• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಗರಸಭೆ ಜೆಡಿಎಸ್ ಸದಸ್ಯ ಬರ್ಬರ ಹತ್ಯೆ: ದುಷ್ಕರ್ಮಿಗಳು ಪರಾರಿ

|

ಬೆಂಗಳೂರು, ಸೆ. 29: ಕೊರೊನಾ ವೈರಸ್ ಸಂಕಷ್ಟದಿಂದ ಅಪರಾಧ ಚಟುವಟಿಕೆಗಳು ಕಡಿಮೆ ಆಗುತ್ತಿಲ್ಲ. ಪರಿಚಯದವರೊಂದಿಗೆ ಮಾತನಾಡುತ್ತ ನಿಂತಿದ್ದಾಗಲೇ ನಾಲ್ವರು ದುಷ್ಕರ್ಮಿಗಳು ನಗರಸಭೆಯ ಜೆಡಿಎಸ್ ಪಕ್ಷದ ಸದಸ್ಯನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ನಗರದ ಝಾಕೀರ ಹುಸೇನ ವೃತ್ತದಲ್ಲಿ ಮಾತನಾಡುತ್ತ ನಿಂತಿದ್ದ ಮಕಬೂಲ್ ಎಂಬುವರೇ ಕೊಲೆಯಾಗಿರುವ ದುರ್ದೈವಿ ಎಂದು ತಿಳಿದು ಬಂದಿದೆ. ರಾಯಚೂರು ನರಸಭೆ ಜೆಡಿಎಸ್ ಸದಸ್ಯರನ್ನೇ ಕೊಲೆ ಮಾಡಿ ಆಗುಂತಕರು ಪರಾರಿಯಾಗಿದ್ದಾರೆ. ಮಾರಕಾಸ್ತ್ರಗಳಿಂದಾದ ಹಲ್ಲೆಯಿಂದಾಗಿ ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ.

   ಕಷ್ಟ ಪಟ್ಟು IAS ಮಾಡಿದ್ರು NO USE !! |Rohini Sindhuri | Oneindia Kannada

   ತೀವ್ರ ಗಾಯಗಳಿಂದ ರಕ್ತಸ್ರಾವವಾದ ಪರಿಣಾಮ ಮಕಬೂಲ್ ಸಾವನ್ನಪ್ಪಿದ್ದು, ಕೊಲೆ ಮಾಡಿರುವ ನಾಲ್ವರು ಆರೋಪಿಗಳು ಪರಾರೊಯಾಗಿದ್ದಾರೆ. ಜನರ ಮಧ್ಯದಲ್ಲಿಯೇ ಘಟನೆ ನಡೆದಿದ್ದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಸದರ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ.

   English summary
   Raichur Municipality JDS party member was brutally shot and killed in Zakira Hussain circle of Raichur city,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X