• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಮಾಡಿದ ಅನ್ಯಾಯ ನಾವು ಸರಿಮಾಡುತ್ತೇವೆ : ರಾಯಚೂರಿನಲ್ಲಿ ರಾಹುಲ್

|
   ಜನರಿಗೆ ನರೇಂದ್ರ ಮೋದಿ ಮಾಡಿದ ಅನ್ಯಾಯವನ್ನ ನಾವು ಸರಿ ಮಾಡುತ್ತೇವೆ ಎಂದ ರಾಹುಲ್ ಗಾಂಧಿ | Oneindia Kannada

   ರಾಯಚೂರು, ಏಪ್ರಿಲ್ 19 : ನರೇಂದ್ರ ಮೋದಿ ಅವರು ಕಳೆದ ಐದು ವರ್ಷದಲ್ಲಿ ಭಾರತದ ರೈತರಿಗೆ, ಬಡವರಿಗೆ, ಯುವಕರಿಗೆ ಅನ್ಯಾಯ ಮಾಡಿದ್ದಾರೆ. ನಾವು ಅವರಿಗೆ ನ್ಯಾಯ ಒದಗಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

   ರಾಯಚೂರಿನಲ್ಲಿ ಆಯೋಜಿಸಿದ್ದ ಬೃಹತ್ ಜಂಟಿ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದ ಅವರು, ಮೋದಿ ಅವರು ಪ್ರತಿ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದಿದ್ದರು, ಆದರೆ ಹಾಕಲಿಲ್ಲ. ಆದರೆ ನಾವು ಭರವಸೆಯನ್ನು ನಿಜ ಮಾಡುತ್ತೇವೆ. 'ನ್ಯಾಯ್' ಯೋಜನೆ ಮೂಲಕ ಪ್ರತಿ ಬಡವರ ಖಾತೆಗೆ ವರ್ಷಕ್ಕೆ 72,000 ರು. ಹಣ ಹಾಕುತ್ತೇವೆ ಎಂದರು.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಬಡವರ ಒಳಿತಿಗಾಗಿ ನಾವು ಏನಾದರೂ ಮಾಡಲು ಹೊರಟಾಗ, 'ಅಷ್ಟೊಂದು ಹಣ ಎಲ್ಲಿಂದ ತರುತ್ತೀರಿ?' ಎಂದು ಮೋದಿ ಪ್ರಶ್ನಿಸುತ್ತಾರೆ, ಆದರೆ ಅವರ ಶ್ರೀಮಂತ ಗೆಳೆಯರ ಸಾಲಮನ್ನಾ ಮಾಡಲು ಮಾತ್ರ ಮೋದಿ ಬಳಿ ಹಣ ಇದೆ ಎಂದು ರಾಹುಲ್ ವ್ಯಂಗ್ಯ ಮಾಡಿದರು.

   ಮೋದಿ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ: ದೇವೇಗೌಡ

   ಮೋದಿ ಅವರು ಹೋದಲ್ಲೆಲ್ಲಾ ಭರವಸೆ ಕೊಡುತ್ತಾರೆ, ಆದರೆ ಅದನ್ನು ನಿಭಾಯಿಸಲು ಸೋತಿದ್ದಾರೆ. ಜನರಿಗೆ ಅವರ ವಿಫಲತೆ ಅರ್ಥವಾಗಿರುವುದು ಅವರಿಗೆ ಗೊತ್ತಾಗಿದೆ. ಹಾಗಾಗಿಯೇ ಅವರು ಈಗ ರಾಷ್ಟ್ರೀಯ ಭದ್ರತೆಯ ವಿಷಯವನ್ನು ಮಾತನಾಡುತ್ತಿದ್ದಾರೆ ಎಂದು ರಾಹುಲ್ ಹೇಳಿದರು.

   'ರಫೇಲ್ ಒಪ್ಪಂದದಲ್ಲಿ ಕಳ್ಳತನ ಮಾಡಿದ್ದಾರೆ'

   'ರಫೇಲ್ ಒಪ್ಪಂದದಲ್ಲಿ ಕಳ್ಳತನ ಮಾಡಿದ್ದಾರೆ'

   ರಾಷ್ಟ್ರೀಯ ಭದ್ರತೆಯ ಬಗ್ಗೆ ಮೋದಿ ಅವರಿಗೆ ಕಾಳಜಿ ಇದ್ದಿದ್ದರೆ ಅವರೇಕೆ ರಫೇಲ್ ವಿಷಯದಲ್ಲಿ ಕಳ್ಳತನ ಮಾಡಿದರು. ಕರ್ನಾಟಕದ ಎಚ್‌ಎಎಲ್‌ ಬಳಿ ಇದ್ದ ಕಂಟ್ರಾಕ್ಟ್‌ ಅನ್ನು ಕಿತ್ತುಕೊಂಡು ಅನಿಲ್ ಅಂಬಾನಿಗೆ ಏಕೆ ನೀಡಿದರು, ರಫೆಲ್ ಹಗರಣದಲ್ಲಿ 3000 ಸಾವಿರ ಕೋಟಿ ಕದ್ದು ಏಕೆ ಅನಿಲ್ ಅಂಬಾನಿ ಜೇಬು ತುಂಬಿಸಿದರು ಎಂದು ರಾಹುಲ್ ಪ್ರಶ್ನೆ ಮಾಡಿದರು. ಈ ಸಮಯದಲ್ಲಿ ಚೌಕೀದಾರ್ ಚೋರ್ ಘೊಷಣೆಗಳನ್ನು ಜನ ಕೂಗಿದರು.

   ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

   'ಎಲ್ಲರಿಗೂ ನ್ಯಾಯ ಒದಗಿಸುತ್ತದೆ ಕಾಂಗ್ರೆಸ್'

   'ಎಲ್ಲರಿಗೂ ನ್ಯಾಯ ಒದಗಿಸುತ್ತದೆ ಕಾಂಗ್ರೆಸ್'

   2019ರ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ, ಮೋದಿ ಆಡಳಿತದಿಂದಾಗಿ ಉದ್ಯೋಗ ವಂಚಿತರಾಗಿರುವ ಯುವಕರಿಗೆ ಉದ್ಯೋಗ ಕೊಡುತ್ತೇವೆ, ಗಬ್ಬರ್ ಸಿಂಗ್ ಟ್ಯಾಕ್ಸ್‌ ಅನ್ನು ಸರಳಗೊಳಿಸಿ ಜಿಎಸ್‌ಟಿ ಆಗಿ ಪರಿವರ್ತನೆ ಮಾಡುತ್ತೇವೆ, ಮಹಿಳೆಯರಿಗೆ ಚುನಾವಣೆಯಲ್ಲಿ , ನೌಕರಿಯಲ್ಲಿ ಮೀಸಲಾತಿ ಕೊಡುತ್ತೇವೆ ಎಂದು ರಾಹುಲ್ ವಾಗ್ದಾನ ನೀಡಿದರು.

   ಮೇ 23ರಂದು ಕಾಂಗ್ರೆಸ್‌-ಜೆಡಿಎಸ್‌ಗೆ ಬಿಗ್ ಶಾಕ್ : ಮೋದಿ ಟ್ವೀಟ್

   'ಎಚ್‌ಡಿಕೆ ಸಾಲಮನ್ನಾ ಬಗ್ಗೆ ಮೋದಿ ಸುಳ್ಳು'

   'ಎಚ್‌ಡಿಕೆ ಸಾಲಮನ್ನಾ ಬಗ್ಗೆ ಮೋದಿ ಸುಳ್ಳು'

   ಮೋದಿ ಅವರು ಹೋದಲ್ಲೆಲ್ಲಾ ಸುಳ್ಳು ಹೇಳುತ್ತಾರೆ. ಕರ್ನಾಟಕದಲ್ಲಿ ಇಲ್ಲಿನ ಸರ್ಕಾರ 48,000 ಕೋಟಿ ರೈತರ ಸಾಲಮನ್ನಾ ಮಾಡಿದೆ ಆದರೆ ಮೋದಿ ಅವರು ಇಲ್ಲಿ ಬಂದು ಸಾಲಮನ್ನಾ ಆಗಿಲ್ಲವೆಂದು ಸುಳ್ಳು ಹೇಳುತ್ತಾರೆ. ಪೂರ್ತಿ ಭಾರತಕ್ಕೆ ಗೊತ್ತಿದೆ ಎಚ್‌ಡಿಕೆ ಸಾಲಮನ್ನಾ ಮಾಡಿದ್ದಾರೆಂದು ಆದರೆ ಮೋದಿಗೆ ಗೊತ್ತಿಲ್ಲ. ನಾನು ಗುಜರಾತ್‌ನಿಂದ ಈಗ ಬಂದೆ ಅಲ್ಲಿನ ಜನರಿಗೆ ಸಹ ಮೋದಿ ಬೇಡವಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

   ಹಾವೇರಿ-ಗದಗ ಲೋಕಸಭಾ ಕ್ಷೇತ್ರ : ಕಾಂಗ್ರೆಸ್‌ಗೆ ಗೆಲುವಿನ ನಿರೀಕ್ಷೆ

   ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೇಳಿದ ರಾಹುಲ್

   ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೇಳಿದ ರಾಹುಲ್

   ರಾಹುಲ್ ಗಾಂಧಿ ಅವರು ಕಾರ್ಯಕ್ರಮಕ್ಕೆ ನಿಗದಿತ ಅವಧಿಗಿಂತ ತಡವಾಗಿ ಬಂದರು, ಭಾಷಣ ಆರಂಭಿಸುವ ಸಮಯದಲ್ಲೇ ತಡವಾಗಿದ್ದಕ್ಕೆ ಕಾರಣ ಹೇಳಿ ಕ್ಷಮೆ ಕೇಳಿದರು. ಭಾಷಣದ ಅಂತ್ಯದಲ್ಲೂ ಸಹ ವೇದಿಕೆ ಮೇಲಿದ್ದವರಿಗೆ ಮತ್ತು ವೇದಿಕೆ ಮುಂಭಾಗದಲ್ಲಿ ಇದ್ದವರಿಗೂ ಸಹ ಕ್ಷಮಾಪಣೆ ಕೇಳಿ ಮಾತು ಮುಗಿಸಿದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   AICC president Rahul Gandhi today address huge joint rally in Karnataka's Raichur. He said Narendra Modi fooled Indian farmers, youths and all the people but congress stand with them give justice to them.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more