ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿ ನಿಷ್ಕಳಂಕರಾಗಿ ಸಿಬಿಐ ಪ್ರಕರಣದಿಂದ ಹೊರ ಬರಲಿ: ಸಚಿವ ಈಶ್ವರಪ್ಪ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಅಕ್ಟೋಬರ್ 7: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಮಾಡಿದಾಗ ಅಕ್ರಮ ಹಣ ಸಿಕ್ಕಿದೆ. ಡಿ.ಕೆ ಶಿವಕುಮಾರ್ ತಪ್ಪು ಮಾಡಿಲ್ಲವೆಂದರೆ ನಿಷ್ಕಳಂಕರಾಗಿ ಈ ಪ್ರಕರಣದಿಂದ ಹೊರಗೆ ಬರಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ಚರಪ್ಪ ಹೇಳಿದ್ದಾರೆ.

ರಾಯಚೂರಿನಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಪರ ಪ್ರಚಾರ ಸಭೆ ಬಳಿಕ, ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಕುರಿತು ಮಾತನಾಡಿದರು. ಈ ಹಿಂದೆ ದಾಳಿಯಾದಾಗ ಹಲವು ದಾಖಲೆಗಳು ಸಿಕ್ಕಿದ್ದರಿಂದ ಡಿಕೆಶಿ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಸಚಿವ ಈಶ್ವರಪ್ಪ ಹೇಳಿದರು.

ಸಿಎಂ ಯಡಿಯೂರಪ್ಪನವರು ಜೈಲಿಗೆ ಹೋಗಿ ತಪ್ಪಿತಸ್ಥರಲ್ಲ ಎಂದು ಸಾಬೀತಾಗಿ ಹೊರಬಂದರು. ಡಿ.ಕೆ ಶಿವಕುಮಾರ್ ಕೂಡಾ ಹಾಗೆಯೇ ಹೊರಬರಲಿ. ಉಪ್ಪು ತಿಂದವರು ನೀರು ಕುಡಿಯಬೇಕಲ್ಲವೇ ಎಂದರು.

Raichur: Minister KS Eshwarappa Reacted About CBI Raids On DK Shivakumars Home

ಇನ್ನು ವಾಲ್ಮೀಕಿ ಜನಾಂಗಕ್ಕೆ ಶೇ7.5 ರಷ್ಟು ಮೀಸಲಾತಿ ನೀಡುವ ವಿಚಾರದ ಬಗ್ಗೆ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲೂ ಕುರುಬರನ್ನು ಎಸ್ಟಿ ಗೆ ಸೇರಿಸುವ ವಿಚಾರದ ಕುರಿತು ಚರ್ಚೆ ನಡೆಯುತ್ತಿದೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಕಸಿದುಕೊಳ್ಳುವುದಿಲ್ಲ. ಹಿಂದುಳಿದ ಸಮಾಜಕ್ಕೆ ಎಸ್ಟಿ ಗೆ ಸೇರಿಸಬೇಕು ಎಂಬ ಕೂಗಿಗೆ ನನ್ನ ಬೆಂಬಲವಿದೆ. ಒಂದು ಪಾಯಿಂಟ್ ಮೀಸಲಾತಿಯೂ ವಾಲ್ಮೀಕಿ ಸಮಾಜದಿಂದ ಕಿತ್ತುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.

Raichur: Minister KS Eshwarappa Reacted About CBI Raids On DK Shivakumars Home

Recommended Video

Political Popcorn with Lavanya : Satish Jarkiholi, ರಾಗಿ ಮುದ್ದೆ ಗು ಸೈ ಜೋಳದ ರೊಟ್ಟಿಗೆ ಜೈ | part 02

ಮಾಸ್ಕ್ ಧರಿಸುವ ಮಹತ್ವ ತಿಳಿಸಲು ದಂಡ ಹೆಚ್ಚಿಗೆ ಮಾಡಲಾಗಿತ್ತು, ಆದರೆ ಜನರು ದಂಡ ಇಳಿಕೆಗೆ ಆಗ್ರಹಿಸಿದರು. ಹೀಗಾಗಿ ದಂಡದ ಪ್ರಮಾಣ ಇಳಿಸಲಾಗಿದೆ. ಮಾಸ್ಕ್ ಹಾಕದಿದ್ದರೆ 250 ರೂ. ಕೊಡುವುದು ಮುಖ್ಯವಲ್ಲ, ಜೀವ ಮುಖ್ಯ. ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದೆ ಎಂದು ಸಚಿವ ಈಶ್ವರಪ್ಪ ರಾಯಚೂರಿಲ್ಲಿ ಹೇಳಿದರು.

English summary
Minister KS Eshwarappa Reaction about CBI Raids On KPCC President DK Shivakumar's House.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X