
Development work of historical Karadakkalla Lake under Lingasuguru Municipality of Raichur district has progressed full speed, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X