ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಳೆಗನ್ನಡಕ್ಕಿಂತ ಕ್ಲಿಷ್ಟ ಈ 'ರಾಮುಲು ಕನ್ನಡ': ತಾಳ್ಮೆ ಇದ್ರೆ ಮಾತ್ರ ಓದಿ!

|
Google Oneindia Kannada News

ರಾಯಚೂರು, ಜನವರಿ 27: ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣದುದ್ದಕ್ಕೂ ತಪ್ಪು ತಪ್ಪು ಕನ್ನಡ ಉಚ್ಚಾರಣೆ ಮಾಡಿ ತೀವ್ರ ಟೀಕೆಗೆ ಒಳಗಾಗಿದ್ದ ಸಚಿವ ಬಿ. ಶ್ರೀರಾಮುಲು, ಗಣರಾಜ್ಯೋತ್ಸವದ ಭಾಷಣದಲ್ಲಿಯೂ ತಪ್ಪುಗಳನ್ನು ಪುನರಾವರ್ತಿಸಿದ್ದಾರೆ.

ಶ್ರೀರಾಮುಲು ಅವರ ಭಾಷಣದ ವಿಡಿಯೋ ವೈರಲ್ ಆಗಿದ್ದು, ಅವರು ಬಳಸುತ್ತಿರುವ ತಪ್ಪು ಪದಗಳ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

ಎಚ್ಡಿಕೆಗೆ ಭಾರತ ಬಿಟ್ಟು ತೊಲಗಿ ಎಂದು ತಿರುಗೇಟು ನೀಡಿದ ಶ್ರೀರಾಮುಲುಎಚ್ಡಿಕೆಗೆ ಭಾರತ ಬಿಟ್ಟು ತೊಲಗಿ ಎಂದು ತಿರುಗೇಟು ನೀಡಿದ ಶ್ರೀರಾಮುಲು

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶ್ರೀರಾಮುಲು ಭಾನುವಾರ 71ನೇ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ್ದರು. ಅವರ ಭಾಷಣದುದ್ದಕ್ಕೂ ತಪ್ಪು ತಪ್ಪು ಭಾಷೆಯ ಬಳಕೆ ಮತ್ತು ಅರೆಬರೆ ಪದಗಳ ಉಚ್ಚಾರಣೆ ಕಂಡುಬಂತು.

ಸಾಮಾಜಿಕ ನ್ಯಾಯದ ಬದಲಾಗಿ 'ಸಾಮಾಜಿಕ ನಾಯಿ', ವೈವಿಧ್ಯದ ದೇಶ ಬದಲಾಗಿ 'ವೈವಿಧ್ಯತೆ ಇಲ್ಲದ ದೇಶ', ಮಾದರಿ ಬದಲಾಗಿ 'ಮಾಧುರಿ', ಉಡಾವಣೆ ಬದಲಾಗಿ 'ಉಗ್ರಾಣಿ', ಆಜಾದ್ ಬದಲಾಗಿ 'ಆಜಾರ್', ತಂತ್ರಜ್ಞಾನದ ಬದಲು 'ತಂತ್ರಗ' ಎಂದು ಉಚ್ಚರಿಸಿದರು.

ರೆಡ್ಡಿ ವಿವಾದಾತ್ಮಕ ಹೇಳಿಕೆ: ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಶ್ರೀರಾಮುಲುರೆಡ್ಡಿ ವಿವಾದಾತ್ಮಕ ಹೇಳಿಕೆ: ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಶ್ರೀರಾಮುಲು

ಅಲ್ಲದೆ, 15ರಂದು ಸ್ವಾತಂತ್ರ್ಯೋತ್ಸವದ ದಿನ ಎನ್ನುವ ಬದಲು, ಆಗಸ್ಟ್ 15ರಂದು ಗಣರಾಜ್ಯೋತ್ಸವ ಎಂದರು. ಸ್ವಾತಂತ್ರ್ಯ ಪದವನ್ನು ಹಲವು ಬಾರಿ 'ಸ್ವಾಸಂತ್ರ' ಎಂದು ಉಚ್ಚರಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆಯಲ್ಲಿಯೇ ಒಮ್ಮೆ ಶ್ರೀರಾಮುಲು ಅವರಿಗೆ ಕನ್ನಡ ಪಾಠ ಮಾಡಿದ್ದರು.

ಆಗಸ್ಟ್ 15 ಗಣರಾಜ್ಯೋತ್ಸವ

ಆಗಸ್ಟ್ 15 ಗಣರಾಜ್ಯೋತ್ಸವ

71 ವರ್ಷಗಳ ನಂತರ ನಿಜವಾದಂತಹ, ಮಹತ್ವವಾದಂತಹ ದಿನ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಆಗಸ್ಟ್ 15 ಗಣರಾಜ್ಯೋತ್ಸವದ ಕೂಡ ಅಷ್ಟೇ ಮಹತ್ತರವಾದಂತಹದ್ದು. ಇಡೀ ಭಾರತದ ನಾಗರಿಕರಿಗೆ ಸಮಗ್ರವಾಗಿ ಸಾಮಾಜಿಕವಾಗಿ ನಾಯಿ ಕೊಟ್ಟಂತಹ ದಿನ ಇವತ್ತು ಎಂದು ಹೇಳಿದರು.

ಒಗ್ಗೂಡಿಸು ಎನ್ನುವುದಕ್ಕೆ ಒಗ್ಗರಿಸು, ಸಂಸ್ಥಾನಗಳು ಎನ್ನುವುದಕ್ಕೆ ಸಮಸ್ಯೆಗಳು, ಚಂದ್ರಶೇಖರ್ ಆಜಾರ್, ವಲ್ಲಭಬಾಯ್ ಪಟೇಲ್ ಬದಲು ಪಾಟೀಲ್ ಎಂದರು.

ಸಾಮಾಜಿಕವಾಗಿ ನಾಯಿ ಕೊಟ್ಟಂತಹ ದಿನ

ಸಾಮಾಜಿಕವಾಗಿ ನಾಯಿ ಕೊಟ್ಟಂತಹ ದಿನ

ಪ್ರಥಮ ಬಾರಿಗೆ 370 ವಿಧಿ ರದ್ದುಪಡಿಸಿ ಬಳಿಕ ಅಖಂಡ ಭಾರದತ ಮೊದಲನೇ ಬಾರಿಗೆ ಗಣರಾಜ್ಯೋತ್ಸವ ಇದು ಎನ್ನಕ್ಕೆ ನನಗೆ ಹೆಮ್ಮೆಯಿಂದ ನಾನು ಹೇಳಬೇಕಾಗ್ತಿದೆ.. . ಜಮ್ಮು ಕಾಶ್ಮೀರ ಸೇರಿದಂತೆ ಇಡೀ ಭಾರತಕ್ಕೆ ಅಂಬೇಡಿಕರ್ ಅವರು ಸಂವಿಧಾನದ ಮೊದಲು ಇವತ್ತು ಎಲ್ಲ ರೀತಿಯಲ್ಲಿಯೂ ಅರ್ಥಪೂರ್ವ ಆದಂತಹ ಆಗಿದೆ ಎಂದು ನನ್ನ ಭಾವನೆ ಇದೆ.

ಸಿದ್ದರಾಮಯ್ಯ ವಕೀಲರಾಗಿದ್ದವರು, ಮೊದಲು ಸಿಎಎ ಚೆನ್ನಾಗಿ ಓದಿಕೊಳ್ಳಲಿ: ಶ್ರೀರಾಮುಲುಸಿದ್ದರಾಮಯ್ಯ ವಕೀಲರಾಗಿದ್ದವರು, ಮೊದಲು ಸಿಎಎ ಚೆನ್ನಾಗಿ ಓದಿಕೊಳ್ಳಲಿ: ಶ್ರೀರಾಮುಲು

ಇಡೀ ಭಾರತದ ನಾಗರಿಕರಿಗೆ ಸಮಗ್ರವಾಗಿ ಸಾಮಾಜಿಕವಾಗಿ ನಾಯಿ ಕೊಟ್ಟಂತಹ ದಿನ ಇವತ್ತು. ವಿಶ್ವ ಮಾಧುರಿಯಾಗಿ, ವಿಶ್ವದ ಮಾಧುರಿಯಾಗಿ ಸಂವಿಧಾನ ನೀಡಿದಂತಹ ಬಾಬಾ ಸಾಹೇಬ್ ಅಂಬೇಡಿಕರ್ ಅವರು ಗಾಂಧೀಜಿ ಅವರು ಎಲ್ಲರು ಕೂಡ ಗೌರವವನ್ನು ಕೃತಜ್ಞತೆ ಸಲ್ಲಿಸುವಂತಹ ಈ ಕರ್ತವ್ಯ ನಮ್ಮ ಮೇಲೆ ಇದೆಯೆ.

565 ರಾಜ್ಯಗಳು ಸಮಸ್ಯೆಗಳು ಇದ್ದವು

565 ರಾಜ್ಯಗಳು ಸಮಸ್ಯೆಗಳು ಇದ್ದವು

ವಿಶ್ವದಲ್ಲಿ ಅತ್ಯಂತ ದೊಡ್ಡ ಸಂವಿಧಾನ ನಮ್ಮದು, ಅದು ಸಂವಿಧಾನ ಪಾಲಿಕೆ ಒಂದು ಬೃಹತ್ ಗ್ರಂಥ ಆಗಿದೆ, ಬೃಹತ್ ಗ್ರಂಥ ಆಗಿದೆ. ಸ್ವಸಂತ್ರ, ಸ್ವಾಸಂತ್ರ ನಂತರ ಭಾರತವು ಇವತ್ತು ಸುಮಾರು 565 ರಾಜ್ಯಗಳು ಸಮಸ್ಯೆಗಳು ಸಂಸ್ಥಾನಗಳು ಇದ್ದವು ಅವೆಲ್ಲ ಕೂಡ ಒಗ್ಗರಿಸಬೇಕಾದ್ರೆಗಿನ ಸಂವಿಧಾನ ರಚಿಸಬೇಕಾದ್ರೆಗಿನ ಬಹಳಷ್ಟು ಸುಲಭವಾದ ಕೆಲಸವಲ್ಲ, ಬಹಳಷ್ಟು ಕಷ್ಟವಾಗಿತ್ತು.

ವಲ್ಲಭಾಯ್ ಪಾಟೀಲರು

ವಲ್ಲಭಾಯ್ ಪಾಟೀಲರು

ಇಡೀ ದೇಶದಲ್ಲಿ ಐಕ್ಯತೆಗೋತ್ತರವಾಗಿ, ಭಾವೈಕ್ಯಗೋತ್ತರವಾಗಿ, ರಾಷ್ಟ್ರೀತತೆಗೋತ್ತರವಾಗಿ ನಾಂದಿ ಹಾಡಿದಂತಹ ಸರ್ದಾರ್ ವಲ್ಲಭಾಯ್ ಪಾಟೀಲರು ಸಂವಿಧಾನಕ್ಕೆ ಜಾರಿ ತರಲು ನಮಗೆ ನಿಜವಾದ ಹಕ್ಕು ಸಿಕ್ಕಿದೆ ಎಂಬ ಮಾತುಗಳನ್ನು ಹೇಳಬೇಕಾಗುತ್ತದೆ. ಇವತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಗಣರಾಜ್ಯ ಒಂದು ಎರಡು ಬಹಳಷ್ಟು ಪ್ರಮುಖ ಜನ್ರಿಂದ ಜನ್ರಿಗೋಸ್ಕರವಾಗಿ ಜನ್ರಿಗೋಸ್ಕರವಾಗಿ ಸ್ಥಾಪಿತವಾಗಿರುವಂತಹ ಈ ಪ್ರಜಾಪ್ರಭುತ್ವದ ಸರ್ಕಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬುನಾದಿ ಹಾಕಲು ಭಾರತ ಸಂವಿಧಾನ ಈಗ ನೀವೆಲ್ಲರುಗಳ ಕಾನೂನು ಇವತ್ತು ಎಲ್ಲ ರೀತಿಯಲ್ಲಿಯೂ ಒಂದೇ ಆಗಿವೆ.

ಉಗ್ರಾಣಿಗಳು ಉಡಾವಣೆ

ಉಗ್ರಾಣಿಗಳು ಉಡಾವಣೆ

ನಮ್ಮ ಭಾರತ ಸುಸಂತ್‌ಸಂಸ್ಕೃತ ದೇಶ. ಮಹಾತ್ಮ ಗಾಂಧೀಜಿ ಅವರು ಸ್ವರಾಜ್ಯ ನಂತರದಲ್ಲಿ ಸ್ವಾಸಂತ್ರ ಅಂತಕ್ಷಣನೇ ಸ್ವಂತಿಕೆಯಿಂದ ಬದುಕುವುದು ಎಂದು ಹೇಳಿದ ಮಾತು ಗಾಂಧೀಜಿ ಅವರದು. ಒಂದು ಬಾರಿ 104 ಉಗ್ರಾಣಿಗಳು ಯಶಸ್ವಿಯಾಗಿ ಉಡಾವಣೆ ಮಾಡಿ ಎಲ್ಲ ರೀತಿಯಲ್ಲಿ ಇವತ್ತು ದೇಶದಲ್ಲಿ ಹೆಮ್ಮೆ ಭಾರತ ಎನ್ನುವ ಮಾತನ್ನು ಹೇಳಬೇಕಾಗುತ್ತದೆ. ಇಡೀ ವಿಶ್ವದಲ್ಲಿ ಅತ್ಯಂತ ಇಂದು ಎಲ್ಲ ಎಂಜಿನಿಯರ್‌ಗಳು ಡಾಕ್ಟರ್‌ಗಳನ್ನು ಉತ್ಪಾದನೆ ಮಾಡುವಂತಹ ದೇಶ ಭಾರತ ಆಗಿದೆ, ಭಾರತ ಆಗಿದೆ, ಅದಕ್ಕೋಸ್ಕರ ಭಾರತದಲ್ಲಿ ಇದ್ದಂತಹ ಪ್ರತಿಯೊಬ್ಬ ಬಡವರಿಗೆ ಎಲ್ಲರ ರೀತಿ ಸುಲಭವಾಗಿ ಚಿಕಿತ್ಸೆ ನೀಡುವ ಕೆಲಸ ಆಗಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.

ಕನ್ನಡ ಕಲಿಯಿರಿ ಪುಸ್ತಕ

ಕನ್ನಡ ಕಲಿಯಿರಿ ಪುಸ್ತಕ

ಪ್ರತಿ ಬಾರಿಯೂ ತಪ್ಪಾಗಿ ಕನ್ನಡ ಉಚ್ಚರಿಸುವ ಶ್ರೀರಾಮುಲು ಅವರಿಗೆ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ, ತೆಲುಗಿನ ಮೂಲಕ ಕನ್ನಡ ಕಲಿಯುವುದು ಹೇಗೆ ಎಂಬ ಪುಸ್ತಕವನ್ನು ಕಳುಹಿಸಿದ್ದಾರೆ. 'ಲರ್ನ್ ಕನ್ನಡ ಥ್ರೂ ತೆಲುಗು' ಎಂಬ ಶೀರ್ಷಿಕೆಯ ಪುಸ್ತಕವನ್ನು ಅಮೇಜಾನ್ ಮೂಲಕ ಬಳ್ಳಾರಿಯಲ್ಲಿರುವ ಶ್ರೀರಾಮುಲು ಅವರ ನಿವಾಸಕ್ಕೆ ಕಳುಹಿಸಿರುವುದರ ಮಾಹಿತಿಯನ್ನು ಕವಿತಾ ರೆಡ್ಡಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಉಡುಗೊರೆ ಸ್ವೀಕರಿಸಿ

ಉಡುಗೊರೆ ಸ್ವೀಕರಿಸಿ

'ಗೌರವಾನ್ವಿತ ಶ್ರೀರಾಮುಲು ಅಣ್ಣ, ನನಗೆ ಕನ್ನಡದ ಬಗ್ಗೆ ಬಹಳ ಕಾಳಜಿ ಇದೆ. ಅದಕ್ಕಾಗಿ ನಿಮಗೆ 'ತೆಲುಗಿನ ಮೂಲಕ ಕನ್ನಡ ಕಲಿಯಿರಿ' ಪುಸ್ತಕವನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ. ಇದರಿಂದ ಕನಿಷ್ಠ ಆಗಸ್ಟ್ 15ರ ನಿಮ್ಮ ಭಾಷಣ ಸಂದರ್ಭದಲ್ಲಿಯಾದರೂ ನೀವು ಕನ್ನಡದ ಕೊಲೆ ಮಾಡುವುದನ್ನು ತಡೆಯಬಹುದು. ದಯವಿಟ್ಟು ನನ್ನ ವಿನಯದ ಕಾಣಿಕೆಯನ್ನು ಸ್ವೀಕರಿಸಿ. ಕುಮಾರಣ್ಣ ಅವರಿಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವ ಮೊದಲು ಕನ್ನಡ ಕಲಿಯಿರಿ' ಎಂದು ಕವಿತಾ ರೆಡ್ಡಿ ವ್ಯಂಗ್ಯವಾಡಿದ್ದಾರೆ.

English summary
People criticised minister Sriramulu for wrong Kannada pronunciation in Raichur during Republic Day program on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X